ಕೊಕ್ಕಡ: ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದ ಶ್ರೀ ಶಾಸ್ತಾರ ಗುಡಿಯ ನೂತನ ಗರ್ಭಗುಡಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 3 ಲಕ್ಷ ರೂ. ಅನುದಾನವನ್ನು ಜುಲೈ 25ರಂದು ನೀಡಲಾಗಿದೆ.
ಅನುದಾನದ ಅನ್ನು ಧರ್ಮಸ್ಥಳದ ಎಸ್‌ಕೆಡಿಆರ್‌ಡಿಪಿಯ ಬೆಳ್ತಂಗಡಿ ತಾಲೂಕಿನ ಯೋಜನಾಧಿಕಾರಿ ಸುರೇಂದ್ರ ದೇವಸ್ಥಾನದ ಅಧ್ಯಕ್ಷ ಶ್ರೀಧರ್ ರಾವ್ ಅವರಿಗೆ ಹಸ್ತಾಂತರಿಸಿದರು.
ಧರ್ಮಸ್ಥಳ ವಲಯ ಮೇಲ್ವಿಚಾರಕ ರವೀಂದ್ರ, ಸೇವಾ ಪ್ರತಿನಿಧಿ ಕುಮಾರಿ ಭವಾನಿ, ಒಕ್ಕೂಟ ಅಧ್ಯಕ್ಷ ಬಾಲಕೃಷ್ಣ ದೇವಾಡಿಗ, ದೇವಸ್ಥಾನದ ಕಾರ್ಯದರ್ಶಿ ಕುಸುಮಾಕರ, ಸಂತೋಷ್ ಜೈನ್, ಸವಿತಾ, ವಿಜಯ, ಶೀನಪ್ಪ ಗೌಡ ಮತ್ತು ದೇವಸ್ಥಾನದ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಊರ ಭಕ್ತರು ಉಪಸ್ಥಿತರಿದ್ದರು.