ಚೆನ್ನೈ: ಖ್ಯಾತ ಆಫ್ ಸ್ಪಿನರ್ ಹರ್ಭಜನ್ ಸಿಂಗ್ ಮೊದಲ ಬಾರಿಗೆ ತಮಿಳು ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕರಾಗಿ ನಟಿಸುತ್ತಿದ್ದಾರೆ.
ಫ್ರೆಂಡ್ ಶಿಫ್ ಹೆಸರಿನ ಚಿತ್ರದಲ್ಲಿ ಅವರು ನಟಿಸುತ್ತಿದ್ದು, ಚಿತ್ರದ ಮೊದಲ ಪೋಸ್ಟರ್ ಸೋಮವಾರ ಬಿಡುಗಡೆಯಾಗಿದೆ. ಪೋಸ್ಟರ್ ಬಿಡುಗಡೆಯಾದ ವಿಷಯವನ್ನು ಚಿತ್ರ ವಿಮರ್ಶಕ ರಮೇಶ್ ಬಾಲಾ ಖಚಿತಪಡಿಸಿದ್ದಾರೆ. ಅಲ್ಲದೆ ತಮ್ಮ ಟ್ವೀಟರ್ನಲ್ಲಿ ಪೋಸ್ಟರ್ ಹಂಚಿಕೆ ಮಾಡಿದ್ದಾರೆ.
ಇದಕ್ಕೂ ಮೊದಲು ಅವರು ಚಿತ್ರವೊಂದರಲ್ಲಿ ಅತಿಥಿ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರನೊಬ್ಬ ಪೂರ್ಣ ಪ್ರಮಾಣದ ನಾಯಕರಾಗಿ ನಟಿಸುತ್ತಿರುವುದು ಇತಿಹಾಸದಲ್ಲೇ ಮೊದಲಾಗಿದೆ. (ದಿಗ್ವಿಜಯ ನ್ಯೂಸ್)