ಇಬ್ಬರು ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಹನುಮಸಾಗರ: ಗ್ರಾಮದ 6ನೇ ವಾರ್ಡ್‌ಗೆ ನಡೆಯುವ ಉಪ ಚುನಾವಣೆ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಗುರುವಾರ ಇಬ್ಬರು ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದರು. ಸದಸ್ಯ ಈರಪ್ಪ ಬಿಂಗಿ ಅಕಾಲಿಕ ಮರಣದಿಂದ ತೆರುವಾಗಿರುವ ಸ್ಥಾನಕ್ಕೆ ಮೇ 29ರಂದು ಮತದಾನ ನಡೆಯಲಿದೆ.

13ರಿಂದ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಿದ್ದು, ಗುರುವಾರ ಭರಮಪ್ಪ ಬಿಂಗಿ, ಹನುಮಪ್ಪ ಬಿಂಗಿ ಎಂಬ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. 17ರಂದು ಪರಿಶೀಲನೆ, 20ರಂದು ನಾಮಪತ್ರ ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇಲ್ಲಿನ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ 29ರಂದು ಮತದಾನ ನಡೆಯಲಿದೆ. ಭರಮಪ್ಪ ಬಿಂಗಿ, ಸಕ್ರಪ್ಪ ಬಿಂಗಿ, ಶಿವಪುತ್ರಪ್ಪ ಕೊಳೂರು ಇತರರಿದ್ದರು.