More

  ಭುವನೇಶ್ವರಿ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಯಲ್ಲಿ ಹುಟ್ಟುಹಬ್ಬ

  ಗದಗ: ವಿಶ್ವ ಕಲ್ಯಾಣ (ರಿ) ಗದಗ ಸಂಚಾಲಿತ ಭುವನೇಶ್ವರಿ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಯಲ್ಲಿ ಶ್ರೀ ಕಿರಣ ಮಹೇಂದ್ರಕರ ಹಾಗೂ ರೋಜಾ ದಂಪತಿಗಳು ಕು. ನಿಹಾಲ್‌ನ ಮೊದಲನೇ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಳ್ಳುತ್ತಾ ದೇಣಿಗೆ ನೀಡಿದರು.

  ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಶ್ರೀ ಆನಂದಪ್ಪ ಯಲ್ಲಪ್ಪ ಮಹೇಂದ್ರಕರವರು ಸಮಾಜದಲ್ಲಿ ಅವಕಾಶವಂಚಿತ ವಿಶೇಷ ಮಕ್ಕಳಿಗೆ ಸೂಕ್ತವಾದ ಅವಕಾಶಗಳನ್ನು ಕಲ್ಪಿಸಿ, ಅವರವರ ಸಾಮರ್ಥ್ಯಗೆ ತಕ್ಕಂತೆ ತರಬೇತಿ ನೀಡಿ, ಸಮಾಜದ ಮುಖ್ಯವಾಹಿನಿಗೆ ತರುತ್ತಿರುವ ಸಂಸ್ಥೆಯ ಸೇವಾ ಕಾರ್ಯ ಶ್ಲಾಘನೀಯವಾಗಿದೆ. ಈ ಸೇವಾ ಕಾರ್ಯಕ್ಕೆ ನಾವು ನಮ್ಮ ಕೈಲಾದ ಸಾಹಾಯ-ಸಹಕಾರ ಮಾಡುತ್ತೇವೆಂದು ಹೇಳುತ್ತಾ ನನ್ನ ಮಗ ಕಿರಣ ಮೊಮ್ಮಗ ನಿಹಾಲ್‌ನ ಹುಟ್ಟುಹಬ್ಬವನ್ನು ದೇವಾನುದೇವತೆಗಳ ಮಧ್ಯದಲ್ಲಿ ಆಚರಿಸುತ್ತಿರುವುದು ಹೆಮ್ಮಯ ವಿಷಯ ಇವರೆಲ್ಲರ ಆಶೀರ್ವಾದ ನನ್ನ ಮೊಮ್ಮಗನಿಗೆ ಸಿಗಲೆಂದು ಭಾವುಕರಾಗಿ ಹೇಳಿದರು.
  ಇನ್ನೋರ್ವ ಮುಖ್ಯ ಅಥಿತಿಗಳಾಗಿ ಶ್ರೀ ಕಿರಣ ಮಹೇಂದ್ರಕರ ಹಾಗೂ ರೊಜಾವರು ಮಾತನಾಡಿ, ದೇವರು ಯಾವ ದೇವಸ್ಥಾನ ಇಲ್ಲಾ ಇಲ್ಲಿಯೇ ಇದ್ದಾನೆ, ದಿವ್ಯಾಂಗರಲ್ಲಿ ಅದ್ಬುತವಾದ ಶಕ್ತಿ ಇರುತ್ತದೆ. ಅವರನ್ನು ವೈಜ್ಞಾನಿಕವಾಗಿ ಶಿಕ್ಷಣ ಹಾಗೂ ತರಬೇತಿ ನೀಡಿ, ಸಮಾಜದಲ್ಲಿ ಸ್ವಾವಲಂಬಿ ಜೀವನವನ್ನು ನಡೆಸುವ ಹಾಗೆ ಮಾಡಿ, ಅವರಲ್ಲಿ ಸೂಪ್ತವಾದ ಶಕ್ತಿಯನ್ನು ಹೊರತರುವ ಈ ಸೇವಾ ಕಾರ್ಯ ದೇವರು ಮೆಚ್ಚುವಂತಹದ್ದು, ಈ ಸೇವಾ ಕಾರ್ಯಕ್ಕೆ ನಿರಂತರವಾಗಿ ಸಹಾಯ-ಸಹಕಾರ ನೀಡುವುದಾಗಿ ಹೇಳುತ್ತಾ ಇದು ನನ್ನ ಮಗ ನಿಹಾಲ್‌ನ ಮೊದಲನೇ ಹುಟ್ಟುಹಬ್ಬ ಸ್ವರ್ಗದಲ್ಲಿಯೇ ಆಚರಿಸಿದಂತಾಗಿದೆ ಎಂದು ಹೇಳಿದರು.
  ಕಾರ್ಯಕ್ರಮದ ಅಥಿತಿಗಳಾಗಿ ಶ್ರೀಮತಿ ರತ್ನ ಮೇಡಮ್ ಹಾಗೂ ಶ್ರೀಮತಿ ರೂಪಾವರು ಮಾತನಾಡಿ, ಈ ಮಕ್ಕಳ ಪಾಲನೆ-ಪೋಷಣೆ ತುಂಬಾ ಕಷ್ಟಕರವಾದದ್ದು, ಇವರೊಂದಿಗೆ ತಾಳ್ಮೆಯಿಂದ ಇದ್ದು ತರಬೇತಿ ನೀಡುತ್ತಿರುವ ಸಂಸ್ಥೆಯ ಸೇವೆ ಕಾರ್ಯ ಶ್ಲಾಘನೀಯ. ಮಹೇಂದ್ರಕರ ಕುಟುಂಬಸ್ಥರು ವಿಶೇಷ ಮಕ್ಕಳೊಂದಿಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡು ನಮ್ಮೆಲ್ಲರಿಗೂ ಹಾಗೂ ಈಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ನಾವು ನಮ್ಮ ಕೈಲಾದ ಸಾಹಾಯ-ಸಹಕಾರ ಮಾಡುತ್ತೇವೆಂದು ಹೇಳಿದರು.

  ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ, ಎಲ್ಲ ವಿಶೇಷ ಮಕ್ಕಳೊಂದಿಗೆ ಕು. ನಿಹಾಲ್‌ನ ಹುಟ್ಟುಹಬ್ಬವನ್ನು ಮಹೇಂದ್ರಕರ ಕುಟುಂಬಸ್ಥರು ಕೇಕ್ ಕಟ್ ಮಾಡಿ, ಸಿಹಿಯೊಂದಿಗೆ ಊಟ ಹಾಗೂ ದೇಣಿಗೆ ನೀಡುವುದರ ಮೂಲಕ ಹುಟ್ಟುಹಬ್ವವನ್ನು ಅರ್ಥಪೂರ್ಣವಾಗಿ ಆಚರಿಸಿದರು.
  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಮಂಜುನಾಥ ಹದ್ದಣ್ಣವರವರ ವಹಿಸಿ ಪ್ರಾಸ್ತವಿಕವಾಗಿ ಮಾತನಾಡಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್(ರಿ)ನ ಶಿವರಾಜ ಆಚಾರ್ಯ, ಶರಣಬಸಪ್ಪಾ ಮುಟ್ಟಳ್, ಅಕ್ಕಮಹಾದೇವಿ, ಸುಷ್ಮಾ, ಕೊಮಲ್ ಹಾಗೂ ಮಹಾಲಕ್ಷಿö್ಮÃ. ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಎಮ್‌ಎಸ್‌ಡಬ್ಲö್ಯ ವಿಭಾಗದ ಪ್ರಶಿಕ್ಷಣಾರ್ಥಿ ಕುಮಾರಿ ದೀಕ್ಷಾ, ಮಹಾಂತೇಶ, ಮುರಡಿ, ವಿಶೇಷ ಮಕ್ಕಳು, ಸಿಬ್ಬಂದಿ ಹಾಗೂ ಪಾಲಕರು ಉಪಸ್ಥಿತರಿದ್ದರು, ಕೊನೆಗೆ ಎಲ್ಲರಿಗೂ ಸಿಹಿಯೊಂದಿಗೆ ಊಟವನ್ನು ಬಡಿಸಿದರು. ಎಲ್ಲ ಗಣ್ಯ ಮಾನ್ಯರು ವಿಶೇಷ ಮಕ್ಕಳಿಗೆ ಸಿಹಿಯೊಂದಿಗೆ ಊಟವನ್ನು ತಿನ್ನಿಸಿದ್ದು ತುಂಬಾ ವಿಶೇಷವಾಗಿತ್ತು.

  See also  ಪ್ರಸಕ್ತ ಸಾಲಿನ ಮೊದಲ ಕೆಡಿಪಿ ಸಭೆ, ಬೆಳೆ ವಿಮೆ ಏಜೆನ್ಸಿಗಳಿಗೆ ಎಚ್ಚರಿಕೆ ನೀಡಿದ ಜನ ಪ್ರತಿನಿಧಿಗಳು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts