ಹರಪನಹಳ್ಳಿ ಎಸ್.ಟಿ.ಜೆ.ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಭಾರತ್ ಮಾತಾ ಪೂಜನ್

ಹರಪನಹಳ್ಳಿ: ದೇಶದ ಪ್ರತಿ ಪ್ರಜೆ ಸರ್ವೇ ಜನೋ ಸುಖಿನೋ ಭವಂತು ಎನ್ನುವ ತತ್ವದಡಿ ಜೀವನ ನಡೆಸುವ ಅಗತ್ಯವಿದೆ ಎಂದು ಜಿಪಂ ಸದಸ್ಯೆ ಆರುಂಡಿ ಸುವರ್ಣಾ ನಾಗರಾಜ್ ಹೇಳಿದರು.

ಪಟ್ಟಣದ ತರಳಬಾಳು ವಿದ್ಯಾಸಂಸ್ಥೆಯ ಎಸ್.ಟಿ.ಜೆ.ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಭಾರತ್ ಮಾತಾ ಪೂಜನ್ ನಿಮಿತ್ತ ಏರ್ಪಡಿಸಿದ್ದ ಅಂತರ್ ಕಾಲೇಜು ದೇಶಭಕ್ತಿ ಗೀತೆಗಳ ಗಾಯನ ಸ್ಪರ್ಧೆಯಲ್ಲಿ ಮಾತನಾಡಿದರು.
ಭಾರತದಲ್ಲಿ ಸೀಗೆ ಪೂಜನೀಯ ಸ್ಥಾನವಿದೆ. ದೇಶಕ್ಕಾಗಿ ದುಡಿದ ಸ್ವಾಮಿ ವಿವೇಕಾನಂದ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಚಂದ್ರಶೇಖರ ಅಜಾದ್, ತಾತ್ಯಾಟೋಪಿ, ಕಿತ್ತೂರು ರಾಣಿಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಭಗತ್‌ಸಿಂಗ್, ಎಪಿಜೆ ಅಬ್ದುಲ್ ಕಲಾಂ ಅವರಂಥ ಮಹನೀಯರ ಜೀವನ ಕಥೆಗಳು, ನಾಡಿನ ಜನತೆಗೆ ಮಾದರಿಯಾಗಿವೆ ಎಂದರು.

ಮುಖ್ಯ ಶಿಕ್ಷಕ ಕೊಟ್ರಬಸಪ್ಪ, ಶ್ರೀ ಶಾರದಾದೇವಿ ಸತ್ ಸಂಘದ ಸಂಚಾಲಕ ಅಂಬ್ಲಿ ಯೋಗೀಶ್, ಸಂಸ್ಕಾರ ಭಾರತಿ ಅಧ್ಯಕ್ಷ ಮಹಾವೀರ ಭಂಡಾರಿ, ಸಂಚಾಲಕ ಸುರೇಂದ್ರ ಮಂಚಾಲಿ, ಸಂಗೀತ ಶಿಕ್ಷಕರಾದ ಪರಸನಾಯ್ಕ, ಬಸವರಾಜ್ ಭಂಡಾರಿ ಮಾತನಾಡಿದರು.

ಪಾಲಿಟೆಕ್ನಿಕ್ ಕಾಲೇಜು ಉಪನ್ಯಾಸಕ ಹೆಚ್.ಮಲ್ಲಿಕಾರ್ಜುನ ಇತರರಿದ್ದರು.

ಹೆಚ್ಚಿನ ವಿವರಕ್ಕೆ ವಿಜಯವಾಣಿ ಓದಿ

Leave a Reply

Your email address will not be published. Required fields are marked *