More

  ಶೈಕ್ಷಣಿಕ ಅಭಿವೃದ್ಧಿಗೆ ಸರ್ವರ ಸಹಕಾರ ಅವಶ್ಯ: ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಹೇಳಿಕೆ

  ಹನುಮಸಾಗರ: ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಸಂಘ, ಸಂಸ್ಥೆಗಳು ಉಚಿತವಾಗಿ ಸೈಕಲ್ ವಿತರಿಸುತ್ತಿರುವುದು ಶ್ಲಾಘನಾರ್ಹ ಕಾರ್ಯ ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಹೇಳಿದರು.

  ಮನ್ನೇರಾಳ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ನೀಡ್ ಬೇಸ್ ಇಂಡಿಯಾ ಹಾಗೂ ರೈನ್ಬೋ ಸಂಸ್ಥೆಯಿಂದ ಉಚಿತವಾಗಿ ಸೈಕಲ್,ಬ್ಯಾಗ್‌ಗಳನ್ನು ವಿತರಿಸಿ ಮಾತನಾಡಿದರು. ಸರ್ಕಾರವೇ ಎಲ್ಲ ಸವಲತ್ತು ಒದಗಿಸಬೇಕು ಎನ್ನುವುದು ತಪ್ಪು. ಮಕ್ಕಳ ಶಿಕ್ಷಣಕ್ಕೆ ಸಾರ್ವಜನಿಕರು ಹಾಗೂ ಸರ್ಕಾರೇತರ ಸಂಸ್ಥೆಗಳ ಸಹಕಾರವೂ ಅತ್ಯಗತ್ಯ. ಗ್ರಾಮೀಣ ವಿದ್ಯಾರ್ಥಿಗಳಿಗೆ ಸೈಕಲ್ ನೀಡಿದ ನೀಡ್ ಬೇಸ್ ಇಂಡಿಯಾ ಕಾರ್ಯ ಇತರರಿಗೆ ಮಾದರಿ ಎಂದರು. ನೀಡ್ ಬೇಸ್ ಇಂಡಿಯಾ ಸಂಸ್ಥೆಯ ಎಸ್.ರಹೀಮ್, ಸಿ.ವಿ.ಮಲ್ಲಿಕಾರ್ಜುನ, ತಾಪಂ ಮಾಜಿ ಸದಸ್ಯ ಸುರೇಶ ಕುಂಟನಗೌಡ, ಶಿಕ್ಷಣ ಸಂಯೋಜಕ ದಾವಲಸಾಬ್ ವಾಲಿಕಾರ, ಸಿಆರ್‌ಪಿ ಯಮನೂರಪ್ಪ ಕುರಿ, ಪ್ರಭಾರ ಮುಖ್ಯಶಿಕ್ಷಕ ಶೇಷಣಗೌಡ ಪಾಟೀಲ್, ಮುಖಂಡರಾದ ಮಹಾಂತೇಶ ಅಂಗಡಿ, ಮಲ್ಲಯ್ಯ ಕೋಮಾರಿ, ಕಿಶನ್‌ರಾವ್ ಕುಲಕರ್ಣಿ, ಸಿದ್ದರಾಮ ಬಾಮನಿ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts