BBK11: ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಎಂದೇ ಖ್ಯಾತಿ ಪಡೆದಿರುವ ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಗಳು ಇದೀಗ ಯಶಸ್ವಿ 16 ವಾರಗಳನ್ನು ಪೂರೈಸಿ ಕೊನೆ ಹಂತಕ್ಕೆ ಬಂದಿದ್ದು ಎಲ್ಲರೂ ಅಂದುಕೊಂಡಂತೆ ಹನುಮಂತ ಸೀಸನ್ 11ರ ವಿನ್ನರ್ ಆಗಿ ಹೊರ ಹೊಮ್ಮಿದ್ದು, ತ್ರಿವಿಕ್ರಮ್ ರನ್ನರ್ ಆಪ್ ಆಗಿದ್ದಾರೆ.
ಇದನ್ನೂ ಓದಿ:‘ಹಿಂದು ರಾಷ್ಟ್ರ’ ಘೋಷಣೆಗೆ ಗೌಪ್ಯ ತಯಾರಿ: ಬಿ.ಕೆ.ಹರಿಪ್ರಸಾದ್ ಸಂಶಯ | Revealed on Feb-3
ಕೊನೆಯ 15 ವಾರಗಳ ಬಳಿಕ ಮನೆಯಲ್ಲಿ ಉಳಿದುಕೊಂಡಿದ್ದ ಟಾಪ್ 6 ಮಂದಿಯಲ್ಲಿ ನಡೆದ ಪೈಪೋಟಿಯಲ್ಲಿ ಶನಿವಾರ ಭವ್ಯಾ ಹೊರ ಬಂದರು. ಬಳಿಕ ಭಾನುವಾರ ಉಗ್ರಂ ಮಂಜು ಹೊರ ಬಿದ್ದ ಬೆನ್ನಲ್ಲೆ ಮೋಕ್ಷಿತಾ ಕೂಡ ಹೊರ ನಡೆದರು. ನಂತರ ಫೈನಲ್ನ ಮೂರು ಕಂಟೆಸ್ಟ್ನಲ್ಲಿ ರಜತ್ ಹೊರ ಬಂದ ಬಳಿಕ ಉಳಿದ ಇಬ್ಬರಲ್ಲಿ (ಹನುಮಂತ ಮತ್ತು ತ್ರಿವಿಕ್ರಮ) ರನ್ನರ್ ಮತ್ತು ವಿನ್ನರ್ ಯಾರೆಂದು ಘೋಷಿಸುವುದೊಂದೆ ಬಾಕಿ ಇತ್ತು. ಕೊನೆಯದಾಗಿ ಕಿಚ್ಚ ಸುದೀಪ ಪ್ರತಿ ಸೀಸನ್ನಂತೆ ಬಲ ಮತ್ತು ಎಡ ಕೈ ಎತ್ತುವ ಮೂಲಕ ಹನುಂಮಂತ ವಿನ್ನರ್ ಎಂದು ಘೋಷಿಸಿದರು.