ನಿವೃತ್ತಿ ತೆಗೆದುಕೊಳ್ಳಿ ಎಂದವನಿಗೆ ಭಜ್ಜಿ ಕೊಟ್ರು ಗೂಗ್ಲಿ ಉತ್ತರ…!

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರೀಯರಾಗಿರುವ ಟೀಂ ಇಂಡಿಯಾದ ಸ್ಪಿನ್ನರ್ ಹರ್ಭಜನ್​ ಸಿಂಗ್​​ ಹಲವು ವಿಚಾರಗಳ ಬಗ್ಗೆ ತಮ್ಮದೇ ರೀತಿಯಲ್ಲಿ ಧ್ವನಿಗೂಡಿಸುತ್ತಾರೆ. ಇಂತಹ ಆಟಗಾರನ ಬಗ್ಗೆ ಯಾರಾದರೂ ಕಮೆಂಟ್​ ಮಾಡಿದರೆ ಸುಮ್ಮನೇ ಬಿಡುವ ಜಾಯಮಾನ ಇವರದ್ದಲ್ಲ.

ಹೀಗೆ ಭಜ್ಜಿಯನ್ನು ಕೆಣುಕಿದ ವ್ಯಕ್ತಿಯೊಬ್ಬನಿಗೆ ಹರ್ಭಜನ್​ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಏನಾಯಿತು ಅಂದರೆ… ಟ್ವಿಟ್ಟರ್​ನಲ್ಲಿ ವ್ಯಕ್ತಿಯೊಬ್ಬ ಭಜ್ಜಿಗೆ ಟ್ವೀಟ್​ ಮಾಡಿದ್ದು, ನೀವು ಸಂತೋಷದಿಂದ ನಿವೃತ್ತಿಯನ್ನು ತೆಗೆದುಕೊಳ್ಳಿ, ಯಾಕೆಂದರೆ ಹಳೆಯ ನಾಯಿ ಹೊಸ ತಂತ್ರಗಳನ್ನು ಕಲಿಸಲು ಸಾಧ್ಯವಿಲ್ಲ. ನಿಮ್ಮ ಕಾಲ ಮುಗಿದಿದೆ ಎಂದು ಭಜ್ಜಿಯನ್ನು ಕೆರಳಿಸುವ ರೀತಿಯಲ್ಲಿ ಕಮೆಂಟ್​ ಮಾಡಿದ್ದಾನೆ.

ಇದರಿಂದ ರೊಚ್ಚಿಗೆದ್ದ ಭಜ್ಜಿ ಕಮೆಂಟ್​ ಮಾಡಿದವನಿಗೆ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ನಿನ್ನ ರೀತಿಯ ಹಳೆಯ ನಾಯಿಗೆ ಕೇವಲ ಬೊಗಳುವುದು ಮಾತ್ರ ಗೊತ್ತು. ಅದನ್ನೆ ಮುಂದುವರೆಸು, ನಿನ್ನ ಜೀವನ ಪೂರ್ತಿ ನೀ ಕಲಿತಿದ್ದು ಇದನ್ನೆ ಅಂತಾ ನಾನು ತಿಳಿದುಕೊಂಡಿದ್ದೇನೆ. ಪ್ರತಿದಿನ ಕಲಿಯುವುದಕ್ಕೆ ಹೊಸ ವಿಷಯ ಇದ್ದೇ ಇದೆ. ಆದರೆ ನಿನ್ನ ರೀತಿ ಯಾರಿಗೂ ಮಾರ್ಗದರ್ಶನ ಮಾಡಬೇಡ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಏನೇ ಆದರೂ… ಹರ್ಭಜನ್​ ಅಂತಾ ಉತ್ತಮ ಆಟಗಾರನಿಗೆ ಈ ರೀತಿ ಅನ್ನುವುದು ಸರಿಯಲ್ಲ. ಟೀಂ ಇಂಡಿಯಾಕ್ಕೆ ಇವರು ನೀಡಿರುವ ಕೊಡುಗೆ ಅಪಾರ ಎಂದು ಹೇಳಿದರೂ ತಪ್ಪಾಗಲಾರದು. 103 ಟೆಸ್ಟ್​ ಪಂದ್ಯಗಳನ್ನಾಡಿರುವ ಇವರು 417 ವಿಕೆಟ್​ ಕಬಳಿಸಿದ್ದು, 269 ಏಕದಿನ ಪಂದ್ಯಗಳಲ್ಲಿ 236 ವಿಕೆಟ್​ ಉರುಳಿಸಿರುವುದು ಗಮನೀಯವಾಗಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *