ಟ್ರಾೃಕ್ಟರ್‌ನಲ್ಲಿನ ಟೇಪ್‌ರೆಕಾರ್ಡರ್ ತೆರವು

ಹನುಮಸಾಗರ: ಟ್ರಾೃಕ್ಟರ್‌ನಲ್ಲಿ ಟೇಪ್‌ರೆಕಾರ್ಡರ್ ಬಳಕೆ ಮಾಡಕೂಡದು ಎಂದು ಪಿಎಸ್‌ಐ ಎಚ್. ನಾಗರಾಜ್ ತಾಕೀತು ಮಾಡಿದರು.

ಪಟ್ಟಣದ ಹಳೇ ಬಸ್ ನಿಲ್ದಾಣದ ಹತ್ತಿರ ಟೇಪ್‌ರೆಕಾರ್ಡರ್ ಹಚ್ಚಿಕೊಂಡು ಹೋಗುತ್ತಿದ್ದ ಎರಡು ಟ್ರಾೃಕ್ಟರ್‌ಗಳನ್ನು ಮಂಗಳವಾರ ತಡೆದು, ಟೇಪ್‌ರೆಕಾರ್ಡರ್‌ಅನ್ನು ತೆರವು ಮಾಡಿಸಿ, ಈ ರೀತಿ ಎಚ್ಚರಿಕೆ ನೀಡಿದರು.

ಟ್ರಾೃಕ್ಟರ್ ಚಾಲನೆ ಮಾಡುವಾಗ ಟೇಪ್‌ರೆಕಾರ್ಡರ್ ಬಳಕೆ ಮಾಡುವುದರಿಂದ ಇತರ ಸವಾರರಿಗೆ ತೊಂದರೆಯಾಗುತ್ತದೆ. ಈ ರೀತಿ ಮಾಡಬೇಡಿ ಎಂದು ಸೂಕ್ಷ್ಮವಾಗಿ ಹೇಳಿದರೆ ಟ್ಯಾಕ್ಟರ್ ಚಾಲಕರು ತಿಳಿದುಕೊಳ್ಳುತ್ತಿಲ್ಲ. ಇವರಿಗೆ ದಂಡ ವಿಧಿಸಿದರೆ ಮಾತ್ರ ಎಚ್ಚೆತ್ತುಕೊಳ್ಳುತ್ತಾರೆ. ಎಲ್ಲರೂ ಟ್ರ್ಯಾಕ್ಟರ್‌ನಲ್ಲಿನ ಟೇಪ್‌ರೆಕಾರ್ಡರ್ ಅನ್ನು ಬಿಚ್ಚಿಡಬೇಕು. ಇಲ್ಲದಿದ್ದರೆ ದಂಡ ತೆರಬೇಕಾಗುತ್ತದೆ ಎಂದರು.

ಇತ್ತೀಚೆಗೆ ಅಪ್ರಾಪ್ತರು ಟ್ರ್ಯಾಕ್ಟರ್ ಚಾಲನೆ ಮಾಡುತ್ತಿರುವುದು ಕಂಡು ಬರುತ್ತಿದೆ. ಇದು ತಪ್ಪು. ಇನ್ನು ಮೇಲೆ ಅಪ್ರಾಪ್ತರು ಟ್ರ್ಯಾಕ್ಟರ್ ಚಾಲನೆ ಮಾಡುತ್ತಿರುವುದು ಮತ್ತು ಗೂಡ್ಸ್ ಗಾಡಿಯಲ್ಲಿ ಜನರನ್ನು ಕರೆದುಕೊಂಡು ಹೋಗುವುದು ಕಂಡು ಬಂದರೆ ವಾಹನ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದರು. ಪೊಲೀಸ್ ಸಿಬಂದ್ದಿ ಬಾಳನಗೌಡ ಇದ್ದರು.