ಹಿರೇಕೆರೂರ: ಯಾವುದೋ ವಿಷಯಕ್ಕೆ ಮಾನಸಿಕ ಮಾಡಿಕೊಂಡ 108 ಆಂಬುಲೆನ್ಸ್ ಚಾಲಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿಯ ದುರ್ಗಾ ನಗರದಲ್ಲಿ ಗುರುವಾರ ನಡೆದಿದೆ.
ಬಸನಗೌಡ ಸಿದ್ದಪ್ಪ ಪಾಟೀಲ (25) ಮೃತ ವ್ಯಕ್ತಿ.
ಈತ 108 ಆಂಬುಲೆನ್ಸ್ನ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಯಾವುದೋ ವಿಷಯಕ್ಕೆ ಮನಸ್ಸಿಗೆ ಬೇಜಾರು ಮಾಡಿಕೊಂಡು ಮಾನಸಿಕವಾಗಿದ್ದ. ಇದರಿಂದ ಮನೆಯಲ್ಲಿಯೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಕುರಿತು ಹಿರೇಕೆರೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
