ಸಿನಿಮಾ

ಬಿಜೆಪಿ ಸುಳ್ಳು ಭರವಸೆಗೆ ಬೆರಗಾಗ ಬೇಡಿ- ಲಕ್ಷ್ಮಣ್ಣ ಸವದಿ ಹೇಳಿಕೆ

ಹನುಮಸಾಗರ: ಪಕ್ಷವನ್ನು ಕಟ್ಟಿ ಬೆಳಸಿದ 37 ನಾಯಕರನ್ನು ಈಗೀನ ಬಿಜೆಪಿ ನಾಯಕರು ನಿರ್ಲಕ್ಷಿಸಿದ್ದು, ಇದರ ಪರಿಣಾಮ ಮುಂದಿನ ದಿನಮಾನಗಳಲ್ಲಿ ಅನುಭವಿಸಲಿದ್ದಾರೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ್ಣ ಸವದಿ ಹೇಳಿದರು.

ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್ ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಪರ ಮತಯಾಚನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾನು 20 ವರ್ಷ ಬಿಜೆಪಿಯಲ್ಲಿದ್ದೇ ಅವರು ಹೇಗೆ ಚುನಾವಣೆ ಮಾಡುತ್ತಾರೆಂದು ನನಗೆ ಗೋತ್ತು.

ಇದನ್ನೂ ಓದಿ: ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರನಾಳಿಕೆ ಜಾರಿ – ಉಸ್ತುವಾರಿ ಅರುಣಸಿಂಗ್ ಹೇಳಿಕೆ

ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ, ಮಾಜಿ ಶಾಸಕ ಹಸನಸಾಬ್ ದೋಟಿಹಾಳ, ಜಿಪಂ ಮಾಜಿ ಅಧ್ಯಕ್ಷೆ ಮಾಲತಿ ನಾಯಕ ಮಾತನಾಡಿದರು.

ಚುನಾವಣೆ ಸಮೀಪಿಸುತ್ತಿದೆ ಬಿಜೆಪಿಯಿಂದ ರಾಶಿ ರಾಶಿ ದುಡ್ಡು ಬರುತ್ತದೆ. ಆಸೆ ಆಮೀಷಕ್ಕೆ ತೋರಿಸುತ್ತಾರೆ. ಸುಳ್ಳು ಭರವಸೆ ನೀಡುತ್ತಾರೆ. ವಿರೋಧ ಪಕ್ಷದಲ್ಲಿದ್ದರು ಸಾಕಾಷ್ಟು ಅಭಿವೃದ್ಧಿಯನ್ನು ಅಮರೇಗೌಡ ಬಯ್ಯಪುರ ಮಾಡಿದ್ದಾರೆ. ಇಲ್ಲಿಯವರಗೆ ಒಂದು ಕಪ್ಪು ಚುಕಿ ಇಲ್ಲ ಎಂದರು.

ಸಂಸದೆ ಜೆ.ಬಿ.ಮ್ಯಾಥೋರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಳಕಪ್ಪ ತಳವಾರ, ಡಾ.ಶರಣು ಹವಾಲ್ದಾರ್, ವಸಂತ ಮೇಲಿನಮನಿ, ವಕೀಲ ಅಮರೇಗೌಡ ಪಾಟೀಲ್, ಮಹಾಂತೇಶ ಅಗಸಿಮುಂದಿನ, ಪ್ರಶಾಂತ ಗಡಾದ, ಶ್ರೀಶೈಲ ಮೋಟಗಿ, ಪ್ರಕಾಶ ರಾಠೋಡ, ನಿರ್ಮಲ ಕರಡಿ, ಶಕುಂತಲಾ, ಎಸ್.ಎನ್.ಪಾಟೀಲ್, ವಿಶ್ವನಾಥ ಕನ್ನೂರ, ಸುಚಪ್ಪ ದೇವರಮನಿ, ಬಸವಂತಪ್ಪ ಕಂಪ್ಲಿ, ಸಂಗನಗೌಡ ಪಾಟೀಲ್, ಬಸಮ್ಮ ಹಿರೇಮಠ ಇತರರು ಇದ್ದರು.

Latest Posts

ಲೈಫ್‌ಸ್ಟೈಲ್