ಕಠಿಣ ಪರಿಶ್ರಮ ಪ್ರಾಮಾಣಿಕತೆಯಿದ್ದರೆ ಯಶಸ್ಸು ಸಾಧ್ಯ; ಬೊಮ್ಮಾಯಿ

blank

ರಾಣೆಬೆನ್ನೂರ: ದುಡಿಮೆಯಲ್ಲಿ ಕಠಿಣ ಪರಿಶ್ರಮ ಹಾಗೂ ಪ್ರಾಮಾಣಿಕತೆಯಿದ್ದರೆ ಯಶಸ್ಸು ಗಳಿಸಲು ಸಾಧ್ಯವಿದೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ತಾಲೂಕಿನ ಕಮದೋಡ ಹತ್ತಿರದಲ್ಲಿ ಜಿ.ಪಂ. ಮಾಜಿ ಸದಸ್ಯ ಸಂತೋಷಕುಮಾರ ಪಾಟೀಲ ಅವರು ನೂತನವಾಗಿ ಆರಂಭಿಸಿದ ವಿಂಡೋ ಕ್ರಾಪ್ಟ್​ ಕಂಪನಿಯನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಆಧುನಿಕವಾಗಿ ಕಿಟಕಿ ಹಾಗೂ ಬಾಗಿಲ ಚೌಕಟ್​ ತಯಾರಿಸುವ ಕಂಪನಿ ಈ ಭಾಗದಲ್ಲಿ ಆರಂಭ ಮಾಡುತ್ತಿರುವುದು ಸಂತಸ ವಿಷಯವಾಗಿದೆ. ಮೊದಲು ಮನೆ ಕಟ್ಟಲು ಕಟ್ಟಿಗೆಯನ್ನು ಬಳಕೆ ಮಾಡುತ್ತಿದ್ದರು. ಆದರೆ ಕಾಲಕ್ರಮೇಣ ಕಾಡು ಕಡಿಮೆಯಾಗುತ್ತಿದ್ದು, ಮನುಷ್ಯ ಹಲವಾರು ಆರೋಗ್ಯದ ಸಮಸ್ಯೆ ಎದುರಿಬೇಕಾಗಿದೆ. ಹೀಗಾಗಿ ಬೇರೆ ವಸ್ತುಗಳ ಬಳಕೆ ಮಾಡಿಕೊಂಡು ಮನೆ ನಿಮಾರ್ಣ ಮಾಡಬೇಕಾಗಿದೆ. ಮುಂದಿನ ದಿನಗಳಲ್ಲಿ ಇವುಗಳ ಕ್ರಮೇಣ ಸಂಖ್ಯೆ ಹೆಚ್ಚಾಗುತ್ತದೆ ಎಂದರು.
ಜಿ.ಪಂ. ಮಾಜಿ ಸದಸ್ಯ ಸಂತೋಷಕುಮಾರ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಪ್ರಮುಖರಾದ ಎಚ್​.ಎಸ್​. ಶಿವಶಂಕರ, ಅಜಯ ಬಿ.ಜಿ., ಭರತ ಬೊಮ್ಮಾಯಿ, ವಿರುಪಾಕ್ಷಪ್ಪ ಬಳ್ಳಾರಿ, ಎಸ್​.ಎಸ್​. ರಾಮಲಿಂಗಣ್ಣನವರ, ಕೆ. ಶಿವಲಿಂಗಪ್ಪ, ಡಾ. ಶೋಭಾ ನಿಸ್ಸಿಮಗೌಡ್ರ, ಚೋಳಪ್ಪ ಕಸವಾಳ, ಶಿವಕುಮಾರ ಮುದ್ದಪ್ಪಳವರ, ಎನ್​.ಜಿ.ನಾಗನಗೌಡ್ರ ಮತ್ತಿತರರು ಉಪಸ್ಥಿತರಿದ್ದರು.

blank
Share This Article
blank

ನಿಮ್ಮ ಬೆಳಿಗ್ಗೆಯನ್ನು ಹೀಗೆ ಆರಂಭಿಸಿ.. ಈ ಅಭ್ಯಾಸಗಳು ನಿಮ್ಮ ಜೀವನವನ್ನು ಬದಲಾಯಿಸುತ್ತವೆ..! healthy morning

healthy morning: ನಾವು ನಮ್ಮ ಬೆಳಿಗ್ಗೆಯನ್ನು ಹೇಗೆ ಪ್ರಾರಂಭಿಸುತ್ತೇವೆ ಎಂಬುದು ದಿನವಿಡೀ ನಮ್ಮ ಆಲೋಚನೆಗಳು ಮತ್ತು…

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…

blank