ಖಾತ್ರಿ ಕೂಲಿ ಹಣ ಪಾವತಿಗೆ ಹರಪನಹಳ್ಳಿ ಜನರ ಪಟ್ಟು

ಹರಪನಹಳ್ಳಿ: ಮೂರು ತಿಂಗಳ ಬಾಕಿ ಕೂಲಿ ಹಣ ಪಾವತಿಗೆ ಒತ್ತಾಯಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ (ಗ್ರಾಕೂಸ್) ನೇತೃತ್ವದಲ್ಲಿ ವಿವಿಧ ಗ್ರಾಮದ ಖಾತ್ರಿ ಯೋಜನೆಯ ಕೂಲಿಗಾರರು ಬುಧುವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಕೋಟೆ ಆಂಜನೇಯ ದೇವಸ್ಥಾನದಿಂದ ತಾಪಂ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕೂಲಿಗಾರರು, ಬಹಿರಂಗ ಸಭೆ ನಡೆಸಿ ಬಾಕಿ ಕೂಲಿ ಹಣ ಪಾವತಿಗೆ ಒತ್ತಾಯಿಸಿ, ತಾಪಂ ಅಧಿಕಾರಿಗೆ ಮನವಿ ಸಲ್ಲಿಸಿದರು.
ಸಂಘಟನೆ ಸಂಚಾಲಕ ಮಲ್ಲೇಶ್ ಮಾತನಾಡಿ, ನೂರಾರು ಕಾರ್ಮಿಕರು ಕೆಲಸ ಮಾಡಿ, ಮೂರು ತಿಂಗಳಾಗಿದೆ. ಈವರೆಗೂ ಕೂಲಿ ಹಣ ಪಾವತಿ ಮಾಡದೇ ನಿರ್ಲಕ್ಷೃ ವಹಿಸಿರುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಭಾಗವಹಿಸಿದ್ದ ಗ್ರಾಮಗಳು
ಬೆಣ್ಣಿಹಳ್ಳಿ, ಮುತ್ತಿಗಿ, ಲೋಲೇಶ್ವರ, ಬಾಡ, ಮೈದೂರು, ಬಳಿಗನೂರು, ಗಜಾಪುರ, ಸಾಸ್ವಿಹಳ್ಳಿ, ಕುಣೆಮಾದಿಹಳ್ಳಿ, ಕಣಿವಿಹಳ್ಳಿ, ಕೊಂಗನಹೊಸೂರು, ಹಾರಕನಾಳ, ಹುಲಿಕಟ್ಟೆ, ಈಶಾಪುರ, ಬಂಡ್ರಿ, ಅಸನಾಳು ಗ್ರಾಮಗಳ ಕೂಲಿಗಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.