ವಿವೇಕರ ಚಿಂತನೆ ಸರ್ವಕಾಲಕ್ಕೂ ಆದರ್ಶ


ಹರಪನಹಳ್ಳಿ: ಸ್ವಾಮಿ ವಿವೇಕಾನಂದರ ತತ್ವಾದರ್ಶದ ಕುರಿತು ಬೋಧನೆ ಮಾಡುವ ವಿದ್ಯಾರ್ಥಿಗಳನ್ನು ಸತ್ಪ್ರಜೆಗಳನ್ನಾಗಿಸಬೇಕು ಎಂದು ಲಿಂಗಾಯತ ಸಮಾಜದ ತಾಲೂಕಾಧ್ಯಕ್ಷ ಬಂದೋಳ ಮಂಜುನಾಥ ತಿಳಿಸಿದರು.

ತಾಲೂಕಿನ ಗುಂಡಗತ್ತಿಯಲ್ಲಿ ಸ್ವಾಮಿ ವಿವೇಕಾನಂದ ಸರ್ವ ಸಮನ್ವಯ ಬಳಗದಿಂದ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ 156ನೇ ಜಯಂತಿಯಲ್ಲಿ ಮಾತನಾಡಿದರು.

ದೇಶದ ಸಂಸ್ಕೃತಿ, ಸಂಪ್ರದಾಯ, ಪದ್ಧತಿಗಳನ್ನು ಜಗತ್ತಿಗೆ ಪರಿಚಯಿಸಲು, ಆಕರ್ಷಿಸಲು ಯಶಸ್ವಿಯಾದ ಸ್ವಾಮಿ ವಿವೇಕಾನಂದರು, ಎಲ್ಲರಿಗೂ ಮಾದರಿ. ಅವರ ಆದರ್ಶ, ತತ್ವಗಳನ್ನು ಯುವ ಜನತೆ ಅನುಕರಿಸಬೇಕು ಎಂದು ಹೇಳಿದರು.

ವಕೀಲ ಕರಿಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಅಧಿಕಾರಿ ಧರಣೇಂದ್ರ, ಎಂ.ಕೆಂಚಪ್ಪ, ಪರಸಪ್ಪ, ಅರವಿಂದ ಮಾತನಾಡಿದರು.

ಅಂತಾರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ಸಿಂಗ್ರಿಹಳ್ಳಿ ಗ್ರಾಮದ ಗಂಗಮ್ಮ, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರ ಮೆರವಣಿಗೆ ನಡೆಯಿತು.

ಮಹೇಶ್ವರಪ್ಪ, ಬಿ.ಷಣ್ಮುಖಪ್ಪ, ಯು.ನಾಗೇಂದ್ರಪ್ಪ, ಅಂಜಪ್ಪ, ಕೊಟ್ರೇಶಪ್ಪ, ಜಗದೀಶಪ್ಪ, ಅಂಜಿನಪ್ಪ, ಹನುಮಂತ, ಪ್ರವೀಣ್, ಕೊಟ್ರೇಶ್, ಚಂದ್ರಪ್ಪ, ಶಶಿಧರ, ಮಾರುತಿ, ಸುರೇಶ್ ಇದ್ದರು.