ಮಳೆಗೆ ಮನೆ ಛಾವಣಿ ಕುಸಿತ

ಹನೂರು: ಕ್ಷೇತ್ರ ವ್ಯಾಪ್ತಿಯ ಹೂಗ್ಯಂ ಭಾಗದಲ್ಲಿ ಗುರುವಾರ ರಾತ್ರಿ ಸುರಿದ ಜೋರು ಮಳೆಗೆ ಯರಂಬಾಡಿ ಗ್ರಾಮದಲ್ಲಿ ಮನೆಯೊಂದರ ಛಾವಣಿ ಕುಸಿದಿದೆ.

ಗ್ರಾಮದ ನಾಗರಾಜು ಎಂಬುವರ ಮನೆ ಛಾವಣಿ ಹಾಗೂ ಗೋಡೆ ಕುಸಿದಿದೆ. ಈ ವೇಳೆ ಮನೆಯಲ್ಲಿ ಮಲಗಿದ್ದ ನಾಗರಾಜು ಕುಟುಂಬಸ್ಥರಿಗೆ ಯಾವುದೇ ಹಾನಿ ಸಂಭವಿಸಿಲ್ಲ. ಮನೆಯಲ್ಲಿದ್ದ ಆಹಾರ ಪದಾರ್ಥ ಹಾಗೂ ನಿತ್ಯ ಬಳಕೆ ವಸ್ತುಗಳು ಹಾನಿಗೊಳಗಾಗಿವೆ.

ಘಟನೆಯಿಂದ ಸಾವಿರಾರು ರೂ. ನಷ್ಟ ಸಂಭವಿಸಿದ್ದು, ಮನೆಯಿಲ್ಲದೆ ಸಂಕಷ್ಟದಲ್ಲಿದ್ದೇವೆ.ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವುದರ ಮೂಲಕ ಸರ್ಕಾರದಿಂದ ಪರಿಹಾರ ಕಲ್ಪಿಸಿಕೊಡುವಂತೆ ಮನೆಯ ಮಾಲೀಕ ನಾಗರಾಜು ಒತ್ತಾಯಿಸಿದ್ದಾರೆ. ಹನೂರು ಸೇರಿದಂತೆ ಮಾರ್ಟಳ್ಳಿ, ಹೂಗ್ಯಂ, ಯರಂಬಾಡಿಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಗಾಳಿ ಸಹಿತ ಜೋರು ಮಳೆವಾಯಿತು.

Leave a Reply

Your email address will not be published. Required fields are marked *