ಶಾರ್ಟ್ ಸರ್ಕ್ಯೂಟ್‌ನಿಂದ ಮೂರು ಅಂಗಡಿಗೆ ಬೆಂಕಿ

ಹನುಮಸಾಗರ: ಪಟ್ಟಣದ ಹಳೇ ಬಸ್ ನಿಲ್ದಾಣ ಹತ್ತಿರದ ಅಂಗಡಿಗಳಲ್ಲಿ ಭಾನುವಾರ ಬೆಳಗಿನ ಜಾವ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡು ಮೂರು ಅಂಗಡಿಗಳು ಸುಟ್ಟು ಕರಕಲಾಗಿವೆ.

ರವಿಕುಮಾರ ಲಂಗಟದ ಎಂಬುವರ ಸ್ಟೇಷನರಿ ಅಂಗಡಿ, ಶಿವಪ್ಪ ಲಂಗಟದ ಎಂಬುವರ ಹೋಟೆಲ್, ಪ್ರಭು ಕರಮುಡಿಯವರ ಹೂವಿನ ಅಂಗಡಿಗೆ ಬೆಳಗ್ಗೆ 4ಕ್ಕೆ ಬೆಂಕಿ ಹತ್ತಿ ಎಲ್ಲ ವಸ್ತುಗಳು ಸಂಪೂರ್ಣ ಸುಟ್ಟಿವೆ. ಸ್ಥಳಕ್ಕೆ ಪಿಎಸ್‌ಐ ಎಚ್.ನಾಗರಾಜ, ಪ್ರಭಾರಿ ಕಂದಾಯ ನಿರೀಕ್ಷಕ ವೇಲಪ್ಪನ್, ಪಿಡಿಒ ದೇವೇಂದ್ರಪ್ಪ ಕಮತರ, ಅಗ್ನಿ ಶಾಮಕ ಠಾಣೆ ಹಾಗೂ ಜೆಸ್ಕಾಂ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣದಲ್ಲಿ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *