More

    ಪಾಲಕರಿಗೆ ಪತ್ರ ಬರೆದ ವಿದ್ಯಾರ್ಥಿಗಳು

    ಕೊಪ್ಪಳ: ತಾಲೂಕಿನ ಹನುಮನಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು ಶುಕ್ರವಾರ ಪಾಲಕರಿಗೆ ಪತ್ರ ಬರೆಯುವ ಮೂಲಕ ವಿನೂತನವಾಗಿ ಮತದಾನ ಜಾಗೃತಿ ಮೂಡಿಸಿದರು.


    ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ, ಮಕ್ಕಳಿಂದ ಪತ್ರ ಬರೆಸಿ ಓದಿಸುವ ಮೂಲಕ ಮತದಾನ ಮಹತ್ವ ತಿಳಿಸಿದರು. ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ ಮತ ಚಲಾಯಿಸಬೇಕು. ನೆರೆಹೊರೆಯ ಮನೆಯವರಿಗೂ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಲು ತಿಳಿಸಿದರು. ಕಾರ್ಯಕ್ರಮ ಬಳಿಕ 163ನೇ ಮತಗಟ್ಟೆಗೆ ಭೇಟಿ ನೀಡಿ ಮೂಲ ಸೌಕರ್ಯಗಳನ್ನು ಪರಿಶೀಲಿಸಿದರು. ಡಿಡಿಪಿಐ ಎಂ.ಎ.ರಡ್ಡೇರ ಇತರರಿದ್ದರು.


    ಬಿ.ಇಡಿ ವಿದ್ಯಾರ್ಥಿಗಳಿಗೆ ಅರಿವು: ತಾಲೂಕು ಸ್ವೀಪ್ ಸಮಿತಿಯಿಂದ ಶುಕ್ರವಾರ ಕೊಪ್ಪಳದ ರಾಜೀವ್‌ಗಾಂಧಿ ಬಿ.ಇಡಿ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಮತದಾನ ಜಾಗೃತಿ ಮೂಡಿಸಲಾಯಿತು. ತಾಪಂ ಇಒ ದುಂಡಪ್ಪ ತುರಾದಿ ಮಾತನಾಡಿ, ಪ್ರತಿಯೊಬ್ಬರೂ ತಪ್ಪದೆ ಮತದಾನ ಮಾಡುವಂತೆ ಸೂಚಿಸಿದರು. ಇವಿಎಂ ಹಾಗೂ ವಿವಿ ಪ್ಯಾಟ್ ಕಾರ್ಯನಿರ್ವಹಣೆ ಕುರಿತು ಮಾಹಿತಿ ನೀಡಿದರು. ಮತದಾನ ಪ್ರತಿಜ್ಞಾವಿಧಿ ಬೋಧಿಸಿದರು. ಕಾಲೇಜು ಪ್ರಾಚಾರ್ಯ ವಿನೋದ ಹೂಲಿ, ತಾಲೂಕು ಯೋಜನಾಧಿಕಾರಿ ರಾಜೇಸಾಬ್, ಸ್ವೀಪ್ ಸಮಿತಿ ಸದಸ್ಯರಾದ ಬಸವರಾಜ ಬಳಿಗಾರ, ಪೂರ್ಣೇಂದ್ರಸ್ವಾಮಿ, ವೀರೇಶ್ ಬಡಿಗೇರ, ಕೋಳೂರು ಗ್ರಾಪಂ ಪಿಡಿಒ ಸೋಮಶೇಖರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts