ಒಂಭತ್ತು ಹಳ್ಳಿಗಳಲ್ಲಿ ಪ್ರವಾಹ ಭೀತಿ

ಹರಪನಹಳ್ಳಿ: ತುಂಗಭದ್ರಾ ನದಿ ತೀರದ 9 ಹಳ್ಳಿಗಳಲ್ಲಿ ಪ್ರವಾಹ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಶಾಸಕ ಜಿ.ಕರುಣಾಕರ ರೆಡ್ಡಿ, ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಸಿಇಒ ಕೆ.ನಿತೀಶ್ ನೇತೃತ್ವದ ತಂಡ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.

ನಿಟ್ಟೂರು, ತಾವರಗುಂದಿ, ನಿ.ಬಸಾಪುರ, ಹಲುವಾಗಲು, ಗರ್ಭಗುಡಿ ಗ್ರಾಮಗಳಿಗೆ ತೆರಳಿದ ತಂಡದ ಸದಸ್ಯರು, ಗ್ರಾಮಸ್ಥರ ಅಹವಾಲು ಆಲಿಸಿದರು.

ಪರಿಹಾರ ಕೇಂದ್ರ ಆರಂಭಿಸಲಾಗಿದೆ. ಯಾರೂ ಆತಂಕಕ್ಕೆ ಒಳಗಾಗಬಾರದು. ಯಾವುದೇ ಸಂದರ್ಭದಲ್ಲಿ ಪ್ರವಾಹ ಬಂದರೂ ನಾವು ನಿಮ್ಮ ಜತೆಗಿದ್ದೇವೆ ಎಂದು ಧೈರ್ಯ ತುಂಬಿದರು.

ಗರ್ಭಗುಡಿ, ಹಲುವಾಗಲು ಬಳಿ ಬಾಗಿನ ಅರ್ಪಿಸಿದ ಶಾಸಕ ಜಿ.ಕರುಣಾಕರ ರೆಡ್ಡಿ, ಗ್ರಾ.ಪಂ, ಕೃಷಿ ಇಲಾಖೆ ಜಂಟಿಯಾಗಿ ನಿಟ್ಟೂರು, ಹಲುವಾಗಲು ಮತ್ತು ಕಡತಿ ಗ್ರಾಮ ಪಂಚಾಯ್ತಿವಾರು ಮೂರು ತಂಡ ರಚಿಸಲಾಗಿದೆ. ಜನರಿಗೆ ತೊಂದರೆ ಆಗದಂತೆ ಕ್ರಮ ವಹಿಸಲಾಗಿದೆ ಎಂದರು.

ಗರ್ಭಗುಡಿ-ಹಲುವಾಗಲು, ನಿಟ್ಟೂರು-ನಂದ್ಯಾಲ ರಸ್ತೆ ಜಲಾವೃತಗೊಂಡಿವೆ. ಎರಡು ರಸ್ತೆಗಳಲ್ಲಿ ಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಸೋರುತ್ತಿರುವ ಹಳೆಯ ಮನೆಗಳ ಜನರು ನಿಟ್ಟೂರಿನ ಪರಿಹಾರ ಕೇಂದ್ರ, ಸಮುದಾಯ ಭವನದಲ್ಲಿ ತಮ್ಮ ಅಗತ್ಯ ವಸ್ತುಗಳ ಸಮೇತ ವಾಸ ಮಾಡಬಹುದು ಎಂದು ಹೇಳಿದರು.

ಜಿಲ್ಲಾಧಿಕಾರಿ ಎಸ್.ಎಸ್. ನಕುಲ್, ಜಿಲ್ಲೆಯ ಹಡಗಲಿ, ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ ಸೇರಿದಂತೆ ವಿವಿಧ ಕಡೆ ನೆರೆಹಾವಳಿ ಎದುರಿಸಲು ಸಿದ್ಧತೆಗಳು ನಡೆದಿವೆ. ಪರಿಹಾರ ಕೇಂದ್ರಗಳಲ್ಲಿ ಜನರು ವಾಸವಿರಬಹುದು. ಬಿದ್ದಿರುವ ಮನೆಗಳ ಮಾಲೀಕರಿಗೂ ಚೆಕ್ ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.

ಬಳ್ಳಾರಿ ಎಸ್ಪಿ ಸಿ.ಕೆ.ಬಾಬಾ, ಜಿ.ಪಂ. ಅಧ್ಯಕ್ಷೆ ಭಾರತಿರೆಡ್ಡಿ, ಉಪಾಧ್ಯಕ್ಷೆ ದಿಯಾ, ಸದಸ್ಯೆ ಜಯಶೀಲಾ, ಉಪವಿಭಾಗಾಧಿಕಾರಿ ವಿ.ಕೆ.ಪ್ರಸನ್ನಕುಮಾರ, ತಹಸೀಲ್ದಾರ ಡಾ.ನಾಗವೇಣಿ, ಎಂ.ಪಿ.ನಾಯ್ಕ, ಬಾಗಳಿ ಕೊಟ್ರೇಶ್, ಸತ್ತೂರು ಹಾಲೇಶ್, ಮೆಹಬೂಬ್ಸಾಬ್ ಇದ್ದರು.

Leave a Reply

Your email address will not be published. Required fields are marked *