ನೆರೆ ಸಂತ್ರಸ್ಥರಿಗೆ ಬಿಜೆಪಿ ನೆರವಿನ ಹಸ್ತ

ಹರಪನಹಳ್ಳಿ: ನೆರೆ ಸಂತ್ರಸ್ತರ ನೆರವಿಗೆ ಬಿಜೆಪಿ ಕಾರ್ಯಕರ್ತರು ವಾಸವಿ ಕಲ್ಯಾಣ ಮಂಟಪದಲ್ಲಿ ಸಂಗ್ರಹಿಸಿಟ್ಟಿದ್ದ ಅಗತ್ಯ ಪರಿಕರಗಳನ್ನು ಶುಕ್ರವಾರ ಉತ್ತರ ಕರ್ನಾಟಕಕ್ಕೆ ಕಳುಹಿಸಿಕೊಡಲಾಯಿತು.

1.40 ಲಕ್ಷ ರೊಟ್ಟಿ, ಆಹಾರಧಾನ್ಯ ಸೇರಿ ದಿನಬಳಕೆ ವಸ್ತುಗಳನ್ನು ಹೊತ್ತ ವಾಹನಕ್ಕೆ ಶಾಸಕ ಕರುಣಾಕರ ರೆಡ್ಡಿ ಹಸಿರು ನಿಶಾನೆ ತೋರಿಸಿದರು.

ಈ ವೇಳೆ ಶಾಸಕರು ಮಾತನಾಡಿ, ನೆರವು ನೀಡಲು ನಿರ್ಧರಿಸಿದ ಎರಡೇ ದಿನಗಳಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಅಗತ್ಯ ವಸ್ತುಗಳನ್ನು ಸಂಗ್ರಹಿಸಿಕೊಟ್ಟಿದ್ದಾರೆ ಎಂದರು.

ಬದಾಮಿ, ಮುಧೋಳ್, ಹುನಗುಂದ ಇತರಡೆಗೆ ಬಿಜೆಪಿ ಕಾರ್ಯಕರ್ತರು ಮುಖಂಡರು ಖುದ್ದಾಗಿ ಹೋಗಿ ವಿತರಿಸುವರು ಎಂದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಂ.ಪಿ.ನಾಯ್ಕ, ತಾಲೂಕು ಅಧ್ಯಕ್ಷ ಸತ್ತೂರು ಹಾಲೇಶ್, ಉಪಾಧ್ಯಕ್ಷ ಸಣ್ಣ ಹಾಲಪ್ಪ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಶ್ರೇಷ್ಠಿ, ಆರ್.ಲೋಕೇಶ್, ಕರೆಗೌಡ, ಯು.ಪಿ.ನಾಗರಾಜ್, ಸಿ.ಸಿ.ರಾಮಚಂದ್ರನಾಯ್ಕ, ತಾಪಂ ಸದಸ್ಯ ನಾಗರಾಜಪ್ಪ, ಯಡಿಹಳ್ಳಿ ಶೇಖರಪ್ಪ, ರೇಖಮ್ಮ, ಸುವರ್ಣಮ್ಮ ಸೇರಿ ಇತರರು ಉಪಸ್ಥಿತರಿದ್ದರು.

1.40 ಲಕ್ಷ ರೊಟ್ಟಿ ರವಾನೆ: 1.40 ಲಕ್ಷ ರೊಟ್ಟಿ, 1300 ಸೀರೆಗಳು, ಪಂಚೆ, ಶಾಲು, ಕೊಬ್ಬರಿ ಎಣ್ಣೆ, ಸೋಪು, ಬಿಸ್ಕೇಟ್, ನೀರಿನ ಬಾಟಲುಗಳು, ಮಹಿಳೆಯರಿಗೆ ಅವಶ್ಯಕ ವಸ್ತುಗಳನ್ನು ಕಳುಹಿಸಲಾಗಿದೆ. ಇದಲ್ಲದೆ ಬೆಳಗಾವಿಗೆ ಜಿಲ್ಲೆಗೆ 10 ಟನ್ ಹಾಗೂ ಕೊಡಗಿಗೆ 20 ಟನ್ ಅಕ್ಕಿ ರವಾನಿಸಲಾಗಿದೆ. ಪಂಚಮಿ ಹಬ್ಬಕ್ಕೆ ತಯಾರಿಸಲಾದ ಉಂಡಿಗಳನ್ನು ಸಂಗ್ರಹಿಸಿ ಕಳುಹಿಸಲಾಗುತ್ತಿದೆ ಎಂದು ಶಾಸಕ ಕರುಣಾಕರ ರೆಡ್ಡಿ ಮಾಹಿತಿ ನೀಡಿದರು.

Leave a Reply

Your email address will not be published. Required fields are marked *