ಹರಪನಹಳ್ಳಿ: ಸ್ವಾರ್ಥ ಮನೋಭಾವ ಬಿಟ್ಟು ನ್ಯಾಯಕ್ಕಾಗಿ ಹೋರಾಡಬೇಕಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಎಂ.ಭಾರತಿ ಹೇಳಿದರು.

ಪಟ್ಟಣದ ವಕೀಲರ ಸಂಘದಲ್ಲಿ ಸೋಮವಾರ ನೂತನ ಪದಾಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮ ಮತ್ತು ನಿಕಟ ಪೂರ್ವ ಪದಾಧಿಕಾರಿಗಳಿಗೆ ಬೀಳ್ಕೊಡುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಯಾವುದೇ ವಿಷಯವನ್ನು ನಾವು ಗಮನಿಸುವಾಗ ಪ್ರತ್ಯಕ್ಷವಾಗಿ ಕಂಡು ಪ್ರಾಮಾಣಿಕತೆಯಿಂದ ನಡೆದುಕೊಳ್ಳಬೇಕು. ಹೊಗಳಿಕೆ-ತೆಗಳಿಕೆಯನ್ನು ಸಮನಾಗಿ ಕೊಂಡೊಯ್ಯಬೇಕು. ಭೂತಕಾಲದ ಬಗ್ಗೆ ಚಿಂತಿಸದೆ, ವರ್ತಮಾನದ ಕಡೆ ಹೋಗಬೇಕಾಗಿದೆ ಎಂದರು.
ಸಿವಿಲ್ ನ್ಯಾಯಾಧೀಶೆ ಫಕ್ಕಿರವ್ವ ಕೆಳಗೆರೆ ಮಾತನಾಡಿ, ನ್ಯಾಯದಲ್ಲಿ ಪ್ರಕರಣಗಳು ಹೆಚ್ಚಿಗೆ ಇರುವುದರಿಂದ ಸಮಯ ಬಹಳ ಬೇಕಾಗುತ್ತದೆ. ಆದ್ದರಿಂದ ನ್ಯಾಯವಾದಿಗಳು ಸಹಕರಿಸಬೇಕು ಎಂದರು. ವಕೀಲರ ಸಂಘದ ಅಧ್ಯಕ್ಷ ಕೆ.ಜಗದಪ್ಪ, ನಿಕಟಪೂರ್ವ ಅಧ್ಯಕ್ಷ ಕೆ.ಚಂದ್ರೇಗೌಡ. ಮಾತನಾಡಿದರು.
ಹಿರಿಯ ವಕೀಲರಾದ ಕೃಷ್ಣಮೂರ್ತಿ, ಕೆ.ಎಂ.ಚಂದ್ರಮೌಳಿ, ಟಿ.ವೆಂಕಟೇಶ್, ಆರ್.ರೇವನಗೌಡ್ರು, ಬಿ.ಹಾಲೇಶ್, ಅಪರ ಸರ್ಕಾರಿ ವಕೀಲ ವಿ.ಜಿ. ಪ್ರಕಾಶ್ ಗೌಡ, ಸರ್ಕಾರಿ ಅಭಿಯೋಜಕ ಎನ್.ಮೀನಾಕ್ಷಿ, ಸಂಘದ ಡಿ.ವಾಸುದೇವ, ಎಸ್.ಜಿ.ತಿಪ್ಪೇಸ್ವಾಮಿ, ಎಂ.ನಾಗಂದ್ರಪ್ಪ, ಹುಲಿಯಪ್ಪ, ಎಂ.ಮೃತ್ಯುಂಜಯ್ಯ, ಕೆ.ಎಂ.ಕೋಟ್ರಯ್ಯ, ಸಿ.ರಾಜಪ್ಪ, ಕೆ.ಎಸ್.ಮಂಜ್ಯಾನಾಯ್ಕ, ಎಂ.ರೇವಣಸಿದ್ದಪ್ಪ, ಕೆ.ಕೋಟ್ರೇಶ್, ಎಂ.ಮಂಜುನಾಥ್, ಇತರರು ಇದ್ದರು.