ಪ್ರತಿಧ್ವನಿಸಿದ ಸಂಗೀತದ ಹೊನಲು, ರಾಜೇಶ್‌ಕೃಷ್ಣನ್ ಗಾಯನ ಮೋಡಿ, ಪ್ರೇಕ್ಷಕರು ಫಿದಾ, ಜನಮನ ಸೂರೆಗೊಂಡ ರಸಮಂಜರಿ ಕಾರ್ಯಕ್ರಮ

ಹಂಪಿ: ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ.. ಎಂದು ಬೆಳ್ಳಿಕಾಲುಂಗರ ಚಿತ್ರದ ಗೀತೆಯನ್ನು ಗಾಯಕಿ ಪುಷ್ಪಾ, ಯಾರೇ.. ಕಣ್ಣಲ್ಲಿ ಕಣ್ಣನಿಟ್ಟು ಎನ್ನುವ ಒರಟ ಚಿತ್ರದ ಗೀತೆಯನ್ನು ಗಾಯಕ ರಾಜೇಶ್ ಕೃಷ್ಣನ್ ಸೇರಿ ಶಮಿತಾ ಮಲ್ನಾಡ್, ಅನುರಾಧಾ ಭಟ್ ಸೇರಿ ಇತರರ ಗಾಯನವು ವಿಜಯನಗರ ಸಾಮ್ರಾಜ್ಯದ ಹಂಪಿಯ ಹೆಬ್ಬಂಡೆಯಲ್ಲಿ ಸಂಗೀತದ ಹೊನಲು ಪ್ರತಿಧ್ವನಿಸಿತು. ಪ್ರೇಕ್ಷಕರು ಕೇಕೆ, ಶಿಳ್ಳೆ, ಚಪ್ಪಾಳೆಯ ಸುರಿಮಳೆಗೈದು ಸಂಗೀತಕ್ಕೆ ತಕ್ಕ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದ್ದು ಹಂಪಿ ಉತ್ಸವದ ಮೊದಲ ದಿನವಾದ ಶನಿವಾರ ರಾತ್ರಿ ನಡೆದ ರಾಜೇಶ್ ಕೃಷ್ಣನ್ ತಂಡದವರ ರಸಮಂಜರಿ ಕಾರ್ಯಕ್ರಮ ಜನಮನ ಸೂರೆಗೊಂಡಿತು.