ವೃಂದಾವನ ಧ್ವಂಸ ಖಂಡಿಸಿ ಪ್ರತಿಭಟನೆ

ಹನುಮಸಾಗರ: ಆನೆಗೊಂದಿ ಸಮೀಪದ ನವವೃಂದಾವನ ಗಡ್ಡಿಯ ಶ್ರೀ ವ್ಯಾಸರಾಜ ತೀರ್ಥರ ವೃಂದಾವನ ಧ್ವಂಸ ಖಂಡಿಸಿ ಪಟ್ಟಣದಲ್ಲಿ ಬ್ರಾಹ್ಮಣ ಮತ್ತು ವೈಶ್ಯ ಸಮುದಾಯದವರು ಭಾನುವಾರ ಪ್ರತಿಭಟನೆ ನಡೆಸಿದರು.

ಇಲ್ಲಿನ ರಾಘವೇಂದ್ರ ಮಠದಿಂದ ಬನಶಂಕರಿ ದೇವಸ್ಥಾನ, ಹಳೆಯ ಬಸ್ ನಿಲ್ದಾಣದ ಮಾರ್ಗವಾಗಿ ನಾಡ ಕಚೇರಿವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡರಾದ ಗುರುರಾಜ ದೇಸಾಯಿ, ವಿ.ಎಚ್.ನಾಗೂರು, ಪ್ರಲ್ಹಾದಾಚಾರ್ಯ ಪೂಜಾರ ಮಾತನಾಡಿ, ನಿಧಿ ಆಸೆಗಾಗಿ ವೃಂದಾವನ ಧ್ವಂಸಗೊಳಿಸಿರುವುದು ಖಂಡನೀಯ. ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು. ಬಳಿಕ ಉಪ ತಹಸೀಲ್ದಾರ್ ರೇಣುಕಾ ಹಾದಿಮನಿಗೆ ಮನವಿ ಸಲ್ಲಿಸಲಾಯಿತು.

ಸುಬಣಾಚಾರ್ಯ ಕಟ್ಟಿ, ಕೃಷ್ಟಾಚಾರ್ಯ, ಶ್ರೀನಿವಾಸ್ ಗುಡಕೋಟಿ, ಗುರುಪ್ರಸಾದ, ಸತೀಶ್ ಜಮಖಂಡಿಕಾರ್, ಪ್ರಕಾಶ ಗುಡಕೋಟಿ, ಸುಮಂತ ಪುರಾಣಿಕ್, ರಾಘವೇಂದ್ರ, ಜಗನ್ನಾಥ ಕುಲಕರ್ಣಿ, ಸುರೇಶಬಾಬು ಜಮಖಂಡಿಕಾರ್ ಇತರರಿದ್ದರು.

Leave a Reply

Your email address will not be published. Required fields are marked *