ಮೇಲಧಿಕಾರಿ ಕಿರುಕುಳ: ಆತ್ಮಹತ್ಯೆಗೆ ಯತ್ನಿಸಿದ ಕಿರಿಯ ವೈದ್ಯಾಧಿಕಾರಿ

ಉಡುಪಿ: ಮೇಲಧಿಕಾರಿಯ ಕಿರುಕುಳಕ್ಕೆ ಬೇಸತ್ತು ಕಿರಿಯ ವೈದ್ಯಾಧಿಕಾರಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಉಡುಪಿಯ ಖಾಸಗಿ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ನೀಡಿದ ಕಿರುಕುಳದ ಬಗ್ಗೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಣ್ಣೀರಿಟ್ಟು ದೌರ್ಜನ್ಯದ ಬಗ್ಗೆ ಹೇಳಿಕೊಂಡಿರುವ ಸಂತ್ರಸ್ತ ನಾಗರಾಜ್​, ಪತ್ರದಲ್ಲಿಯೂ ಎಲ್ಲವನ್ನೂ ವಿವರಿಸಿದ್ದಾನೆ. ನಂತರ ಅಳುತ್ತಲೇ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

‘ನೋಡಣ್ಣಾ, ಡೇ ಟು ಡೇಟ್ ಎಲ್ಲಾ ಇದೆ. ಯಾಕಣ್ಣ ಹಿಂಗ್ ಮಾಡ್ತಾರೆ?ಯಾಕಣ್ಣಾ ನಮ್ಮನ್ನ ಹೀಗೆ ಮಾನಸಿಕವಾಗಿ ಹಿಂಗ್ ಮಾಡ್ತಾರೆ? ನನಗೆ ನಿಜವಾಗಿ ಈ ಥರ ಮಾಡಿದ್ರೆ ದೌರ್ಜನ್ಯ ಅಲ್ವಾ ಅಣ್ಣಾ? ಎಲ್ಲಾ ಮಾಡಿದೀನಿ ಆದ್ರೂ ಸಿಎಲ್​ ಹಾಕಿದಾರೆ. ಮನಸ್ಸಿಗೆ ನೋವಾಗುತ್ತಾ ಇಲ್ವಾ ಅಣ್ಣಾ. ಒಬ್ಬನ ಜೀವನವನ್ನ ಹಾಳು ಮಾಡ್ಬೇಕು ಅಂತ ಇದ್ರೆ ಹಾಳಾಗಿ ಬಿಡ್ಲಿ ಅಣ್ಣಾ ಎಂದು ನಾಗರಾಜ್​ ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ.

ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ನಾಗರಾಜ್​ಗೆ ಚಿಕಿತ್ಸೆ ನೀಡಲಾಗುತ್ತಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *