ಹನುಮಸಾಗರ: ಪಟ್ಟಣದ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡುವ ಮೂಲಕ ರಾಷ್ಟ್ರ ಮಟ್ಟದ ಜಂಪ್ ರೋಪ್ ಕ್ರೀಡಾ ಕೂಟದಲ್ಲಿ ವಿವಿಧ ಪದಕ ಗೆದ್ದು ವಿಜಯದ ನಗೆ ಬಿರಿದ್ದಾರೆ.
ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಸೆ.12 ರಿಂದ 14 ರವರೆಗೆ ಜೂನಿಯರ್ ಹಾಗೂ ಸೀನಿಯರ್ ಓಪನ್ ರಾಷ್ಟ್ರೀಯ ಜಂಪ್ ರೋಪ್ ಚಾಂಪಿಯನ್‌ಶಿಪ್ ಜರುಗಿತು. ರಾಜ್ಯ ತಂಡ ಪ್ರತಿನಿಧಿಸುತ್ತಿದ್ದ 15 ಕ್ರೀಡಾಪಟುಗಳು 6 ಬಂಗಾರ, 10 ಬೆಳ್ಳಿ, 1 ಕಂಚು ಸೇರಿ ಒಟ್ಟು 17 ಪದಕ ಗೆದ್ದಿದ್ದಾರೆ.
14 ವರ್ಷ ಒಳಗಿನ ಸಿಂಗಲ್ ರೋಪ್ ಡಬಲ್ ಅಂಡರ್ ರಿಲೇಯಲ್ಲಿ ಮಂಜುಳಾ, ಅನುಷಾ ಬಂಗಾರದ ಪದಕ, 20 ವರ್ಷದ ಒಳಗಿನ ಸಿಂಗಲ್ ರೋಪ್ ಸ್ಪೀಡ್ ರಿಲೇಯಲ್ಲಿ ಯಶೋದಾ, ಸಹನಾ, ಸುನೀತಾ, ಅನುಷಾ ಬೆಳ್ಳಿ ಪದಕ, ಸಿಂಗಲ್ ರೋಪ್ ಡಬಲ್ ಅಂಡರ್ ರಿಲೇಯಲ್ಲಿ ಸಂಗೀತಾ, ಸೌಭಾಗ್ಯಾ ಬೆಳ್ಳಿ ಪದಕ, ಸಿಂಗಲ್ ರೋಪ್ ಡಬಲ್ ಅಂಡರ್ 30 ಸೆಕೆಂಡ್‌ನಲ್ಲಿ ಸೌಭಾಗ್ಯಾ ಕಂಚಿನ ಪದಕ, ಸಿಂಗಲ್ ರೋಪ್ 30 ಸೆಕೆಂಡ್ ಸ್ಪೀಡ್‌ನಲ್ಲಿ ಯಶೋದಾ ಬೆಳ್ಳಿ ಪದಕ, 20 ವರ್ಷ ಒಳಗಿನ ಡಬಲ್ ಡಚ್ ಸ್ಪೀಡ್ ಸ್ಪ್ರಿಂಟ್‌ನಲ್ಲಿ ಮಹಮ್ಮದ್ ಇರ್ಫಾನ್, ಮಹಾರಾಜ, ಕಿಶನ್ ಆರ್. ಪವಾರ ಬೆಳ್ಳಿ ಪದಕ, 20 ವರ್ಷ ಮೇಲ್ಪಟ್ಟ ಸಿಂಗಲ್ ರೋಪ್ ಡಬಲ್ ಅಂಡರ್ ರಿಲೇಯಲ್ಲಿ ಮಹಾಂತೇಶ ಆರ್, ಮಂಜುನಾಥ ಬಂಗಾರದ ಪದಕ, ಸಿಂಗಲ್ ರೋಪ್ 30 ಸೆಕೆಂಡ್ ಸ್ಪೀಡ್‌ನಲ್ಲಿ ಮಂಜುನಾಥ ಬಂಗಾರದ ಪದಕ, ಸಿಂಗಲ್ ರೋಪ್ 3 ನಿಮಿಷ ಎಂಡೋರೆನ್ಸ್ನಲ್ಲಿ ಮಹಾಂತೇಶ ಆರ್. ಬಂಗಾರದ ಪದಕ ಗೆದ್ದಿದ್ದಾರೆ.