20 C
Bengaluru
Saturday, January 18, 2020

ಶಬರಿಮಲೆಗೆ ಯುವತಿಯರ ಪ್ರವೇಶ ಖಂಡಿಸಿ ಹರತಾಳ, ಹಿಂಸಾಚಾರ

Latest News

ತಲೆಯಲ್ಲಿ ಮೂರು, ಮುಖಕ್ಕೆ ಒಂದು ಬುಲೆಟ್​ ಹೊಕ್ಕಿ ಗಾಯಗೊಂಡರೂ 7 ಕಿ.ಮೀ. ಚಲಿಸಿ ದೂರು ದಾಖಲಿಸಿದ ಮಹಿಳೆ!

ಚಂಡೀಗಢ: ತಲೆಯಲ್ಲಿ ಮೂರು ಹಾಗೂ ಮುಖಕ್ಕೆ ಒಂದು ಬುಲೆಟ್​ ಹೊಕ್ಕು ಗಾಯಗೊಂಡರೂ ಸುಮಾರು 7 ಕಿ.ಮೀ. ಚಲಿಸಿ ಮಹಿಳೆಯೊಬ್ಬಳು ಜಮೀನು ಕಸಿದ ಪ್ರಕರಣದಡಿಯಲ್ಲಿ...

ಮನೆಗೆ ಮರಳುವಾಗ ನಾಪತ್ತೆಯಾಗಿದ್ದ ಭಾರತೀಯ ಮೂಲದ ಮಹಿಳೆ ತನ್ನ ಕಾರಿನ ಟ್ರಂಕ್​ನಲ್ಲೇ ಶವವಾಗಿ ಪತ್ತೆ

ವಾಷಿಂಗ್ಟನ್​: ಕಳೆದ ತಿಂಗಳು ಮನೆಗೆ ಮರಳುತ್ತಿದ್ದವಳು ನಾಪತ್ತೆಯಾಗಿದ್ದಾಳೆ ಎಂದು ಕುಟುಂಬದವರು ದೂರು ದಾಖಲಿಸಿದ್ದ ಭಾರತೀಯ ಮೂಲದ ಅಮೆರಿಕ ಮಹಿಳೆ ತನ್ನ ಕಾರಿನ ಟ್ರಂಕ್​ನಲ್ಲಿ...

ಡಿ.14ರಿಂದ ತಲಕಾಡು ಪಂಚಲಿಂಗ ದರ್ಶನ

ತಲಕಾಡು: ಡಿಸೆಂಬರ್ 14ರಿಂದ ಹತ್ತು ದಿನಗಳ ಕಾಲ ತಲಕಾಡಿನಲ್ಲಿ ನಡೆಯಲಿರುವ ವಿಶ್ವಪ್ರಸಿದ್ಧ ಪಂಚಲಿಂಗ ದರ್ಶನ ಮಹೋತ್ಸವವನ್ನು ಅಚ್ಚುಕಟ್ಟಾಗಿ ನೆರವೇರಿಸಲು ಜಿಲ್ಲಾಡಳಿತ ವತಿಯಿಂದ ಅಗತ್ಯ...

ಕಿಡ್ನಿ ಕಸಿಗೆ ನೆರವು ನೀಡಲು ಯುವಕನ ಮನವಿ

ವಿಜಯವಾಣಿ ಸುದ್ದಿಜಾಲ ಮಂಡ್ಯ ಎರಡೂ ಕಿಡ್ನಿಗಳ ವೈಫಲ್ಯದಿಂದ ಬಳಲುತ್ತಿರುವ ಯುವಕ ನೆರವಿಗೆ ಮನವಿ ಮಾಡಿದ್ದಾನೆ.ತಾಲೂಕಿನ ಕೊತ್ತತ್ತಿ ಗ್ರಾಮದ ವಿನೋದ್‌ಕುಮಾರ್(28) ಎರಡೂ ಕಿಡ್ನಿ ವೈಫಲ್ಯದಿಂದ...

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ ಮಿಸ್​ ಮಾಡಿಕೊಂಡ್ರೆ ನಿಮಗೆ ನಷ್ಟ!

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ...

ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಶಬರಿಮಲೆಗೆ ಯುವತಿಯರ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟ ಎಡರಂಗ ಸರ್ಕಾರದ ಕ್ರಮ ಖಂಡಿಸಿ ಕರೆ ನೀಡಿದ್ದ ರಾಜ್ಯ ಹರತಾಳದಲ್ಲಿ ವ್ಯಾಪಕ ಹಿಂಸಾಚಾರವಾಗಿದ್ದು, ಕಾಸರಗೋಡು ಜಿಲ್ಲೆಯಲ್ಲೂ ಹಲವೆಡೆ ಘರ್ಷಣೆ ನಡೆದಿದೆ.

ಶಬರಿಮಲೆ ಕ್ರಿಯಾ ಸಮಿತಿ ಗುರುವಾರ ರಾಜ್ಯಾದ್ಯಂತ ಹರತಾಳಕ್ಕೆ ಕರೆ ನೀಡಿತ್ತು. ಕರೆಗೆ ಸ್ಪಂದಿಸಿ ಕಾಸರಗೋಡು ಜಿಲ್ಲೆಯಲ್ಲಿ ಅಂಗಡಿಮುಂಗಟ್ಟುಗಳು ಸಂಪೂರ್ಣ ಮುಚ್ಚಿದ್ದು, ಕೆಎಸ್ಸಾರ್ಟಿಸಿ, ಖಾಸಗಿ ಬಸ್‌ಗಳು ರಸ್ತೆಗಿಳಿಯಲಿಲ್ಲ. ಖಾಸಗಿ ವಾಹನಗಳ ಸಂಚಾರಕ್ಕೂ ತಡೆಯೊಡ್ಡಲಾಯಿತು. ಹರತಾಳದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ, ಪೊಲೀಸರಿಂದ ಭದ್ರತೆ ಸಿಕ್ಕಿಲ್ಲ ಎಂಬ ಕಾರಣ ನೀಡಿ ಹರತಾಳ ಬೆಂಬಲಿಸಿತು.

ಅಲ್ಲಲ್ಲಿ ಘರ್ಷಣೆ-ದಾಳಿ:
ಕಾಸರಗೋಡು ನಗರ ಸಹಿತ ಜಿಲ್ಲೆಯಾದ್ಯಂತ ಬಿಜೆಪಿ ಮತ್ತು ಇತರ ಸಂಘಟನೆಗಳಿಂದ ಪ್ರತಿಭಟನಾ ಮೆರವಣಿಗೆ ನಡೆಯಿತು. ಕಾಸರಗೋಡು ನಗರದಲ್ಲಿ ನಡೆದ ಮೆರವಣಿಗೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ. ಶ್ರೀಕಾಂತ್, ಪಿ.ರಮೇಶ್, ಶಬರಿಮಲೆ ಕ್ರಿಯಾ ಸಮಿತಿ ಮುಖಂಡ ಸುಧಾಮ ಗೋಸಾಡ ಸಹಿತ ನೂರಾರು ಮಂದಿ ಪಾಲ್ಗೊಂಡಿದ್ದರು.

ನೀಲೇಶ್ವರ ವಟ್ಟಪೊಯಿಲ್ ಎಂಬಲ್ಲಿ ಬಿಜೆಪಿ ಕಚೇರಿಯನ್ನು ಬುಧವಾರ ತಡರಾತ್ರಿ ಕಿಡಿಗೇಡಿಗಳ ತಂಡ ಧ್ವಂಸಗೊಳಿಸಿದೆ. ನೀಲೇಶ್ವರದ ಸಿಪಿಎಂ ಕಚೇರಿಗೂ ದಾಳಿ ನಡೆದಿದೆ. ಸಿಪಿಎಂ ಮುಖಂಡರ ಮನೆಗಳಗೆ ಮೇಲೆ ಕಲ್ಲು ತೂರಲಾಗಿದೆ. ಕಾಸರಗೋಡು ನಗರದಲ್ಲಿ ಹರತಾಳ ಬೆಂಬಲಿಗರು ಕೆಲವು ವ್ಯಾಪಾರಿ ಸಂಸ್ಥೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ಹೊಸದುರ್ಗ ಪೂಚಕ್ಕಾಡ್‌ನಲ್ಲಿ ವಿಹಿಂಪ ಮುಖಂಡ ಜಯಕುಮಾರ್ ಮನೆ ಎದುರು ಪುಷ್ಪಚಕ್ರ ಇರಿಸಿ ಅಣಕು ಶ್ರದ್ಧಾಂಜಲಿ ಸಲ್ಲಿಸಿ, ಬೆದರಿಕೆ ಪತ್ರ ಇರಿಸಲಾಗಿದೆ. ಇದು ಸಿಪಿಎಂ ಕೃತ್ಯ ಎಂದು ಬಿಜೆಪಿ ದೂರಿದೆ.

ಬಂದ್ಯೋಡಿನಲ್ಲಿ ಅಯ್ಯಪ್ಪ ನಾಮಜಪ ಪ್ರತಿಭಟನೆ ಆರಂಭಗೊಂಡಾಗ ಬೈಕ್-ಆಟೋಗಳಲ್ಲಿ ಬಂದ 50ಕ್ಕೂ ಅಧಿಕ ಮಂದಿ ಪ್ರತಿಭಟನಾ ನಿರತರ ಮೇಲೆ ವಾಹನ ಚಲಾಯಿಸಲು ಯತ್ನಿಸಿದಾಗ ಘರ್ಷಣೆ ನಡೆಯಿತು. ಈ ಸಂದರ್ಭ ಎರಡು ಆಟೋ, ಬೈಕ್ ಬೆಂಕಿಗಾಹುತಿಯಾಗಿದೆ. ಹಲವು ಅಂಗಡಿಗಳು ಧ್ವಂಸಗೊಂಡಿವೆ. ಕುಂಬಳೆ-ಮಂಜೇಶ್ವರ ಪೊಲೀಸರು ಲಾಠಿಚಾರ್ಜ್ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಬದಿಯಡ್ಕ ನೀರ್ಚಾಲು ಸಮೀಪದ ಕಡಂಬಳ ಡಿವೈಎಫ್‌ಐ ಕಚೇರಿಗೆ ಕರಿ ಆಯಿಲ್ ಸಿಂಪಡಿಸಲಾಗಿದೆ. ಮಂಜೇಶ್ವರದಲ್ಲಿ ರಸ್ತೆ ಮಧ್ಯೆ ಟೈರು ಸುಡುವುದನ್ನು ಪ್ರಶ್ನಿಸಿದ ಯುವಕ ಇಮ್ತಿಯಾಜ್(29) ಎಂಬಾತನಿಗೆ ಪ್ರತಿಭಟನಾಕಾರರು ಕಬ್ಬಿಣದ ರಾಡ್‌ನಲ್ಲಿ ಹಲ್ಲೆ ಮಾಡಿದ್ದು, ಯುವಕ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.

ಪೈವಳಿಕೆ ಸಮೀಪದ ಬಾಯಾರಪದವು ಮುಳಿಗದ್ದೆಯ ಜಾರಂ ದರ್ಗಾ ಸಮೀಪ ಕಲ್ಲು ತೂರಾಟ ವೇಳೆ ಉಸ್ತಾದ್ ಅಬ್ದುಲ್ ಕರೀಂ ತಲೆಗೆ ಗಂಭೀರ ಗಾಯವಾಗಿದೆ.

ತಲಪಾಡಿಯಲ್ಲಿ ಕಿಡಿಗೇಡಿಗಳ ಗುಂಪೊಂದು ಮದುವೆ ಸಮಾರಂಭಕ್ಕೆ ಆಗಮಿಸುತ್ತಿದ್ದ ಮಹಿಳೆಯರಿಗೆ ಹಾಗೂ ರಿಕ್ಷಾ ಚಾಲಕನಿಗೆ ಹಲ್ಲೆ ಮಾಡಿದೆ. ಕಾಜೂರಿನ ಕುಟುಂಬವೊಂದು ಸಂಚರಿಸುತ್ತಿದ್ದ ಕಾರಿಗೆ ತಲಪಾಡಿಯಲ್ಲಿ ಕಲ್ಲೆಸೆಯಲಾಗಿದ್ದು, ಗಾಜು ಪುಡಿಯಾಗಿ ಕಾರಿನೊಳಗಿದ್ದ ಮಗು ಗಾಯಗೊಂಡಿದೆ. ಮಂಜೇಶ್ವರದ ಗುಡ್ಡೆ ನಿವಾಸಿ ಮಜೀದ್ (35) ಎಂಬುವರು ಸ್ಕೂಟರ್‌ನಲ್ಲಿ ಸಂಚರಿಸುವಾಗ ಕಲ್ಲೆಸೆದು ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಕೇರಳದಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆ: ಶರಣ್ ಪಂಪ್‌ವೆಲ್ ಆಗ್ರಹ
ಮಂಗಳೂರು: ಶಬರಿಮಲೆ ಕ್ಷೇತ್ರದ ಪಾವಿತ್ರೃ ಉಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕು. ಕೇರಳ ಸರ್ಕಾರವನ್ನು ವಜಾಗೊಳಿಸಿ, ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು ಎಂದು ವಿಶ್ವ ಹಿಂದು ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಆಗ್ರಹಿಸಿದ್ದಾರೆ.

ಶಬರಿಮಲೆ ಕ್ಷೇತ್ರ ಸಂರಕ್ಷಣಾ ಸಮಿತಿ ವತಿಯಿಂದ ಗುರುವಾರ ಟೌನ್‌ಹಾಲ್ ಮುಂಭಾಗದ ಗಾಂಧಿ ಪ್ರತಿಮೆ ಬಳಿ ಆಯೋಜಿಸಲಾದ ಶಬರಿಮಲೆ ಉಳಿಸಿ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.

ಮೂರ್ತಿ ಪೂಜೆ ಮಾಡದವರು, ದೇವರನ್ನೇ ನಂಬದವರು ಅಯ್ಯಪ್ಪನ ದರ್ಶನ ಮಾಡುವುದರ ಹಿಂದಿನ ಅರ್ಥವೇನು ಎಂದು ಪ್ರಶ್ನಿಸಿದ ಅವರು, ಅಂತಾರಾಷ್ಟ್ರೀಯ ಮತಾಂತರದ ನಿಗೂಢ ವ್ಯೆಹ, ಕ್ರಿಶ್ಚಿಯನ್ ಮಿಷನರಿ, ಜಿಹಾದಿಗಳ, ಕಮ್ಯೂನಿಷ್ಟರ ಕೈವಾಡ ಇದರ ಹಿಂದಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಿಂದು ವಿರೋಧಿಗಳ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯ ಕಮ್ಯೂನಿಸ್ಟ್ ಮುಖಂಡರು ತಮ್ಮ ಮುಖ್ಯಮಂತ್ರಿಗೆ ಜಿಲ್ಲೆಯ ಅಯ್ಯಪ್ಪ ಭಕ್ತರು ಮಾಡುತ್ತಿರುವ ಹೋರಾಟದ ಕುರಿತು ತಿಳಿಸಬೇಕು. ಶಬರಿಮಲೆ ಕ್ಷೇತ್ರಕ್ಕೆ ನ್ಯಾಯ ಸಿಗುವವರೆಗೆ ಹೋರಾಟ ನಿಲ್ಲುವುದಿಲ್ಲ ಎಂದರು.

ಮಹಿಳೆಯರಾಗಿ ನಮಗೆ ಧಾರ್ಮಿಕ ವಿಚಾರದಲ್ಲಿ, ದೇವಸ್ಥಾನದ ಒಳಗೆ ಪ್ರವೇಶಿಸುವ ವಿಚಾರದಲ್ಲಿ ಸಮಾನತೆ ಬೇಡ. ಶಬರಿಮಲೆ ವಿಚಾರದಲ್ಲಿ ಕ್ಷೇತ್ರದ ಸಂಪ್ರದಾಯ ಕಾಪಾಡಲು ನಾವು ಸಿದ್ಧರಿದ್ದೇವೆ ಎಂದು ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ ಹೇಳಿದರು.

ಅಯ್ಯಪ್ಪ ಮಾಲಾಧಾರಿಗಳ ಪರವಾಗಿ ವಿಶ್ವನಾಥ ಗುರುಸ್ವಾಮಿ ಮಾತನಾಡಿದರು. ಶಾಸಕ ಡಾ.ವೈ.ಭರತ್ ಶೆಟ್ಟಿ, ವಿಧಾನ ಪರಿಷತ್ ಮಾಜಿ ಸದಸ್ಯ ಮೊನಪ್ಪ ಭಂಡಾರಿ, ಹಿಂದು ಜಾಗರಣ ವೇದಿಕೆ ವಿಭಾಗ ಅಧ್ಯಕ್ಷ ಕಿಶೋರ್ ಕುಮಾರ್, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಪೂಜಾ ಪೈ, ವಿಶ್ವಹಿಂದು ಪರಿಷತ್, ಬಜರಂಗದಳ ಕಾರ್ಯಕರ್ತರು, ಅಯ್ಯಪ್ಪ ಭಕ್ತರು, ಮಾಲಾಧಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಕೇರಳ ಕಮ್ಯುನಿಸ್ಟರ ವೈಚಾರಿಕ ದಾಳಿ
ಉಡುಪಿ: ಶಬರಿಮಲೆ ದೇವಸ್ಥಾನದ ಪರಂಪರೆ ಹಾಳುಗೆಡವಲು ಕೇರಳದ ಕಮ್ಯುನಿಸ್ಟ್ ಸರ್ಕಾರ ಯತ್ನಿಸುತ್ತಿದೆ. ದೇವರ ಮೇಲೆ ನಂಬಿಕೆಯೇ ಇಲ್ಲದ ಕಮ್ಯುನಿಸ್ಟರು ಶಬರಿಮಲೆ ದೇವಸ್ಥಾನದ ವಿಚಾರದಲ್ಲಿ ಮೂಗು ತೂರಿಸುತ್ತಿದ್ದಾರೆ. ಈ ವೈಚಾರಿಕ ದಾಳಿ ಹಿಂದೆ ಮತೀಯ ಶಕ್ತಿಗಳ ಕೈವಾಡವಿದ್ದು, ಸಂಘಟಿತ ಪ್ರಯತ್ನದ ಮೂಲಕ ಇದನ್ನು ತಡೆಯಬೇಕಿದೆ ಎಂದು ವಿಶ್ವ ಹಿಂದು ಪರಿಷತ್ ಪ್ರಾಂತ ಸಂಚಾಲಕ ಮಂಜುನಾಥ ಸ್ವಾಮಿ ಹೇಳಿದರು.

ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿರೋಧಿಸಿ ಶಬರಿಮಲೆ ಪಾವಿತ್ರ್ಯ ಉಳಿಸಿ ಹೋರಾಟ ಸಮಿತಿ ಆಶ್ರಯದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಅಜ್ಜರಕಾಡು ಹುತಾತ್ಮರ ಸ್ಮಾರಕದ ಬಳಿ ಗುರುವಾರ ಆಯೋಜಿಸಲಾದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಅಯ್ಯಪ್ಪ ಭಕ್ತರು ಸರ್ಕಾರಕ್ಕೆ ಮನವಿ ಮಾಡಿದರೂ ಗಮನ ಹರಿಸದೆ ಧಾರ್ಮಿಕ ನಂಬಿಕೆ ಘಾಸಿಗೊಳಿಸುವ ಉದ್ದೇಶದಿಂದಲೇ ತೀರ್ಪು ಜಾರಿಗೆ ಸರ್ಕಾರ ಕ್ರಮ ಕೈಗೊಂಡಿದೆ. ಕಮ್ಯುನಿಸ್ಟ್ ಸಿದ್ಧಾಂತ ಜಗತ್ತಿನಲ್ಲಿ ಸಂಪೂರ್ಣವಾಗಿ ನಾಶವಾಗಿದೆ. ಈಗ ಪಿಣರಾಯಿ ವಿಜಯನ್ ಮೂಲಕ ಜೀವಂತವಾಗಿಸುವ ಪ್ರಯತ್ನ ನಡೆಯುತ್ತಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಜಿಪಂ ಸದಸ್ಯೆ ಗೀತಾಂಜಲಿ ಸುವರ್ಣ, ನಗರಸಭಾ ಸದಸ್ಯೆ ಸುಮಿತ್ರಾ ನಾಯಕ್, ರಜನಿ ಹೆಬ್ಬಾರ್, ಬಜರಂಗದಳ ಪ್ರಾಂತ ಸಂಚಾಲಕ ಸುನೀಲ್ ಕೆ.ಆರ್, ಜಿಲ್ಲಾ ಸಂಚಾಲಕ ದಿನೇಶ್ ಮೆಂಡನ್, ವಿಲಾಸ್ ನಾಯಕ್, ಶ್ಯಾಮಲಾ ಕುಂದರ್, ವೀಣಾ ಶೆಟ್ಟಿ ಮತ್ತಿತರರಿದ್ದರು.

ರಾಜಕೀಯ ಮಾಡಲ್ಲವೆಂದ ರೈ
ಮಂಗಳೂರು: ಮಾಲೆ ಧರಿಸಿ, ವ್ರತ ಹಿಡಿದು ಅಯ್ಯಪ್ಪ ದೇವರ ಭಕ್ತಿ- ಶ್ರದ್ಧೆಯಿಂದ 18ಕ್ಕೂ ಅಧಿಕ ಬಾರಿ ನಾನು ಶಬರಿಮಲೆಗೆ ಹೋಗಿದ್ದೇನೆ. ಶಬರಿಮಲೆ ಹೆಸರಿನಲ್ಲಿ ರಾಜಕೀಯ ಮಾಡುವುದಿಲ್ಲ, ಇತರ ಸಾಧಕ ಬಾಧಕಗಳ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಸುದ್ದಿಗೋಷ್ಠಿಯಲ್ಲಿ ಹೇಳಿದರು. ದೇಶದ ವಿವಿಧೆಡೆಗಳಿಂದ ಭಕ್ತರು ಆಗಮಿಸುವ ಶಬರಿಮಲೆ ಪುಣ್ಯ ಕ್ಷೇತ್ರವೂ ಹೌದು. ಸೌಹಾರ್ದ ಕೇಂದ್ರವೂ ಹೌದು. ಎರಿಮಲೆಯ ಬಾಬರ ಸ್ವಾಮಿಯ ಕ್ಷೇತ್ರಕ್ಕೆ ಭೇಟಿ ನೀಡದ ಹೊರತು ಅಯ್ಯಪ್ಪನ ಸನ್ನಿದಾನ ದರ್ಶನ ಪೂರ್ಣಗೊಳ್ಳುವುದಿಲ್ಲ. ಇಂದು ಶಬರಿಮಲೆ ವಿಚಾರದಲ್ಲಿ ಹೋರಾಟ ನಡೆಸುತ್ತಿರುವ ನಾಯಕರು ಕೂಡ ಒಮ್ಮೆಯಾದರೂ ಶಬರಿಮಲೆ ದರ್ಶನ ಮಾಡಬೇಕು ಎಂದವರು ಸಲಹೆ ನೀಡಿದರು.

ಶಬರಿಮಲೆ ಸಂಪ್ರದಾಯ ಉಳಿಯಲೆಂದ ಖಾದರ್
ಮಂಗಳೂರು: ಶಬರಿಮಲೆ ವಿಚಾರದಲ್ಲಿ ಸಂಪ್ರದಾಯ, ಜನರ ಭಾವನೆ, ಆಚಾರ- ವಿಚಾರ, ಧಾರ್ಮಿಕ ಸಂಸ್ಕೃತಿ ಉಳಿಸಿಕೊಳ್ಳಬೇಕು. ಪ್ರತಿಯೊಂದು ಧಾರ್ಮಿಕ ಕೇಂದ್ರ ತನ್ನದೇ ಸಂಪ್ರದಾಯ ಹೊಂದಿದ್ದು, ಅದನ್ನು ಗೌರವಿಸಬೇಕು ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಸರ್ಕಾರಕ್ಕೆ ಶಬರಿಮಲೆಯ ಪಾವಿತ್ರೃದ ಕಾಳಜಿ ಇದ್ದಿದ್ದರೆ ಸುಗ್ರೀವಾಜ್ಞೆ ಹೊರಡಿಸಿ, ಪಾರ್ಲಿಮೆಂಟ್‌ನಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕಿತ್ತು. ಇಲ್ಲದಿದ್ದರೆ ಧಾರ್ಮಿಕ ಮುಖಂಡರನ್ನು ಕರೆಸಿ ಅವರ ಸಲಹೆ ಪಡೆದು ಸುಪ್ರೀಂಕೋರ್ಟ್‌ಗೆ ಸಂದೇಶ ರವಾನೆ ಮಾಡಬೇಕಿತ್ತು. ಬಿಜೆಪಿ ಸರ್ಕಾರ ಅದ್ಯಾವುದನ್ನೂ ಮಾಡದೆ ಉದ್ದೇಶಪೂರ್ವಕವಾಗಿ ಕೇರಳದಲ್ಲಿ ಗಲಭೆಗೆ ಅವಕಾಶ ಒದಗಿಸಿ ಸಮಸ್ಯೆ ಜೀವಂತವಾಗಿರಿಸಿ ಪರಿಸ್ಥಿತಿ ಲಾಭ ಪಡೆಯಲು ಯತ್ನಿಸುತ್ತಿದೆ. ಕೋರ್ಟ್ ತೀರ್ಪನ್ನು ರಾಜ್ಯ ಸರ್ಕಾರ ಪಾಲಿಸದೆ ವಿಧಿಯಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು. ಸಂಸದ ನಳಿನ್ ಕುಮಾರ್ ಕಟೀಲು ಸಂಸತ್‌ನಲ್ಲಿ ಈ ಬಗ್ಗೆ ಮಾತನಾಡದೆ ಇಲ್ಲೇಕೆ ಕೋಮು ದ್ವೇಷ ಹೆಚ್ಚಿಸುವ ಭಾಷಣ ಮಾಡುತ್ತಿದ್ದಾರೆ ಪ್ರಶ್ನಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶಿಸುವಂತೆ ಆಗ್ರಹಿಸಿದರು.

ಶಬರಿಮಲೆ ಆಚಾರ ರಕ್ಷಣೆಗೆ ಮಾಣಿಲ ಶ್ರೀ ಕರೆ
ವಿಟ್ಲ: ಶಬರಿಮಲೆ ಪುಣ್ಯ ಕ್ಷೇತ್ರದ ಆಚಾರ ವಿಚಾರಗಳು ವ್ಯವಸ್ಥಿತವಾಗಿ ನಡೆಯತಕ್ಕ ಕಾಲಘಟ್ಟದಲ್ಲಿ ಅದನ್ನು ಧಿಕ್ಕರಿಸುವ ಕಾರ್ಯ ಉತ್ತಮ ಬೆಳವಣಿಗೆಯಲ್ಲ ಎಂದು ಮಾಣಿಲ ಶ್ರೀಧಾಮ ಮಹಾಲಕ್ಷ್ಮೀ ಕ್ಷೇತ್ರದ ಮೋಹನದಾಸ ಪರಮಹಂಸ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದ್ದಾರೆ.

ಶಬರಿಮಲೆ ಯಾತ್ರೆಯಲ್ಲಿ 48 ದಿನಗಳ ಬ್ರಹ್ಮಚರ್ಯ ಪಾಲಿಸಬೇಕಾಗಿರುವುದು ಸಂಪ್ರದಾಯ. ಆದರೆ ಪರಿವರ್ತನೆಯ ಪರಿಸ್ಥಿತಿಗಳು ರಕ್ತಪಾತ, ಅಶಾಂತಿ, ದುರವಸ್ಥೆಗೆ ಕಾರಣವಾಗುವಂತೆ ಮಾಡುತ್ತಿದೆ. ಪುಣ್ಯ ಕ್ಷೇತ್ರದ ಪಾವಿತ್ರ್ಯ ಕಾಪಾಡಬೇಕಾದ ಅನಿವಾರ್ಯತೆ ಹಿಂದು ಸಮಾಜಕ್ಕೆ ಇದೆ. ಕ್ಷೇತ್ರಗಳ ನಿಯಮಗಳನ್ನು ತಪ್ಪಿಸುವುದರ ಪರಿಣಾಮ ದೇಶ ದುರಂತಗಳನ್ನು ಎದುರಿಸಬೇಕಾಗುತ್ತದೆ. ಸಮಾಜ ಜಾಗೃತವಾಗಿ ದುಸ್ಥಿತಿ ಸಂಭವಿಸದಂತೆ ಜಾಗರೂಕರಾಗಬೇಕು. ವ್ರತ ನಿಷ್ಠೆಯಲ್ಲಿ ಕಟ್ಟು ನಿಟ್ಟಿನ ಬದ್ಧತೆಯನ್ನು ಕಾಪಾಡಬೇಕು. ಸಮಾಜದಲ್ಲಿ ಅನರ್ಥಗಳು ಘಟಿಸದಂತೆ ಭಕ್ತರು ಮಾನಸಿಕವಾಗಿ ಸದೃಢವಾಗಿರಬೇಕು. ದುರ್ಘಟನೆ ಮರುಕಳಿಸದಂತೆ ಭಕ್ತ ವೃಂದ ಎಚ್ಚರ ವಹಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಂಟ್ವಾಳ ಸಿಪಿಐ ಕಚೇರಿಗೆ ಬೆಂಕಿ
ಬಂಟ್ವಾಳ: ಬೈಪಾಸ್‌ನಲ್ಲಿರುವ ಕಾ.ದಿ.ಎ.ಶಾಂತಾರಾಮ ಪೈ ಸ್ಮಾರಕ ಭವನಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವುದು ಗುರುವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

ಬೆಳಗ್ಗೆ 8.30ರ ವೇಳೆಗೆ ಸಿಪಿಐ ಮುಖಂಡ ಶೇಖರ್ ಎಂದಿನಂತೆ ಕಚೇರಿ ಬಾಗಿಲು ತೆರೆಯಲು ಬಂದಾಗ ಒಳಭಾಗದಲ್ಲಿ ಬೆಂಕಿಯ ಹೊಗೆ ಅವರಿಸಿತ್ತು. ತಕ್ಷಣ ಅಗ್ನಿಶಾಮಕ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳ ಬೆಂಕಿ ನಂದಿಸಿದ್ದಾರೆ. ಘಟನಾ ಸ್ಥಳದಲ್ಲಿ ಪೆಟ್ರೋಲ್ ಕ್ಯಾನ್ ಪತ್ತೆಯಾಗಿದ್ದು, ಪೊಲೀಸರು ವಶಪಡಿಸಿದ್ದಾರೆ.

ಭವನದ ಹಿಂಬಾಗಿಲ ಮೂಲಕ ಒಳಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದ್ದು, ಪರಿಣಾಮ ಮರದ, ಸ್ಟೀಲ್ ಮೇಜು, ಕುರ್ಚಿ ಹಾಗೂ ಬೀಡಿ ಮತ್ತು ಕಟ್ಟಡ ಕಾರ್ಮಿಕರ ವಿವಿಧ ಸವಲತ್ತಿನ ದಾಖಲೆಪತ್ರ ಸಂಪೂರ್ಣ ಸುಟ್ಟು ಕರಟಿಹೋಗಿದೆ. ಕೆಲ ಸಮಯದ ಹಿಂದೆ ಇದೇ ಕಟ್ಟಡಕ್ಕೆ ಬೆಂಕಿ ಹಚ್ಚುವ ಯತ್ನ ನಡೆದಿತ್ತು. ಘಟನೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. 4 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.

ಬಂಟ್ವಾಳ ಎಎಸ್‌ಪಿ ಸೈದುಲ್ ಅದಾಯತ್, ಸಿಐ ಟಿ.ಡಿ.ನಾಗರಾಜ್, ಎಸ್‌ಐಗಳಾದ ಚಂದ್ರಶೇಖರ್, ಹರೀಶ್ ಹಾಗೂ ಸಿಬ್ಬಂದಿ ಪರಿಶೀಲಿಸಿದ್ದಾರೆ. ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾಜಿ ಸಚಿವ ರಮಾನಾಥ ರೈ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿಕುಂದರ್, ಸಂಪತ್‌ಕುಮಾರ್ ರೈ, ಪುರಸಭಾ ಸದಸ್ಯ ಗಂಗಾಧರ್, ಸಿಪಿಐ ಮುಖಂಡ ಬಾಬು ಭಂಡಾರಿ ಮೊದಲಾದವರು ಭೇಟಿ ನೀಡಿದರು.

ವಿಡಿಯೋ ನ್ಯೂಸ್

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...

VIDEO| ಮಗಳ ಸಾವನ್ನು ಮುಂದಿಟ್ಟಕೊಂಡು ರಾಜಕೀಯ ಮಾಡುತ್ತಿದ್ದಾರೆ; ನಿರ್ಭಯಾ ಪ್ರಕರಣದ...

ನವದೆಹಲಿ: ನಿರ್ಭಯಾ ಪ್ರಕರಣ ಅಪರಾಧಿಗಳ ಗಲ್ಲು ಮುಂದೂಡುತ್ತಿರುವುದಕ್ಕೆ ಸಂತ್ರಸ್ಥೆ ತಾಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಈವರಗೆ ನಾನು ರಾಜಕೀಯದ ಬಗ್ಗೆ ಮಾತನಾಡಿಲ್ಲ. 2012ರಲ್ಲಿ ಪ್ರಕರಣ ನಡೆದಾಗ, ಅದನ್ನು ಖಂಡಿಸಿ...

VIDEO: ಪಕ್ಕೆಲುಬು ಆಯ್ತು…ಈಗ ಪುಳಿಯೊಗರೆ; ಮತ್ತೊಂದು ಸರ್ಕಾರಿ ಶಾಲೆಯಿಂದ ಹೊರಬಿತ್ತು...

ಸಕಲೇಶಪುರ: ಪಕ್ಕೆಲುಬು ಹೇಳಲು ಬಾರದ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಶಿಕ್ಷಕನೋರ್ವ ವಿವಾದ ಸೃಷ್ಟಿಸಿದ್ದ. ಬಾಲಕ ಪಕ್ಕೆಲುಬು ಹೇಳಲಾಗದೆ ಕಷ್ಟಪಡುತ್ತಿದ್ದರೆ ಅದನ್ನು ವಿಡಿಯೋ ಮಾಡಿದ್ದ ಕುರುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ...

ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನಸೆಳೆದಿದ್ದ ಟೀಂ ಇಂಡಿಯಾ ಸೂಪರ್​ ಫ್ಯಾನ್​...

ನವದೆಹಲಿ: ಕಳೆದ ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದ ಟೀಂ ಇಂಡಿಯಾದ ಸೂಪರ್​ ಫ್ಯಾನ್​ ಚಾರುಲತಾ ಪಟೇಲ್​ (87) ನಿಧನರಾಗಿದ್ದಾರೆ. 2019ರಲ್ಲಿ ವಿಶ್ವಕಪ್​ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಚಾರುಲತಾ ಪಟೇಲ್​ ಕ್ಯಾಮರಾಕಣ್ಣಿಗೆ...

VIDEO| ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರೋ ಆಸ್ಟ್ರೇಲಿಯಾ ಮೇಲೆ ವರುಣನ ಕೃಪೆ:...

ಸಿಡ್ನಿ: ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರುವ ಕಾಂಗರೂ ನಾಡು ಆಸ್ಟ್ರೇಲಿಯಾ ಮೇಲೆ ಇದೀಗ ವರುಣ ದೇವ ಕೃಪೆ ತೋರಿದ್ದಾನೆ. ಇದರ ನಡುವೆ 18 ತಿಂಗಳ ಮಗುವೊಂದು ಮೊದಲ ಬಾರಿಗೆ ಮಳೆ ಸುರಿಯುವುದನ್ನು...