ನೋಂದಣಿ ಕಚೇರಿ ಎದುರು ಪ್ರತಿಭಟನೆಹರಪನಹಳ್ಳಿ: ವಿದ್ಯುತ್ ವ್ಯತ್ಯಯ ವೇಳೆ ಉಪ ನೋಂದಣಿ ಕಚೇರಿ ಕೆಲಸಕ್ಕೆ ಅಡಚಣೆ ಆಗದಂತೆ ಪರ್ಯಾ ಯ ವ್ಯವಸ್ಥೆ ಕಲ್ಪಿಸಲಾಗಿಲ್ಲ ಎಂದು ವಿರೋಧಿಸಿ ರೈತ ಸಂಘ ಹುಚ್ಚವ್ವನಹಳ್ಳಿ ಮಂಜುನಾಥ ಬಣದ ಕಾರ್ಯಕರ್ತರು ಉಪ ನೋಂದಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನೋಂದಣಿಗೆ ವಿವಿಧ ಗ್ರಾಮಗಳಿಂದ ಬೆಳಗ್ಗೆ ಆಗಮಿಸಿದ್ದ ರೈತರು ವಿದ್ಯುತ್ ಕೈಕೊಟ್ಟಿದ್ದರಿಂದ ಮಧ್ಯಾಹ್ನದವರೆಗೆ ಕಾದರು. ವಿದ್ಯುತ್ ವ್ಯತ್ಯಯ ಕುರಿತು ಮೊದಲೇ ಮಾಹಿತಿ ಇದ್ದರೂ ಪಯಾ ಯರ್ ವ್ಯವಸ್ಥೆ ಮಾಡಲಾಗಿಲ್ಲ ಎಂದು ಆಕ್ಷೇಪಿಸಿದರು.

ಸಂಘದ ಜಿಲ್ಲಾಧ್ಯಕ್ಷ ಅರಸನಾಳು ಸಿದ್ದಪ್ಪ ಮಾತನಾಡಿ, ಪರ್ಯಾಯ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳು ನಿರ್ಲಕ್ಷೃ ಮಾಡುತ್ತಿದ್ದಾರೆ. ಜನರೇಟರ್ ಇದ್ದರೂ ಪ್ರಯೋಜನವಿಲ್ಲ ಎಂದು ದೂರಿದರು.ಜನರೇಟರ್ ನಿರಂತರ ದುರಸ್ತಿಗೆ ಬರುತ್ತಿದೆ ಎಂದು ಇಲಾಖೆ ಅಧಿಕಾರಿ ತಿಳಿಸಿದರು.

ರೈತ ಮುಖಂಡರಾದ ಅಣಜಿಗೆರೆ ನಂದಪ್ಪ, ರಾಮನಗೌಡ, ಜಗದೀಶ್, ಚಿಕ್ಕಪ್ಪ, ಕಂಭಟ್ರ ಹಳ್ಳಿ ಹುಚ್ಚಪ್ಪ, ಅಣ್ಣಪ್ಪ ದೇವೇಂದ್ರಪ್ಪ, ನಾಗರಾಜ, ಹನುಮಂತಪ್ಪ, ಬಸವರಾಜ, ಹನುಮನ ಗೌಡ ಇತರರಿದ್ದರು.