Monday, 19th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ರಸ್ತೆಬದಿಯ 19 ಆಲದ ಮರಗಳ ಹನನ

Friday, 13.07.2018, 5:00 AM       No Comments

ಮಳವಳ್ಳಿ: ತಾಲೂಕಿನ ಹಿಟ್ಟನಹಳ್ಳಿ ಕೊಪ್ಪಲು ಗ್ರಾಮದ ಹೃದಯಭಾಗದಲ್ಲಿ ರಸ್ತೆ ವಿಸ್ತರಣೆ ನೆಪದಲ್ಲಿ ರಸ್ತೆಬದಿಯ ಆಲದ ಮರಗಳಿಗೆ ಕೊಡಲಿ ಪೆಟ್ಟು ನೀಡಲಾಗುತ್ತಿದೆ.

ಗ್ರಾಮದ ಪರಿಮಿತಿಯ ರಸ್ತೆಯ ಇಕ್ಕೆಲಗಳಲ್ಲಿ ಸುಮಾರು ನೂರು ವರ್ಷಗಳ ಹಿಂದೆ ಹಿರಿಯರು ನೆಟ್ಟು ಬೆಳೆಸಿದ್ದ ನೂರಾರು ಆಲದ ಮರಗಳು ಇಡೀ ಗ್ರಾಮಕ್ಕೆ ಆಕರ್ಷಣೆಯಾಗಿದ್ದು, ಸುತ್ತಮುತ್ತಲ ಹಳ್ಳಿಗಳಿಗೆ ಕೇಂದ್ರ ಸ್ಥಾನವಾಗಿರುವ ಹಿಟ್ಟನಹಳ್ಳಿ ಕೊಪ್ಪಲು ಗ್ರಾಮದ ಮುಖ್ಯರಸ್ತೆ ಬದಿಯಲ್ಲಿ ಬೃಹದಾಕಾರವಾಗಿ ಬೆಳೆದಿವೆ.

ಇಲ್ಲಿನ ಮರಗಳ ಕೆಳಗೆ ಕುಳಿತು ಶಾಲಾ-ಕಾಲೇಜು ವಿದ್ಯಾರ್ಥಿಗಳು, ವೃದ್ಧರು ಸೇರಿದಂತೆ ಅನೇಕರು ವಿಶ್ರಾಂತಿ ಪಡೆಯುತ್ತಾರೆ. ರಸ್ತೆ ಅಭಿವೃದ್ಧಿಗೆ ತೊಡಕಾಗಿದ್ದ ತೀರ ರಸ್ತೆ ಮಧ್ಯಭಾಗಕ್ಕಿರುವ ಒಂದೆರಡು ಮರಗಳನ್ನು ಮಾತ್ರ ತೆರವುಗೊಳಿಸುವುದರ ಜತೆಗೆ ಭಾರಿ ವಾಹನಗಳ ಸಂಚಾರಕ್ಕೆ ತೊಂದರೆಯಾಗುವಂತ ಮರಗಳ ಕೊಂಬೆಗಳನ್ನಷ್ಟೆ ತೆರವುಗೊಳಿಸಬಹುದಿತ್ತು. ಆದರೆ ಕಾಮಗಾರಿಯ ಹೆಸರಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಪೂರ್ವಾಪರ ಆಲೋಚನೆ ಮಾಡದೇ 19 ಮರಗಳನ್ನು ಹರಾಜು ಹಾಕಿರುವುದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಈ ಗ್ರಾಮದಲ್ಲಿ ನೂರಾರು ವರ್ಷಗಳಿಂದ ರಸ್ತೆಬದಿಗಳಲ್ಲಿ ಬೆಳೆದು ಪಕ್ಷಿ ಸಂಕುಲಗಳಿಗೆ ಆಸರೆಯಾಗಿದ್ದ ಬೃಹದಾಕಾರದ ಆಲದ ಮರಗಳನ್ನು ಅರಣ್ಯಾಧಿಕಾರಿಗಳು ಕಡಿಯಲು ಅನುಮತಿ ನೀಡಿರುವುದು ಬಹಳ ನೋವುಂಟು ಮಾಡಿದೆ. ಇಲ್ಲಿನ ಮರಗಳ ಮಾರಣಹೋಮವನ್ನು ತಡೆಯಲು ನ್ಯಾಯಾಲಯದ ಮೊರೆ ಹೋಗಿದ್ದು, ಜನರ ಸಹಿ ಸಂಗ್ರಹಿಸಿ ಪರಿಸರದ ಕುರುಹನ್ನು ಉಳಿಸಲು ಹೋರಾಡುತ್ತೇನೆ ಎನ್ನುತ್ತಾರೆ ಮಳವಳ್ಳಿ ಪರಿಸರ ಪ್ರೇಮಿ ನಾಗರಾಜು.

 

 

ರಸ್ತೆ ಅಭಿವೃದ್ಧಿಗಾಗಿ ಪಿಡಬ್ಲೂೃಡಿ ಅಧಿಕಾರಿಗಳು ಹಾಗೂ ಹಿಟ್ಟನಹಳ್ಳಿ ಗ್ರಾಮಸ್ಥರು ಕೊಟ್ಟಿದ್ದ ಮನವಿ ಮೇರೆಗೆ ಸ್ಥಳ ಪರಿಶೀಲನೆ ನಡೆಸಿ ರಸ್ತೆ ವಿಸ್ತರಣೆಗೆ ತೊಡಕಾಗಿದ್ದ 19 ಆಲದ ಮರಗಳನ್ನು ಹರಾಜು ಹಾಕಲಾಗಿದೆ.
ಹಿರೇಮಠ್, ಆರ್‌ಫ್‌ಒ

 

ವಿಶೇಷ ಅನುದಾನದಲ್ಲಿ 12 ಮೀಟರ್‌ಗೆ ರಸ್ತೆ ವಿಸ್ತರಣೆ ಮಾಡುವ ಕಾಮಗಾರಿ ಪ್ರಗತಿಯಲ್ಲಿದೆ. ಗ್ರಾಮದ ಪರಿಮಿತಿಯಲ್ಲಿ ಹೆಚ್ಚು ಆಲದ ಮರಗಳಿರುವುದರಿಂದ 7 ಮೀಟರ್ ವಿಸ್ತೀರ್ಣ ಕುಗ್ಗಿಸಿಕೊಂಡು ಕಾಮಗಾರಿ ನಡೆಸಲಾಗುತ್ತಿದೆ. ತೀರ ಕಿರಿದಾದ ಸ್ಥಳಗಳಲ್ಲಿರುವ 5 ರಿಂದ 6 ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಗೆ ಮನವಿ ಪತ್ರ ಸಲ್ಲಿಸಲಾಗಿತ್ತು. ಆದರೆ ಅರಣ್ಯಾಧಿಕಾರಿಗಳು 19 ಮರಗಳನ್ನು ಹರಾಜು ಹಾಕಿರುವ ಬಗ್ಗೆ ನನಗೆ ಮಾಹಿತಿ ಇಲ್ಲ.
ಕಾಂತರಾಜು, ರಾಷ್ಟೀಯ ಹೆದ್ದಾರಿ ಅಭಿವೃದ್ಧಿ ನಿಗಮದ ಎಇಇ

 

Leave a Reply

Your email address will not be published. Required fields are marked *

Back To Top