ಲೋಕ ಸಮರದಲ್ಲಿ ಕೈ ಅಭ್ಯರ್ಥಿ ಗೆಲುವು ನಿಶ್ಚಿತ

1 Min Read
ಲೋಕ ಸಮರದಲ್ಲಿ ಕೈ ಅಭ್ಯರ್ಥಿ ಗೆಲುವು ನಿಶ್ಚಿತ
ಕೋಲಾರ ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಶಾಸಕ ಕೊತ್ತೂರು ಜಿ.ಮಂಜುನಾಥ್ ಮಾತನಾಡಿದರು. ಎಂ.ಎಲ್.ಅನಿಲ್ ಕುಮಾರ್, ಸೋಮಶೇಖರ್, ರಾಮಕೃಷ್ಣೇಗೌಡ ಇದ್ದರು.

ಕೋಲಾರ: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಽಸಿದ್ದು, ಅಧಿಕೃತ ಘೋಷಣೆ ಬಾಕಿಯಿದೆ, ಈ ಬಗ್ಗೆ ನನಗೆ ನಂಬಿಕೆಯಿದೆ ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ವಿಶ್ವಾಸವ್ಯಕ್ತಪಡಿಸಿದರು.

ನಗರದ ಪತ್ರಕರ್ತ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎನ್‌ಡಿಎ ಮೈತ್ರಿ ಅಭ್ಯರ್ಥಿ 1 ಲಕ್ಷ ಮತಗಳ ಅಂತರದಿAದ ಗೆಲ್ಲಲಿದ್ದಾರೆಂದು ಜೆಡಿಎಸ್, ಬಿಜೆಪಿಯವರು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ, ನಾವು 92 ಸಾವಿರ ಮತಗಳ ಅಂತರದಿಂದ ಗೆಲುವು ಸಾಽಸಿದ್ದೇವೆ ಎಂದರು.
ವಿಧಾನಸಭೆ ಚುನಾವಣೆ ಸಮಯದಲ್ಲಿಯೂ ನಾನು ಇಷ್ಟು ಮತಗಳ ಅಂತರದಿAದ ಗೆಲ್ಲುವುದಾಗಿ ಲೆಕ್ಕಾಚಾರ ಮಾಡಿಕೊಂಡಿದ್ದೆ. ಆಗ ಯಾರೂ ನಂಬಲಿಲ್ಲ. ಆದರೆ ನನ್ನ ಲೆಕ್ಕಾಚಾರಕ್ಕಿಂತ 500 ಮತಗಳಷ್ಟೇ ವ್ಯತ್ಯಾಸವಾಗಿತ್ತು. ಈಗಲೂ ಅಷ್ಟೇ 92 ಸಾವಿರ ಮತಗಳ ಅಂತರದಿAದ ಗೆದ್ದಿದ್ದೇವೆ. 500 ಮತಗಳು ವ್ಯತ್ಯಾಸವಾಗಬಹುದು ಎಂದರು.
ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, 132 ಶಾಸಕರು ಇರುವ ಸರ್ಕಾರವನ್ನು ಕೆಡವಲು ಹೇಗೆ ಸಾಧ್ಯ? 92 ಮಂದಿ ಶಾಸಕರು ಪಕ್ಷದಿಂದ ಹೊರಗೆ ಬರಬೇಕು, ಇಲ್ಲವೇ 90 ಮಂದಿ ಶಾಸಕರು ರಾಜೀನಾಮೆ ನೀಡಬೇಕು. ಇದೆಲ್ಲವು ಸಾಧ್ಯವೇ ಎಂದು ಪ್ರಶ್ನಿಸಿದರು.
ಹಿರಿಯರನ್ನು ಎಂಎಲ್ಸಿ ಮಾಡಿದರೆ ಮತ್ತಷ್ಟು ಶಕ್ತಿ ಬರುತ್ತದೆ ಎನ್ನುವ ನಿಟ್ಟಿನಲ್ಲಿ ಕೆ.ಆರ್.ರಮೇಶ್‌ಕುಮಾರ್ ಅವರಿಗೆ ಎಂಎಲ್ಸಿ ಸ್ಥಾನ ನೀಡುವಂತೆ ಬೇಡಿಕೆ ಇಟ್ಟಿದ್ದೇವೆ. ಮಾಜಿ ಸಚಿವ ಕೆ.ಶ್ರೀನಿವಾಸಗೌಡರಿಗೆ ಎಂಎಲ್ಸಿ ಸ್ಥಾನ ಕೊಟ್ಟರೂ ಸ್ವಾಗತಿಸುತ್ತೇವೆ ಎಂದರು.
ಭ್ರಷ್ಟಾಚಾರ ಎನ್ನುವುದು ಮೊದಲು ಇತ್ತು, ಈಗಲೂ ಇದೆ. ವ್ಯವಸ್ಥೆ ಸರಿಪಡಿಸಲು ಎಲ್ಲರೂ ಪಣತೊಡಬೇಕಿದೆ. 187 ಕೋಟಿ ರೂ. ಅನುದಾನ ವಿಚಾರವಾಗಿ ಮೌಖಿಕ ಆದೇಶ ಕೊಟ್ಟರೆ ಆಗುತ್ತದೆಯಾ? ಇದು ತಮಾಷೆಯ ವಿಚಾರವಾ ಎಂದರು.
ಕೋಚಿಮುಲ್ ಮಾಜಿ ನಿರ್ದೇಶಕ ರಾಮಕೃಷ್ಣೇಗೌಡ, ನಗರಸಭೆ ಸದಸ್ಯ ರಫಿಕ್, ಮುಖಂಡರಾದ ವೈ.ಶಿವಕುಮಾರ್, ಬಾಬು, ಸೋಮಶೇಖರ್ ಹಾಜರಿದ್ದರು.

See also  ಸಾಗರ ತಾಲೂಕಿನಲ್ಲಿ ಕಾಂಗ್ರೆಸ್‌ನಿಂದ 15 ಕಿಮೀ ಸ್ವಾತಂತ್ರ್ಯ ನಡಿಗೆ
Share This Article