ಸಿಡಿಲಿಗೆ ಬಲಿಯಾದ ಜೋಡೆತ್ತು

ಹನುಮಸಾಗರ: ಸಮೀಪದ ವಕ್ಕಂದುರ್ಗ ಗ್ರಾಮದ ಹನುಮಪ್ಪ ಸತ್ಯಪ್ಪ ಪೂಜಾರಿ ಎನ್ನುವ ರೈತನಿಗೆ ಸೇರಿದ ಜೋಡಿ ಎತ್ತುಗಳು ಮಂಗಳವಾರ ಮಧ್ಯಾಹ್ನ ಸಿಡಿಲಿಗೆ ಬಲಿಯಾಗಿವೆ.

ಜಮೀನಿನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾಗ ಗುಡುಗು ಸಹಿತ ಮಳೆ ಸುರಿಯಲಾರಂಭಿಸಿದೆ. ಮಳೆಯಿಂದ ರಕ್ಷಿಸಿಕೊಳ್ಳಬೇಕೆನ್ನುವಷ್ಟರಲ್ಲಿ ಸಿಡಿಲಿನ ಆರ್ಭಟಕ್ಕೆ ಎತ್ತುಗಳು ಬಲಿಯಾದವು ಎಂದು ರೈತ ಹನುಮಪ್ಪ ತಿಳಿಸಿದ್ದಾರೆ.

ಮಳೆ ಬೆಳೆ ಇಲ್ಲದೆ ಕಂಗಾಲಾಗಿರುವ ಸಂದರ್ಭದಲ್ಲಿ ಎತ್ತುಗಳನ್ನು ಕಳೆದುಕೊಂಡ ರೈತನಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇತ್ತೀಚೆಗೆ ಪಕ್ಕದ ಗ್ರಾಮದ ರೈತರೊಬ್ಬರು ಒಂದು ಲಕ್ಷ ರೂ.ಗೆ ಖರೀದಿಸಲು ಬಂದಾಗ ಹನುಮಪ್ಪ ನಿರಾಕರಿಸಿದ್ದರು. ಸದ್ಯ ಕೃಷಿ ಚಟುವಟಿಕೆ ನಡೆಸಲು ಸಾಲ ಮಾಡುವ ಪರಿಸ್ಥಿತಿ ಬಂದೊದಗಿದೆ ಎಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದುದು ಕಂಡುಬಂತು.