18 C
Bengaluru
Saturday, January 18, 2020

ಹನುಮಂತ ಬಲವಂತ, ಮಾರುತಿರಾಯ ಗುಣವಂತ

Latest News

ಡ್ರಗ್ಸ್ ನಿಯಂತ್ರಿಸದಿದ್ದರೆ ಶಿಕ್ಷಣ ಸಂಸ್ಥೆ ವಿರುದ್ಧ ಕ್ರಮ; ‘ವಿಜಯವಾಣಿ ಫೋನ್ ಇನ್ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್

ಬಡ್ಡಿ ಆಸೆಗೆ ವಂಚಕ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗದಂತೆ ಜನರಿಗೆ ಎಚ್ಚರಿಕೆ, ಹೆಣ್ಣಿನ ರಕ್ಷಣೆಗೆ ‘ವೀರವನಿತೆ’ ಪಡೆ, ಸರಗಳ್ಳತನ, ಮನೆಗಳ್ಳತನ, ದರೋಡೆಯಂಥ ಅಪರಾಧ ಕೃತ್ಯ...

PHOTOS| ಕೃಷ್ಣ ಮಠದಲ್ಲಿ ಅದಮಾರು ಪರ್ಯಾಯ ಪರ್ವ ಪ್ರಾರಂಭ ಈಶಪ್ರಿಯ ತೀರ್ಥ ಸ್ವಾಮೀಜಿ ಸರ್ವಜ್ಞ ಪೀಠಾರೋಹಣ

ಉಡುಪಿ: ಉಡುಪಿ ಕೃಷ್ಣ ಮಠದಲ್ಲಿ ಅದಮಾರು ಮಠದ ಪರ್ಯಾಯ ಪರ್ವ ಶನಿವಾರ ಪ್ರಾತಃ 5.57ರ ಶುಭ ಮುಹೂರ್ತದಲ್ಲಿ ಸರ್ವಜ್ಞ ಪೀಠಾರೋಹಣದ...

ನವದೆಹಲಿಯಲ್ಲಿ ಜನವರಿ 20ರಂದು ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಹಾವೇರಿ ವಿದ್ಯಾರ್ಥಿನಿ ವೇದಾ ಆಯ್ಕೆ

ಹಾವೇರಿ: ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಹಾವೇರಿ ವಿದ್ಯಾರ್ಥಿನಿ ಆಯ್ಕೆಯಾಗಿದ್ದಾಳೆ. ಹಾವೇರಿ ಜಿಲ್ಲೆಯ ಬ್ಯಾಡಗಿ ವಿದ್ಯಾರ್ಥಿನಿ ಪಿ‌. ವೇದಾ ಆಯ್ಕೆಯಾಗಿದ್ದು, ಜನವರಿ 20...

ಕರ್ಮ ಎಂಬ ಬಿಡಲಾರದ ನಂಟು

ಭಗವಂತನನ್ನು ಪ್ರತ್ಯಕ್ಷಿಸಿಕೊಳ್ಳುವುದು ಸುಲಭದ ಮಾತಲ್ಲ. ಅದಕ್ಕೆ ಸ್ವಪ್ರಜ್ಞೆಯ ಸಂಪೂರ್ಣ ತಪಸ್ಸು ಅಗತ್ಯ. ನಿರಾಕಾರದಲ್ಲಿ ಬ್ರಹ್ಮನನ್ನು ಕಾಣಲು ಉಚ್ಚಮಟ್ಟದ ಸಾಧನೆ ಬೇಕಾಗುವುದು. ಅದಕ್ಕೆ ಸಮಾಜದಲ್ಲಿ...

ಅಮೃತಬಿಂದು

ನ ಧನಾದೌ ವಹೇಲ್ಲೋಭಂ ಶಿವಸ್ಯಾರಾಧನೇ ವಹೇತ್ | ಅಲೋಭಾಖ್ಯಮಿದಂ ಶೀಲಂ ತ್ರಯತ್ರಿಂಶಂ ಸಮೀರಿತಮ್ || ಶಿವನ ಆರಾಧನೆಯ ವಿಷಯದಲ್ಲಿ ಲೋಭ ತಾಳಬೇಕೇ ಹೊರತು ಧನ,...

| ಮಂಡಗದ್ದೆ ಪ್ರಕಾಶ ಬಾಬು

ಕೇಸರಿ ಎಂಬ ಕಪಿಶ್ರೇಷ್ಠನ ಪತ್ನಿಗೆ ಬಹುಕಾಲ ಮಕ್ಕಳಿರಲಿಲ್ಲ. ಆಕೆ ತನ್ನ ನೋವನ್ನು ಮತಂಗ ಮುನಿಗಳ ಹತ್ತಿರ ಹೇಳಿಕೊಂಡಳು. ಆಗ ಮುನಿಗಳು ‘ನೀನು ಪಂಪಾ ಸರೋವರಕ್ಕೆ ಪೂರ್ವದಲ್ಲಿರುವ ಆಕಾಶಗಂಗೆ ಎಂಬ ತೀರ್ಥದಲ್ಲಿ ಸ್ನಾನಮಾಡಿ ಭಕ್ತಿಯಿಂದ ಶಿವನನ್ನು ಹಾಗೂ ಶ್ಯಾಮಲಾದೇವಿಯನ್ನು ಕುರಿತು ತಪಸ್ಸು ಮಾಡು. ನಿನ್ನ ಇಚ್ಛೆ ನೆರವೇರುತ್ತದೆ’ ಎಂದರು. ಅಂತೆಯೆ ಆಕೆ ಸತತ 12 ವರ್ಷಗಳ ಕಾಲ ತಪಸ್ಸುಮಾಡಿ ಶಿವನನ್ನು ಹಾಗೂ ಶ್ಯಾಮಲಾದೇವಿಯನ್ನು ಮೆಚ್ಚಿಸಿದಳು. ಅವಳ ಭಕ್ತಿಗೆ ಒಲಿದು ಶಿವನು ನಿತ್ಯವೂ ಒಂದೊಂದು ಹಣ್ಣನ್ನು ವಾಯುದೇವರ ಮೂಲಕ ಕಳುಹಿಸುತ್ತಿದ್ದನು. ವಾಯು ಆ ಹಣ್ಣನ್ನು ಗಾಳಿಯ ಮೂಲಕ ಆ ಭಕ್ತೆಗೆ ಕೊಡುತ್ತಿದ್ದನು. ವಾಯುವಿನ ಅನುಗ್ರಹ ಹಾಗೂ ಶ್ರೀ ಚಕ್ರದೇವತೆಯ ವರಪ್ರಸಾದದಿಂದ ಆಕೆ ಗರ್ಭಿಣಿಯಾಗಿ ಒಂದು ಶುಭದಿನದಲ್ಲಿ ಆದರ್ಶಪುತ್ರನನ್ನು ಪಡೆದಳು. ಆತನೇ ಆಂಜನೇಯ.

ಆಂಜನೇಯನ ಹುಟ್ಟಿನ ಬಗ್ಗೆ ಇನ್ನೊಂದು ಕಥೆಯಿದೆ. ಅಂಜನೆಯು ಅಂಜನಾಚಲದಲ್ಲಿ ಕುಳಿತು ತಪಸ್ಸು ಮಾಡುತ್ತಿದ್ದಳು. ಆಕೆಯ ತಪಸ್ಸಿನ ಶಕ್ತಿ ಮೂರು ಲೋಕಗಳಿಗೂ ಹರಡಿತು. ಆಗ ಶಿವನು ತಪಸ್ಸಿನ ಅಂತರಾರ್ಥವನ್ನು ತಿಳಿದು ಪಾರ್ವತಿಯ ಹೊಟ್ಟೆಯ ಭಾಗದ ಹೊಕ್ಕಳು ಬಳ್ಳಿಯನ್ನು ಅಂಜನೆಗೆ ಸಮರ್ಪಿಸಿದನು. ಅಂಜನೆಯು ಆ ಹೊಕ್ಕಳಬಳ್ಳಿಯನ್ನು ಭಕ್ತಿಪೂರ್ವಕವಾಗಿ ತನ್ನ ಹೊಟ್ಟೆಯ ಭಾಗಕ್ಕೆ ಸುತ್ತಿಕೊಂಡಳು ಹಾಗೂ ಕಠಿಣ ತಪಸ್ಸು ಮಾಡಿದಳು. ಶಿವ ಹಾಗೂ ದೇವಿಯ ಅನುಗ್ರಹದಿಂದ ಅಂಜನೆಗೆ ಮಗು ಆಯಿತು. ಆ ಮಗುವೇ ಆಂಜನೇಯ. ಈ ಕಾರಣದಿಂದ ಆಂಜನೇಯನಿಗೆ ಪಾರ್ವತಿ ಗರ್ಭಸಂಭೂತ ಹಾಗೂ ರುದ್ರವೀರ್ಯ ಸಮುದ್ಭವ ಎಂಬ ಹೆಸರು ಇದೆ. ವಾಯುವಿಗೆ ಎಲ್ಲವನ್ನೂ ಮೀರಿಹೋಗುವ ಶಕ್ತಿಯಿದೆ. ಇದನ್ನೂ ಮೀರಿಹೋಗುವ ಶಕ್ತಿ ಮನಸ್ಸಿಗಿದೆ. ಇದನ್ನೇ ಮನೋವೇಗ ಎನ್ನುವರು. ಮನೋವೇಗ ಉಳ್ಳವನೇ ಆಂಜನೇಯ. ಆದ್ದರಿಂದ ಇವನನ್ನು ಋಷಿ ಮುನಿಗಳು ‘ಮನೋವೇಗರ ಗಮನ’ ಎಂದು ಹೇಳಿರುವರು. ನಮ್ಮಮನಸ್ಸಿನಲ್ಲಿರುವ ಸಂಕಲ್ಪವನ್ನು ತಿಳಿದು ಅದಕ್ಕೆ ಸ್ಪಂದಿಸಿ ನಮ್ಮನ್ನು ಭವಸಾಗರದಿಂದ ದಾಟಿಸುವ ಶಕ್ತಿ ಈ ಆಂಜನೇಯನಿಗಿದೆ. ಈ ಪಂಚವಾಯುಗಳೇ ಆಂಜನೇಯನ ಪಂಚಮುಖ. ಕುಜಾವಿ ಪಂಚಗ್ರಹಗಳು, ಶಿವನ ಪಂಚಮುಖಗಳು, ಗಾಯಿತ್ರಿಯ ಪಂಚಮುಖಗಳು, ಸಕಲ ಬ್ರಹ್ಮಾಂಡವನ್ನು ತನ್ನ ಅಗಾಧ ಶಕ್ತಿಯಿಂದ ವ್ಯಾಪಿಸಿ ಭಕ್ತಜನರನ್ನು ಉದ್ಧಾರ ಮಾಡಲು ಜನಿಸಿ ಬಂದಿರುವವನೇ ಆಂಜನೇಯ.

ಆಂಜನೇಯನು ಸೂರ್ಯನಿಂದ ಎಲ್ಲಾ ವಿದ್ಯೆಯನ್ನು ಕಲಿತು ಜ್ಞಾನವಂತನಾದನು. ನಂತರ ಸೂರ್ಯನ ಹತ್ತಿರ ‘ಹೇ ದೇವ! ಈ ವಿದ್ಯೆಗಳು ನನ್ನಲ್ಲಿಯೇ ಉಳಿಯಬೇಕಾದರೆ ಏನು ಮಾಡಬೇಕು?’ ಎಂದು ಪ್ರಾರ್ಥಿಸಿದನು. ಆಗ ಸೂರ್ಯನು ‘ನೀನು ಸಂಸಾರ, ವಿವಾಹ ಬಂಧನಗಳಿಂದ ದೂರ ಇರಬೇಕು. ಬ್ರಹ್ಮಚಾರಿಯಾಗಿಯೇ ಉಳಿದರೆ ಕಲಿತ ವಿದ್ಯೆ ನಿನ್ನಲ್ಲಿಯೇ ಉಳಿದು, ಜಗದ್ವಿಖ್ಯಾತನಾಗಿ ಮೆರೆಯುವೆ’ ಎಂದನು. ಆಂಜನೇಯ ಹಾಗೇ ಮಾಡಿದನು.

ಆಂಜನೇಯ ಚಿರಂಜೀವಿ ಆದದ್ದು: ಬಹಳ ವರ್ಷಗಳ ಕಾಲ ಅಗಲಿದ್ದ ಸೀತಾ-ರಾಮರನ್ನು ಒಂದು ಮಾಡಿ ಶ್ರೀರಾಮ ಪಟ್ಟಾಭಿಷೇಕವನ್ನು ಆಂಜನೇಯನು ಕಣ್ತುಂಬ ನೋಡಿ ಆನಂದಿಸಿದನು. ಆಗ ಸೀತಾಮಾತೆಯು ‘ನೀನು ನನ್ನನ್ನು ಪತಿಯ ಹತ್ತಿರ ಸೇರಿಸಿದೆ. ಇದರ ಫಲವಾಗಿ ಶ್ರೀರಾಮನ ಕೀರ್ತಿ ಎಲ್ಲಿಯವರೆಗೆ ಇರುತ್ತದೆಯೋ, ಸೂರ್ಯ ಚಂದ್ರರು ಎಲ್ಲಿಯವರೆಗೆ ಇರುವರೋ ಅಲ್ಲಿಯವರೆಗೂ ನೀನು ಚಿರಂಜೀವಿ’ ಎಂದು ಆಶೀರ್ವಾದ ಮಾಡಿದಳೆಂಬ ಕಥೆಯಿದೆ.

ಆಂಜನೇಯನಿಗೆ ಬಾಲ್ಯದಲ್ಲಿಯೇ ಬ್ರಹ್ಮದೇವನು ನಿನಗೆ ಬ್ರಹ್ಮಾಸ್ತ್ರದಿಂದ ತೊಂದರೆ ಆಗದಿರಲಿ ಎಂದು ವರ ನೀಡಿದ್ದ. ಮಾರುತಿ ಮಹಾವೀರ, ಅಸ್ತ್ರ ದಿವ್ಯಾಸ್ತ್ರ, ಪರಮಾಸ್ತ್ರಗಳನ್ನು ಬಲ್ಲವನು. ಭೂಮಿ ಆಕಾಶ ಸೇರಿಸುವ ರೀತಿ ಬೆಳೆದು ನಿಲ್ಲಬಲ್ಲ ಶಕ್ತಿ ಇರುವವನು. ಆದರೆ, ‘ಆಂಜನೇಯನಿಗೆ ಇರುವ ಅಪರಿಮಿತ ಶಕ್ತಿ ಮರೆತುಹೋಗಲಿ. ಸೂಕ್ತ ಸನ್ನಿವೇಶಗಳಲ್ಲಿ ಯಾರಾದರೂ ನೆನಪು ಮಾಡಿದರೆ ಮಾತ್ರ ಆ ಎಲ್ಲಾ ಶಕ್ತಿ ಪ್ರಜ್ವಲಿಸಲಿ’ ಎಂದು ಬ್ರಹ್ಮದೇವನೇ ಬ್ರಾಹ್ಮಿಕ ಶಾಪ ನೀಡಿದ್ದನು.

ಆಂಜನೇಯನಿಗೆ ಸಂಗೀತದ ಜ್ಞಾನ ಅಪಾರವಾಗಿತ್ತು. ರಾಮನಾಮವನ್ನು ಸಂಗೀತದ ಲಯಬದ್ಧತೆಗೆ ಸೇರಿಸಿ ಹಾಡುತ್ತಿದ್ದನು. ಒಮ್ಮೆ ನಾರದ ಮತ್ತು ತುಂಬರರ ಸಂಗೀತದ ವಿಚಾರದಲ್ಲಿ ತಾವೇ ಹೆಚ್ಚು ಎಂದು ವಾದ-ವಿವಾದ ನಡೆಯುವುದು. ಸಂಗೀತದಲ್ಲಿ ಯಾರು ಶ್ರೇಷ್ಠ ಎಂದು ತೀರ್ಮಾನ ಮಾಡಲು ಮಾರುತಿಗೆ ಹೇಳಿದರು. ಸಂಗೀತದ ಬಗ್ಗೆ ಈ ವಾನರ ಶ್ರೇಷ್ಠ ಪ್ರಶ್ನೆಗಳನ್ನು ಕೇಳಿದಾಗ ಮತ್ತು ಸ್ವರಗಳನ್ನು ಸಂಗಮಗೊಳಿಸಿ ಆಲಾಪನೆ ಮಾಡಿದಾಗ ಬೆರಗಾದರು. ಮಾರುತಿಗೆ ಶರಣಾಗಿ ಅವನ ಸಂಗೀತ ಜ್ಞಾನ ಮತ್ತು ಪ್ರತಿಭೆಯನ್ನು ಪ್ರಶಂಸಿಸಿದರು.

ಶ್ರೀರಾಮನ ಭಕ್ತರಾದ ಮಂತ್ರಾಲಯದ ಗುರು ರಾಘವೇಂದ್ರ ತೀರ್ಥರಿಗೆ ಆಂಜನೇಯನು ಪಂಚಮುಖಿಯ ದರ್ಶನ ನೀಡಿರುವನು. ಪಂಚಮುಖಿಯ ಆಂಜನೇಯನ ಮುಖಗಳಲ್ಲಿ ದಿಕ್ಕನ್ನು ನಿಯಂತ್ರಿಸುವ ಶಕ್ತಿಯಿದೆ. ಆಂಜನೇಯನ ಆರಾಧನೆಯಿಂದ ಗ್ರಹಪೀಡೆ ಪರಿಹಾರವಾಗುವುದು.

ಆಂಜನೇಯನ ಪರಮ ಆರಾಧಕರಾದ ಶ್ರೀ ಮಧ್ವಾಚಾರ್ಯರು ಮಾರುತಿಯ ಅವತಾರ ಎಂದು ಅವರ ಜೀವನ ಚರಿತ್ರೆಯಿಂದ ತಿಳಿಯುವುದು. ಹನುಮಂತ ವಜ್ರಕಾಯದವನು. ಈತನಿಗೆ ರಾಮನಾಮದ ರಕ್ಷಾಕವಚ ಇರುವುದರಿಂದ ಯಾವ ಶಕ್ತಿಯೂ ಹತ್ತಿರ ಬರುವುದಿಲ್ಲ. ಈ ಮಂತ್ರದ ಬಲದಿಂದ ಶನಿ ಪ್ರಭಾವವು ಮುಟ್ಟಲಾಗಲಿಲ್ಲ. ‘ಎಲ್ಲಿ ನಿನ್ನನ್ನು ಆರಾಧಿಸುವರೋ ಅಲ್ಲಿ ನಾನು ಅವರನ್ನು ಪೀಡಿಸುವುದಿಲ್ಲ’ ಎಂದು ಶನಿದೇವ ಹೇಳಿರುವನು. ಆದ್ದರಿಂದ ಸಾಡೆಸಾತ್ ಶನಿ, ಪಂಚಮಿ ಶನಿ, ಅಷ್ಟಮ ಶನಿ, ಜಾತಕದಲ್ಲಿ ಶನಿದೋಷ ಇರುವವರು ಆಂಜನೇಯನನ್ನು ನಿರಂತರವಾಗಿ ಆರಾಧಿಸಿದರೆ ದೋಷಗಳಿಂದ ಮುಕ್ತಿ ಹೊಂದಬಹುದು ಎಂಬ ನಂಬಿಕೆಯಿದೆ.

ಶ್ರೀ ಶಂಕರಾಚಾರ್ಯರು ಸಹ ಆಂಜನೇಯನನ್ನು ಪೂಜಿಸಿರುವರು. ‘ಶ್ರೀರಾಮ ಜಯರಾಮ ಜಯಜಯರಾಮ’ ಮಂತ್ರವನ್ನು ಪ್ರತಿದಿನ 1008 ಸಲ ಪಠಿಸಿದರೆ ದುಃಖಗಳಿಂದ ಪಾರಾಗಬಹುದು ಎಂಬುದು ಭಜಕರ ವಿಶ್ವಾಸ.

ಹನುಮಾನ್ ಜಯಂತಿ ಹನುಮಾನ್ ವ್ರತ

ಪ್ರತಿ ವರ್ಷ ಹನುಮಾನ್ ಜಯಂತಿ ಬರುವುದು ಮಾರ್ಗಶಿರ ಮಾಸದ ಶುಕ್ಲಪಕ್ಷದ ತ್ರಯೋದಶಿ ದಿನ. ವಾಲ್ಮೀಕಿ ರಾಮಾಯಣದ ಪ್ರಕಾರ ಆಂಜನೇಯ ಆ ದಿನ ಜನಿಸಿದ. ತುಳಸಿ ರಾಮಾಯಣದ ಪ್ರಕಾರ ಆಂಜನೇಯ ಚೈತ್ರ ಮಾಸದ ಹುಣ್ಣಿಮೆ ದಿನ ಜನಿಸಿದ ಎಂದು ಹೇಳಲಾಗಿದೆ. ಅಂದು ಸಾಮಾನ್ಯವಾಗಿ ಉತ್ತರಪ್ರದೇಶದ ಕಡೆಯಲ್ಲಿ ಹನುಮಾನ್ ವ್ರತ ಆಚರಿಸಲಾಗುತ್ತದೆ. ಹನುಮಾನ್ ವ್ರತ ಎಂದರೆ ಮಂಗಳಗೌರಿ ವ್ರತ, ಅನಂತನ ವ್ರತದ ಹಾಗೆ ಆಂಜನೇಯನನ್ನು ಪೂಜಿಸುವುದು.

ಕೆಲವು ಕಡೆ 47 ದಿನಗಳ ಕಾಲ ಹನುಮಾನ್ ದೀಕ್ಷೆ ತೆಗೆದುಕೊಂಡು 48ನೇ ದಿನ ಅಂದರೆ ಹನುಮಂತನ ವ್ರತದ ದಿನ ದೀಕ್ಷೆ ಕೊನೆಗೊಳಿಸಲಾಗುತ್ತದೆ. ಉತ್ತರ ಕರ್ನಾಟಕದಲ್ಲಿ ಹನುಮ ಜಯಂತಿಯನ್ನು ಚೈತ್ರ ಮಾಸದ ಹುಣ್ಣಿಮೆ ದಿನ ಆಚರಿಸಿದರೆ ದಕ್ಷಿಣ ಕರ್ನಾಟಕದ ಭಾಗದಲ್ಲಿ ಹೆಚ್ಚಾಗಿ ಮಾರ್ಗಶಿರ ಮಾಸದ ಶುಕ್ಲಪಕ್ಷದ ತ್ರಯೋದಶಿ ದಿನ ಆಚರಿಸಲಾಗುತ್ತದೆ. ಅಂದು ಕೆಲವು ಕಡೆ ಹನುಮಂತನ ರಥೋತ್ಸವಗಳು ನಡೆಯುತ್ತವೆ.

‘ನಡೆದಾಡುವ ಮಾರುತಿ’ ಎಂದೇ ಹೆಸರಾಗಿರುವ ಅವಧೂತ ಶ್ರೀ ಬಿಂದುಮಾಧವ ಶರ್ಮಾ ಅವರು ತಿಳಿಸುವ ಪ್ರಕಾರ ಮಾರ್ಗಶಿರ ಮಾಸದ ಶುಕ್ಲ ಪಕ್ಷದ ತ್ರಯೋದಶಿ ದಿನವನ್ನು ಹನುಮ ಜಯಂತಿಯಾಗಿ ಆ ಊರಿನಲ್ಲಿರುವ ವೀರ ಪ್ರತಾಪ ಆಂಜನೇಯನ ದೇವಾಲಯದಲ್ಲಿ ಆಚರಿಸುವರು.

ವಿಡಿಯೋ ನ್ಯೂಸ್

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...

VIDEO| ಮಗಳ ಸಾವನ್ನು ಮುಂದಿಟ್ಟಕೊಂಡು ರಾಜಕೀಯ ಮಾಡುತ್ತಿದ್ದಾರೆ; ನಿರ್ಭಯಾ ಪ್ರಕರಣದ...

ನವದೆಹಲಿ: ನಿರ್ಭಯಾ ಪ್ರಕರಣ ಅಪರಾಧಿಗಳ ಗಲ್ಲು ಮುಂದೂಡುತ್ತಿರುವುದಕ್ಕೆ ಸಂತ್ರಸ್ಥೆ ತಾಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಈವರಗೆ ನಾನು ರಾಜಕೀಯದ ಬಗ್ಗೆ ಮಾತನಾಡಿಲ್ಲ. 2012ರಲ್ಲಿ ಪ್ರಕರಣ ನಡೆದಾಗ, ಅದನ್ನು ಖಂಡಿಸಿ...

VIDEO: ಪಕ್ಕೆಲುಬು ಆಯ್ತು…ಈಗ ಪುಳಿಯೊಗರೆ; ಮತ್ತೊಂದು ಸರ್ಕಾರಿ ಶಾಲೆಯಿಂದ ಹೊರಬಿತ್ತು...

ಸಕಲೇಶಪುರ: ಪಕ್ಕೆಲುಬು ಹೇಳಲು ಬಾರದ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಶಿಕ್ಷಕನೋರ್ವ ವಿವಾದ ಸೃಷ್ಟಿಸಿದ್ದ. ಬಾಲಕ ಪಕ್ಕೆಲುಬು ಹೇಳಲಾಗದೆ ಕಷ್ಟಪಡುತ್ತಿದ್ದರೆ ಅದನ್ನು ವಿಡಿಯೋ ಮಾಡಿದ್ದ ಕುರುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ...

ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನಸೆಳೆದಿದ್ದ ಟೀಂ ಇಂಡಿಯಾ ಸೂಪರ್​ ಫ್ಯಾನ್​...

ನವದೆಹಲಿ: ಕಳೆದ ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದ ಟೀಂ ಇಂಡಿಯಾದ ಸೂಪರ್​ ಫ್ಯಾನ್​ ಚಾರುಲತಾ ಪಟೇಲ್​ (87) ನಿಧನರಾಗಿದ್ದಾರೆ. 2019ರಲ್ಲಿ ವಿಶ್ವಕಪ್​ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಚಾರುಲತಾ ಪಟೇಲ್​ ಕ್ಯಾಮರಾಕಣ್ಣಿಗೆ...

VIDEO| ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರೋ ಆಸ್ಟ್ರೇಲಿಯಾ ಮೇಲೆ ವರುಣನ ಕೃಪೆ:...

ಸಿಡ್ನಿ: ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರುವ ಕಾಂಗರೂ ನಾಡು ಆಸ್ಟ್ರೇಲಿಯಾ ಮೇಲೆ ಇದೀಗ ವರುಣ ದೇವ ಕೃಪೆ ತೋರಿದ್ದಾನೆ. ಇದರ ನಡುವೆ 18 ತಿಂಗಳ ಮಗುವೊಂದು ಮೊದಲ ಬಾರಿಗೆ ಮಳೆ ಸುರಿಯುವುದನ್ನು...