ವರ್ಷಕ್ಕೆ ನೂರು ದಿನ ಕೂಲಿ ಕೆಲಸ

ತಾಪಂ ಇಒ ತಿಮ್ಮಪ್ಪ ಹೇಳಿಕೆ | ಕೆರೆ ಹೂಳೆತ್ತುವ ಸ್ಥಳಕ್ಕೆ ಭೇಟಿ

ಹನುಮಸಾಗರ: ಕೂಲಿಕಾರರು ಭಯಪಡಬೇಕಿಲ್ಲ, ಪ್ರತಿ ಕುಟುಂಬಕ್ಕೆ ವರ್ಷಕ್ಕೆ ನೂರು ದಿನ ಕೂಲಿ ಕೆಲಸ ನೀಡಲಾಗುವುದೆಂದು ತಾಪಂ ಕಾರ್ಯ ನಿರ್ವಾಹಣಾಧಿಕಾರಿ ತಿಮ್ಮಪ್ಪ ಹೇಳಿದರು.

ನರೇಗಾದನ್ವಯ ಇಲ್ಲಿನ ಕೆರೆ ಹೂಳೆತ್ತುವ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ಮಾತನಾಡಿದರು. ಎಲ್ಲರೂ ಏಕಕಾಲಕ್ಕೆ ಕೆಲಸ ಬೇಕೆಂದರೆ ಸಮಸ್ಯೆಯಾಗುತ್ತದೆ. ಬೇಡಿಕೆ ಅನ್ವಯ ಎಲ್ಲ ಕುಟುಂಬಗಳಿಗೆ ಪ್ರತಿ ವರ್ಷ ನೂರು ದಿನ ಕೂಲಿ ನೀಡಲಾಗುವುದು. ನರೇಗಾ ಕೂಲಿ ಕೆಲಸ ಎಂದರೆ ಕೇವಲ ಕೆರೆ ಹೂಳೆತ್ತುವುದು ಮಾತ್ರವಲ್ಲ. ರೈತರು ತಮ್ಮ ಹೊಲದಲ್ಲಿ ಬದು, ಕೃಷಿ ಹೊಂಡ, ಟ್ರಂಚ್ ನಿರ್ಮಾಣ ಮಾಡಿಕೊಳ್ಳಬಹುದು. ಸಸಿ ಹಚ್ಚಿಕೊಳ್ಳಬಹುದು ಮತ್ತು ನಿಮ್ಮ ಬೋರ್‌ವೇಲ್‌ಗಳನ್ನು ರಿಚಾರ್ಜ್ ಮಾಡಿಕೊಳ್ಳಬಹುದು ಎಂದರು.

ಉದ್ಯೋಗ ಖಾತ್ರಿ ಐಡಿ ಬುಕ್ ಮಾಡಿಕೊಡಿ, ಈ ಹಿಂದೆ ಕೂಲಿ ಕೆಲಸ ಮಾಡಿದ ಹಣ ಖಾತೆಗೆ ಜಮಾ ಆಗಿಲ್ಲ ಎಂದು ಕೇಳಿದರೆ ಪಿಡಿಒ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮುಂದೆ ಕೂಲಿಕಾರರು ಅಳಲು ತೊಡಿಕೊಂಡರು.

ಜಿಪಂ ಸದಸ್ಯ ಭೀಮಣ್ಣ ಅಗಸಿಮುಂದಿನ, ಪಿಡಿಒಗಳಾದ ದೇವೆಂದ್ರಪ್ಪ ಕಮತರ, ವೆಂಕಟೇಶ ವಂದಾಲ, ಇಂಜನಿಯರ್‌ಗಳಾದ ಮಹಾಗಣೇಶ, ತನ್ವೀರ, ಚಂದಪ್ಪ ವಾಲ್ಮೀಕಿ, ಸೂಚಪ್ಪ ದೇವರಮನಿ, ಗ್ರಾಪಂ ಸದಸ್ಯರು ಮತ್ತು ಸಿಬ್ಬಂದಿ ಇದ್ದರು.

Leave a Reply

Your email address will not be published. Required fields are marked *