ಕಾನಹೊಸಹಳ್ಳಿ: ವಿದ್ಯಾರ್ಥಿಗಳು ಕಠಿಣ ಪರಿಶ್ರಮಪಟ್ಟರೆ ಖಂಡಿತವಾಗಿಯೂ ಏನನ್ನಾದರೂ ಸಾಧಿಸಲು ಸಾಧ್ಯ ಎಂದು ಕೊಟ್ಟೂರು ತಹಸೀಲ್ದಾರ್ ಅಮರೇಶ ತಿಳಿಸಿದರು.
ಸ್ಥಳೀಯ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಶನಿವಾರ 10ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಮತ್ತು ಶಾರದಾ ಪೂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಾನು ಅತ್ಯಂತ ಹಿಂದುಳಿದ ತಾಲೂಕಿನ ಪುಟ್ಟ ಹಳ್ಳಿಯಿಂದ ಬಂದವನು.
ಲಸೌಲಭ್ಯಗಳ ಕೊರತೆ ನಡುವೆಯೇ ನಿರಂತರ ಅಧ್ಯಯನ ಮಾಡಿ ನಾಲ್ಕೈದು ಸರ್ಕಾರಿ ನೌಕರಿ ಪಡೆದುಕೊಂಡೆ. ಕಾನಹೊಸಹಳ್ಳಿ ಠಾಣೆಯಲ್ಲಿ ಪಿಎಸೈ ಅಗಿ ಕರ್ತವ್ಯ ನಿರ್ವಹಿಸಿದೆ. ಈ ವೇಳೆ ಕೆಎಎಸ್ ಪಾಸ್ ಮಾಡಿದೆ. ಸದ್ಯ ಕೊಟ್ಟೂರಿನಲ್ಲಿ ತಹಸೀಲ್ದಾರ್ ಅಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಕಠಿಣ ಪರಿಶ್ರಮ ಪಟ್ಟರೆ ಖಂಡಿತವಾಗಿ ಏನನ್ನು ಬೇಕಾದರೂ ಸಾಧಿಸಬಹುದು. ಅದರಲ್ಲೂ ಈಗ ಸರ್ಕಾರಿ ಅಧಿಕಾರಿ ಆಗಿರುವುದರಿಂದ ದೀನ-ದಲಿತರ, ನೊಂದವರ ಸೇವೆ ಮಾಡಲು ಸ್ಫೂರ್ತಿ ಬಂದಿದೆ ಎಂದರು.
ವಿಜಯಪುರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ರಾಮಚಂದ್ರಪ್ಪ ಮಾತನಾಡಿ, ನಾವು ಚಿಕ್ಕವರಿದ್ದಾಗ ಯಾವುದೇ ಅಗತ್ಯ ಸೌಲಭ್ಯಗಳು ಇರಲಿಲ.್ಲ ಕೊರತೆ ನಡುವೆ ಉನ್ನತ ವ್ಯಾಸಂಗ ಮಾಡಿ ಜಿಲ್ಲಾ ಮಟ್ಟದ ಅಧಿಕಾರಿಯಾಗಿರುವೆ. ಆದರೆ, ಇವತ್ತಿನ ವಿದ್ಯಾರ್ಥಿಗಳಿಗೆ ಸಾಕಷ್ಟು ಸೌಲಭ್ಯಗಳು ಇವೆ. ಹಾಸ್ಟೆಲ್ ವಿದ್ಯಾರ್ಥಿಗಳು ಸೌಲಭ್ಯ ಸದುಪಯೋಗ ಪಡಿಸಿಕೊಂಡು ಬದುಕಿನಲ್ಲಿ ಯಶಸ್ಸು ಪಡೆಯಬೇಕು ಎಂದರು.
ಗ್ರಾಪಂ ಅಧ್ಯಕ್ಷ ಸಿದ್ದನಗೌಡ, ಪ್ರಮುಖರಾದ ನಿಂಗಪ್ಪ, ಮನೋಹರ್, ವೀರೇಶ, ಸದಸ್ಯ ಪಿತಾಂಬರ್, ನಿಲಯ ಪಾಲಕ ರಾಚಯ್ಯ, ಬಸವರಾಜ, ಕುಮಾರಸ್ವಾಮಿ, ಅಂಜನಪ್ಪ, ಮೋಹನ್, ಪ್ರವೀಣ್ ಗೌಡ ಪಟೇಲ್, ಶಿಲ್ಪಾ, ಶ್ವೇತಾ, ಸಿಬ್ಬಂದಿ ಪ್ರದೀಪ್, ತಿಮ್ಮಣ್ಣ, ಪ್ರಕಾಶ, ಮಹಮ್ಮದ್, ನಾಗೇಶ್, ಕೃಷ್ಣಮೂರ್ತಿ, ರಾಧಾ, ಮಲ್ಲಮ್ಮ, ಕಿರಣ, ತಾಲೂಕು ನೀರುಗಂಟಿ ನೌಕರರ ಸಂಘದ ಅಧ್ಯಕ್ಷ ತಿಪ್ಪೇಶ, ಹಜ್ಮತುಲ್ಲ, ರಜನಿಕಾಂತ್, ಚಂದ್ರಶೇಖರ ಇತರರಿದ್ದರು.