ಬಾಲ್ಯದಲ್ಲೇ ದುಡಿಮೆಗೆ ಹಚ್ಚಬೇಡಿ: ವಕೀಲ ಕಣಿವಿಹಳ್ಳಿ ಮಂಜುನಾಥ್ ಸಲಹೆ

ಹರಪನಹಳ್ಳಿ: ಬಾಲಕ ಅಥವಾ ಬಾಲಕಿಯರನ್ನು ದುಡಿಮೆಗೆ ಬಳಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ ಎಂದು ಅಪರ ಸರ್ಕಾರಿ ವಕೀಲ ಕಣಿವಿಹಳ್ಳಿ ಮಂಜುನಾಥ ಹೇಳಿದರು.

ಮೇಗಳಪೇಟೆ ಟಿಎಂಎಇ ಸಂಸ್ಥೆ ಪ್ರೌಢಶಾಲೆ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ನೇಸರ ಸಂಸ್ಥೆಯ ಮಕ್ಕಳ ಸಹಾಯವಾಣಿ ಬುಧವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಬಾಲ ಕಾರ್ಮಿಕ ವಿರೋಧಿ ದಿನಾಚರಣೆಯಲ್ಲಿ ಉಪನ್ಯಾಸ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಎಎಸ್‌ಐ ಸಧ್ಯೋಜಾತಪ್ಪ ಮಾತನಾಡಿ, ಈಚೆಗೆ ಸೈಬರ್ ಅಪರಾಧಗಳು ಹೆಚ್ಚುತ್ತಿವೆ. ಅವುಗಳಲ್ಲಿ ಮಕ್ಕಳು ಭಾಗಿಯಾಗುತ್ತಿರುವುದು ಕಳವಳಕಾರಿ ಸಂಗತಿ ಎಂದರು.

ಮುಖ್ಯ ಶಿಕ್ಷಕ ಸಿ.ಎಂ. ಕೊಟ್ರಯ್ಯ ಅಧ್ಯಕ್ಷತೆ ವಹಿಸಿದ್ದರು. ಸಿಡಿಪಿಒ ಕಚೇರಿ ಮೇಲ್ವಿಚಾರಕಿ ರತ್ನಮ್ಮ ದೊಡ್ಡಬೆಣ್ಣೆ, ಮಕ್ಕಳ ಸಹಾಯವಾಣಿ ಸಂಯೋಜಕ ಬಿ. ಮಲ್ಲಿಕಾರ್ಜುನ, ಮಂಜುಳಾ, ರತ್ನಮ್ಮ, ಕೆ. ಮಂಜುಳಾ, ಹನುಮಕ್ಕ, ಎಂ. ಸಂತೋಷ, ಚಂದ್ರಶೇಖರಯ್ಯ, ಜಯದೇವ ಇತರರಿದ್ದರು.

Leave a Reply

Your email address will not be published. Required fields are marked *