ಕೆನಡಾದಲ್ಲಿ ಭಾರತೀಯ ರಾಜತಾಂತ್ರಿಕರಿಗೆ ಕಿರುಕುಳ ಹೆಚ್ಚಳ: ರಣದೀಪ್​ ಜೈಸ್ವಾಲ್ |India – Canada

blank

ನವದೆಹಲಿ: ದಿನ ಕಳೆದಂತೆ ಭಾರತ ಹಾಗೂ ಕೆನೆಡಾ(India – Canada) ನಡುವಿನ ಬಿಕ್ಕಟ್ಟು ಹೆಚ್ಚಾಗುತ್ತಿದ್ದು, ಒಟ್ಟಾವಾದಲ್ಲಿರುವ ರಾಜತಾಂತ್ರಿಕ ಅಧಿಕಾರಿಗಳಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಭಾರತೀಯ ರಾಜತಾಂತ್ರಿಕ ಇಲಾಖೆಯ ವಕ್ತಾರ ರಣದೀಪ್​ ಜೈಸ್ವಾಲ್ ಆರೋಪಿಸಿದ್ಧಾರೆ.

ಈ ಕುರಿತು ಗುರುವಾರ (ನ.07) ಸುದ್ದಿಗೋಷ್ಠಿ ನಡೆಸಿ ವಕ್ತಾರ ರಣದೀಪ್​ ಜೈಸ್ವಾಲ್​ ಮಾತನಾಡಿದ್ದು, ರಾಜತಾಂತ್ರಿಕರಿಗೆ ಭದ್ರತೆಯನ್ನು ಒದಗಿಸಲು ಕೆನಡಾ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಆದರೆ, ಅಲ್ಲಿನ ಸರ್ಕಾರ ಇದುವರೆಗೂ ಪ್ರತಿಕ್ರಿಯಿಸಿಲ್ಲ. ”ಕಳೆದ ವರ್ಷಗಳಿಂದ ಅಲ್ಲಿ ರಾಜತಾಂತ್ರಿಕರ ಮೇಲೆ ದಾಳಿ ಮಾಡುವುದು, ಬೆದರಿಕೆ ಹಾಕವುದು ಮತ್ತು ಕಿರುಕುಳ ನೀಡುವ ಪ್ರಕರಣಗಳು ನಾವು ನೋಡುತ್ತಲೇ ಇದ್ದೇವೆ.

ಇತ್ತೀಚಿನ ದಿನಗಳಲ್ಲಿ ಈ ಕೃತ್ಯಗಳು ಅಧಿಕವಾಗಿದ್ದು, ಅವರನ್ನು ಕಣ್ಗಾವಲಿನಲ್ಲಿ ಇರಿಸಿದ್ದೇವೆ, ಇಂತಹ ಕೃತ್ಯಗಳು ಸ್ವೀಕಾರ ಯೋಗ್ಯ ಅಲ್ಲ, ನಾವು ಇದನ್ನು ಬಲವಾಗಿ ಖಂಡಿಸುತ್ತೇವೆ ಎಂದಿದ್ದಾರೆ.

ಇತ್ತೀಚಿಗೆ ಕೆನಾಡದ ಒಂಟೋರಿಯಾ ಪ್ರಾಂತ್ಯದದಲ್ಲಿ ಹಿಂದು ದೇವಾಲಯದ ಮೇಲೆ ನಡೆದ ದಾಳಿಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಖಂಡಿಸಿದ್ದು, ಈ ಹಿಂಸಾಚಾರವು ಕೆನಾಡದ ಭಾರತೀಯ ರಾಜತಾಂತ್ರಿಕವನ್ನು ಬೆದರಿಸುವ ‘ಹೇಡಿತನದ ಪ್ರಯತ್ನಗಳು’ ಎಂದು ಗುಡುಗಿದ್ದಾರೆ. ಬಳಿಕ ಇಂತಹ ಬೆಳವಣಿಗೆ ಬೆಳದಿವೆ.

Share This Article

ಈ ಕಾಯಿಲೆಯಿಂದ ಬಳಲುತ್ತಿರುವವರು ಸಿಹಿ ಗೆಣಸಿನಿಂದ ದೂರವಿರಿ; ಇಲ್ಲಿದೆ ಹೆಲ್ತಿ ಮಾಹಿತಿ | Health Tips

ಸಿಹಿ ಗೆಣಸು ಯಾರಿಗೆ ಇಷ್ಟವಿರುವುದಿಲ್ಲ ಹೇಳಿ. ರುಚಿಕರವಾದ ಸಿಹಿಗೆಣಸನ್ನು ಶೀತ ಋತುವಿನಲ್ಲಿ ಕಂಡುಬರುವ ಬೇರು ತರಕಾರಿ…

ಗಿಡಗಳನ್ನು ಹಸಿರಾಗಿಡಲು ಕಡಲೆಕಾಯಿ ಸಿಪ್ಪೆ ಪ್ರಯೋಜನಕಾರಿ; ಇಲ್ಲಿದೆ ಬಳಸುವ ವಿಧಾನ | Tips

ಚಳಿಗಾಲದಲ್ಲಿ ಸಸ್ಯಗಳಿಗೆ ಹೆಚ್ಚಿನ ಕಾಳಜಿ ಬೇಕು. ಏಕೆಂದರೆ ತಂಪಾದ ಗಾಳಿ ಮತ್ತು ಇಬ್ಬನಿಯಿಂದ ತೇವಾಂಶವು ಹೆಚ್ಚಾಗುವುದರಿಂದ…

Kurukshetra | ಕುರುಕ್ಷೇತ್ರ ಯುದ್ಧದ ಕೊನೆಯಲ್ಲಿ ರಣಭೂಮಿಗೆ ದ್ರೌಪದಿಯನ್ನು ಶ್ರೀಕೃಷ್ಣ ಕರೆತಂದಿದ್ದೇಕೆ; ಪರಮಾತ್ಮ ಹೇಳಿದ್ದೇನು?

ಕುರುಕ್ಷೇತ್ರ(Kurukshetra) ಯುದ್ಧದಲ್ಲಿ ಎಲ್ಲಾರೂ ಮರಣ ಹೊಂದಲು ಕಾರಣ ಪಾಂಡವರಲ್ಲ ದ್ರೌಪದಿಯ ಕಣ್ಣೀರು. ಕುರುಕ್ಷೇತ್ರ ಯುದ್ಧ ಮುಗಿದ…