ನವದೆಹಲಿ: ಭಾರತ ತಂಡದ ಮಾಜಿ ಕ್ಯಾಪ್ಟನ್ ಎಂ.ಎಸ್.ಧೋನಿ ಜತೆ ನಾನು ಮಾತನಾಡುವುದಿಲ್ಲ ಎಂದು ಸ್ಪಿನ್ನರ್ ಹರ್ಭಜನ್(Harbhajan Singh) ಸಿಂಗ್ ಶಾಕಿಂಗ್ ಹೇಳಿಕೆವೊಂದನ್ನು ನೀಡಿದ್ದಾರೆ.
ಈ ಕುರಿತು ಖಾಸಗಿ ಮಾಧ್ಯಮವೊಂದರಲ್ಲಿ ಭಜ್ಜಿ ಮಾತನಾಡಿದ್ದಾರೆ. ಸಂದರ್ಶಕರೊಬ್ಬರು, ನಿಮ್ಮ ಬಳಿ ಯಾರ ನಂಬರ್ಗಳಿವೆ ಎಂದು ಕೇಳಿದಾಗ, ನನ್ನ ಬಳಿ ಬಹುತೇಕ ಎಲ್ಲಾ ಆಟಗಾರರ ನಂಬರ್ ಇದೆ. ಯುವರಾಜ್ ಸಿಂಗ್ ಮತ್ತು ನೆಹ್ರಾ ಜತೆ ಹೆಚ್ಚಾಗಿ ಮಾತನಾಡುತ್ತೇನೆ ಎಂದಿದ್ದಾರೆ. ಮುಂದುವರಿಸಿದ ಸಂದರ್ಶಕ, ಧೋನಿ ಜತೆ ಸಂಬಂಧ ಹೇಳಿ ಎಂದು ಪ್ರಶ್ನಿಸಿದಾಗ, ”ಎಂ.ಎಸ್. ಧೋನಿ ಅವರು ನನ್ನ ವಿರೋಧಿಯಲ್ಲ. ಆದರೆ, ನಾನು ಧೋನಿ ಜತೆ ಮಾತನಾಡುವುದಿಲ್ಲ, ಸಿಎಸ್ಕೆ ಟೀಮ್ನಲ್ಲಿದ್ದಾಗ ಮಾತ್ರ ಮಾತನಾಡಿದ್ದೇವೆ. ಅದು ಕೂಡ ಆಟಕ್ಕೆ ಮತ್ತು ಮೈದಾನಕ್ಕೆ ಸೀಮಿತ. ಅವರು ಡ್ರೆಸ್ಸಿಂಗ್ ರೂಮ್ಗೆ ಕೂಡ ನಾನು ಎಂದು ಹೋಗಿಲ್ಲ” ಎಂದಿದ್ದಾರೆ.
ಇದನ್ನೂ ಓದಿ: Iconic Baggy Green Cap: 10 ನಿಮಿಷಗಳಲ್ಲಿ 2.63 ಕೋಟಿ ರೂ. ಹರಾಜು ಆಯ್ತು ಕ್ರಿಕೆಟ್ ದಿಗ್ಗಜ ಧರಿಸಿದ್ದ ಕ್ಯಾಪ್
ಇದಕ್ಕೆ ಕಾರಣ ಏನಿರಬಹುದು ಎಂದು ಸಂದರ್ಶಕ ಕೇಳಿದಾಗ ” ಅವರ ವಿರುದ್ಧ ಯಾವುದೇ ಕಂಪ್ಲೇಟ್ ಇಲ್ಲ. ಅವರಿಗೆ ಏನಾದರೂ ಇರಬಹುದೇನೋ? ನನಗೆ ಅದು ಗೊತ್ತಿಲ್ಲ. ಅವರೂ ಮಾತನಾಡಿದರೂ ನಾನೇ ಹೆಚ್ಚಾಗಿ ಮಾತನಾಡಲ್ಲ. ಇದು ಈಗ ಮಾತ್ರ ಅಲ್ಲ ಬಹಳ ವರ್ಷಗಳಿಂದ ನಡಯುತ್ತಿದೆ. ಅಲ್ಲದೆ, 10 ವರ್ಷಗಳಿಂದ ನಾನು ಅವರ ಜತೆ ಫೋನ್ನಲ್ಲಿ ಕೂಡ ಮಾತನಾಡಿಲ್ಲ. ಅವರು (ಧೋನಿ) ನನ್ನ ಬಗ್ಗೆ ಎನಾದರೂ ಹೇಳಲಿ ಎಂದಿರುವ ಹರ್ಭಜನ್, ಇದು ಕ್ರಿಕೆಟ್ ವೃತ್ತಿ ಜೀವನದಲ್ಲಿ ಸಾಮಾನ್ಯ ತಂಡ ಗೆಲ್ಲಬೇಕು ಅಷ್ಟೇ ಎಂದು ಭಜ್ಜಿ ಹೇಳಿದ್ದು, ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಜ್ಜಿ ಹೇಳಿಕೆ ವೈರಲ್ ಆಗುತ್ತಿದೆ.
ಹರ್ಭಜನ್ಸಿಂಗ್ ಮತ್ತು ಧೋನಿ ಇಬ್ಬರೂ 2007ರ ಟಿ 20 ವಿಶ್ವಕಪ್ ಮತ್ತು 2011ರ ವಿಶ್ವಕಪ್ನಲ್ಲಿ ಆಡಿದ್ದಾರೆ. ಅಲ್ಲದೇ, ಈ ಎರಡು ವಿಶ್ವಕಪ್ಗಳಲ್ಲಿ ಇಬ್ಬರು ತಂಡದ ಅವಿಭಾಜ್ಯ ಅಂಗಗಳಾಗಿದ್ದರು. ಇಬ್ಬರು 2015ರ ವಿಶ್ವಕಪ್ನಲ್ಲಿ ಕೊನೆಯ ಬಾರಿ ಭಾರತವನ್ನು ಪ್ರತಿನಿಧಿಸಿದ್ದರು. ಬಳಿಕ ಭಜ್ಜಿ ಮತ್ತು ಯುವರಾಜ್ ಸಿಂಗ್ ಭಾರತ ತಂಡದಿಂದ ಹೊರಗುಳಿದ್ದರು. 2015ರ ನಂತರ ಭಜ್ಜಿ ಆಡಿದರೂ 2021ರಲ್ಲಿ ಎಲ್ಲಾ ರೀತಿಯ ಕ್ರಿಕೆಟ್ನಿಂದ ವಿದಾಯ ಹೇಳಿದರು,(ಏಜೆನ್ಸೀಸ್).
Iconic Baggy Green Cap: 10 ನಿಮಿಷಗಳಲ್ಲಿ 2.63 ಕೋಟಿ ರೂ. ಹರಾಜು ಆಯ್ತು ಕ್ರಿಕೆಟ್ ದಿಗ್ಗಜ ಧರಿಸಿದ್ದ ಕ್ಯಾಪ್