ಮದ್ಯ ನಿಷೇಧ ಮಾಡಿ, ಶ್ರೀಗಳಿಗೆ ಗೌರವ ಸಮರ್ಪಿಸಲಿ

ಹರಪನಹಳ್ಳಿ: ಸರ್ಕಾರ ದೇಶದಲ್ಲಿ ಮದ್ಯಪಾನ ನಿಷೇಧ ಮಾಡಿದರೆ ಸಿದ್ಧಗಂಗ ಮಠದ ಡಾ.ಶಿವಕುಮಾರ ಶ್ರೀಗಳಿಗೆ ಗೌರವ ಸಲ್ಲಿಸಿದಂತೆ ಎಂದು ತರಳಬಾಳು ಶಾಖಾ ಮಠದ ಸಾಣೇಹಳ್ಳಿಯ ಡಾ.ಪಂಡಿತಾರಾದ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಎಚ್‌ಪಿಎಸ್ ಕಾಲೇಜು ಮೈದಾನದಲ್ಲಿ ನೀನಲ್ಲದೇ ಮತ್ತಾರು ಇಲ್ಲವಯ್ಯ ಎಂಬ ವಚನ ನೃತ್ಯ ರೂಪಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತುಮಕೂರಿನ ಸಿದ್ಧಗಂಗೆ ಸ್ವಾಮೀಜಿಗಳು ಪದವಿ, ಪ್ರಶಸ್ತಿಗೆ ಎಂದಿಗೂ ಆಸೆಪಟ್ಟವರಲ್ಲ ಎಂದು ಅಭಿಪ್ರಾಯಪಟ್ಟರು. ಬಿಜೆಪಿ ಮಾಜಿ ಅಧ್ಯಕ್ಷ ಜಿ. ನಂಜನಗೌಡ ಮಾತನಾಡಿದರು.

ಸಾಣೇಹಳ್ಳಿ ಗುರುಪಾದೇಶ್ವರ ಪ್ರೌಢ ಶಾಲೆ ಹಾಗೂ ಶಿವಕುಮಾರ ಸ್ವಾಮೀಜಿ ಹಿರಿಯ ಪ್ರಾಥಮಿಕ ಶಾಲೆಯ 100 ಮಕ್ಕಳು 40 ವಚನಗಳಿಗೆ ನೃತ್ಯ ರೂಪಕ ಮಾಡಿ ಗಮನ ಸೆಳೆದರು. ನಿವೃತ್ತ ಪ್ರಾಚಾರ್ಯ ಎ.ಸಿದ್ದೇಶ್ವರ ಪ್ರಸ್ತಾವಿಕವಾಗಿ ಮಾತನಾಡಿದರು.