ಮಾವಿನಹೊಂಡದಲ್ಲಿ ಹನುಮ ದೇವರ ಜಾತ್ರೆ

ರಾಯಬಾಗ: ತಾಲೂಕಿನ ಮಾವಿನಹೊಂಡ ಗ್ರಾಮದಲ್ಲಿ ಸೋಮವಾರ ಶ್ರೀ ಹನುಮ ದೇವರ ಜಾತ್ರಾ ಮಹೋತ್ಸವ ಸಂಭ್ರಮದಿಂದ ಜರುಗಿತು.

ವಿವಿಧ ವಾದ್ಯಮೇಳದೊಂದಿಗೆ ಪಲ್ಲಕ್ಕಿ ಹಾಗೂ ಬೆಳ್ಳಿ ಕುದುರೆ ಮೆರವಣಿಗೆ ನಡೆಯಿತು. ಮಧ್ಯಾಹ್ನ ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಜಾತ್ರೆ ನಿಮಿತ್ತ ಜೋಡು ಕುದುರೆ ಶರ್ಯತ್ತು, ಸೈಕಲ್ ಹಾಗೂ ಗುಂಡು ಎತ್ತುವ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಸೈಕಲ್ ಶರ್ಯತ್ತಿನಲ್ಲಿ ಕಲ್ಲೊಳ್ಳಿಯ ನಾಗಪ್ಪ ಮರಡಿ ಪ್ರಥಮ, ಸಾರಾಪುರದ ಶೆಟ್ಟೆಪ್ಪ ಗಸ್ತಿ ದ್ವಿತೀಯ ಹಾಗೂ ನಿಪನಾಳದ ವಾಸು ಬೊರಗೊಡ ತೃತೀಯ ಸ್ಥಾನ ಪಡೆದುಕೊಂಡರು.

ಜೋಡು ಕುದುರೆ ಶರ್ಯತ್ತಿನಲ್ಲಿ ಕಂಕಣವಾಡಿಯ ಆಕಾಶ ಕಲ್ಲೊಳ್ಳಿ ಪ್ರಥಮ, ಮುಶಪ್ಪ ಕಲ್ಲೊಳ್ಳಿ ದ್ವಿತೀಯ ಹಾಗೂ ನಂದಿಕುರಳಿಯ ವಿಶಾಲ ಖಿಲಾರಿ ತೃತೀಯ ಸ್ಥಾನ ಪಡೆದರು. ವಿಜೇತರಿಗೆ ಜೈ ಹನುಮ ದೇವಸ್ಥಾನ ಜಾತ್ರಾ ಮಹೋತ್ಸವ ಕಮಿಟಿ ಸದಸ್ಯರು ನಗದು ಬಹುಮಾನ ವಿತರಿಸಿದರು.