ಕೂಲಿ, ಟ್ಯ್ರಾಕ್ಟರ್ ಬಾಡಿಗೆ ಪಾವತಿಸಿ

ನರೇಗಾ ಕೂಲಿಕಾರರ ಒತ್ತಾಯ ಹಿರೇಗೊಣ್ಣಾಗರ ಗ್ರಾಪಂಗೆ ಮುತ್ತಿಗೆ

ಹನುಮಸಾಗರ: ಉದ್ಯೋಗ ಖಾತ್ರಿ ಅಡಿ ಕೆಲಸ ನಿರ್ವಹಿಸಿದ ಕೂಲಿಯನ್ನು ಸರಿಯಾಗಿ ಪಾವತಿಸುತ್ತಿಲ್ಲ ಮತ್ತು ಟ್ರಾೃಕ್ಟರ್ ಬಾಡಿಗೆ ನೀಡಿಲ್ಲ ಎಂದು ಆರೋಪಿಸಿ ಕೂಲಿ ಕಾರ್ಮಿಕರು ಸಮೀಪದ ಹಿರೇಗೊಣ್ಣಾಗರ ಗ್ರಾಮ ಪಂಚಾಯಿತಿಗೆ ಮಂಗಳವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಹಿರೇಗೊಣ್ಣಾಗರ ಕೆರೆಯಲ್ಲಿ ಉದ್ಯೋಗ ಖಾತ್ರಿಯಡಿ ಕಾರ್ಮಿಕರು ತೆಗೆದ ಹೂಳನ್ನು ಕೆರೆಯ ದಡಕ್ಕೆ ಹಾಕಲು ಬಳಸಿದ ಟ್ರಾೃಕ್ಟರ್ ಬಿಲ್ ವರ್ಷ ಕಳೆದರೂ ಪಾವತಿಸಿಲ್ಲ. ಒಟ್ಟು ನಾಲ್ಕು ಲಕ್ಷಕ್ಕೂ ಅಧಿಕ ಹಣ ಬರಬೇಕು. ಇದರಿಂದ ಎಂಟು ಟ್ರಾೃಕ್ಟರ್‌ಗಳ ಮಾಲೀಕರು ಸಂಕಷ್ಟ ಎದುರಿಸುತ್ತಿದ್ದಾರೆ. ಅಲ್ಲದೆ, 15 ದಿನ ದುಡಿದ ಕೂಲಿಯನ್ನು ಸರಿಯಾಗಿ ಪಾವತಿಸುತ್ತಿಲ್ಲ. ದಿನಕ್ಕೆ 135 ರೂ. ನಂತೆ ಖಾತೆಗೆ ಜಮಾ ಮಾಡಲಾಗುತ್ತಿದೆ. ಈ ಬಗ್ಗೆ ಕೇಳಿದರೆ ಸರಿಯಾಗಿ ಮಾಹಿತಿ ನೀಡುತ್ತಿಲ್ಲ ಎಂದು ಆರೋಪಿಸಿ ಕೂಲಿಕಾರ್ಮಿಕರು ಪಿಡಿಒ ಜತೆ ವಾಗ್ವಾದ ನಡೆಸಿದರು.

ಚಂದ್ರು ಕಾಡದ, ದುರಗಪ್ಪ ಪೂಜಾರ, ಭೀಮಣ್ಣ ಜೋಗಿನ್, ಮುರ್ತುಜಾ ನದಾಫ್, ಸಂತೋಷ ಜಾಲಿಮರದ, ಬಸು ಪ್ಯಾಟಿ, ರಾಮಣ್ಣ ಹೊಸಮನಿ, ಭರಮಪ್ಪ ಮ್ಯಾಗಳಮನಿ ಇತರರಿದ್ದರು.

ಕೂಲಿಕಾರರ ಹೆಸರಿನಲ್ಲಿ ಎಷ್ಟು ಎಂಬಿ ದಾಖಲಾಗಿದೆ ಅಷ್ಟು ಹಣ ಅವರ ಖಾತೆಗೆ ಜಮಾ ಮಾಡಲಾಗಿದೆ. ಟ್ರಾೃಕ್ಟರ್ ಬಿಲ್ ಪಾವತಿಸಲು ಈಗಾಗಲೇ ಎಂಐಎಸ್ ಕಳುಹಿಸಲಾಗಿದೆ. ಸರ್ಕಾರದಿಂದ ಹಣ ಬಂದ ತಕ್ಷಣ ಮಾಲೀಕರ ಖಾತೆಗೆ ಜಮಾ ಮಾಡಲಾಗುವುದು.
| ನಿಂಗನಗೌಡ ಹಿರೇಹಾಳ ಪಿಡಿಒ ಹಿರೇಗೊಣ್ಣಾಗರ ಗ್ರಾಪಂ

Leave a Reply

Your email address will not be published. Required fields are marked *