ಉತ್ಸವಕ್ಕೆ ಜನಪ್ರತಿನಿಧಿಗಳ ನಿರುತ್ಸಾಹ

ಹಂಪಿ: ಮೈಸೂರು ದಸರಾದಲ್ಲಿ ಇಡೀ ರಾಜ್ಯ ಸರ್ಕಾರವೇ ಬೀಡು ಬಿಡುತ್ತದೆ. ಆದರೆ ವಿಜಯನಗರ ವೈಭವವನ್ನು ಬಿಂಬಿಸುವ ಐತಿಹಾಸಿಕ ಹಂಪಿ ಉತ್ಸವಕ್ಕೆ ಜಿಲ್ಲೆ ಸೇರಿ ರಾಜ್ಯದ ಜನಪ್ರತಿನಿಧಿಗಳು ಪಾಲ್ಗೊಳ್ಳದೇ ನಿರುತ್ಸಾಹ ತೋರಿದರು.
ವಿಶ್ವವಿಖ್ಯಾತ ಹಂಪಿ ಉತ್ಸವಕ್ಕೆ ಜಿಲ್ಲೆ ಸೇರಿ ಹೊರ ರಾಜ್ಯದಿಂದ ಜನತೆ ಆಗಮಿಸುತ್ತಿದ್ದಾರೆ. ಹೈಕ ಭಾಗಕ್ಕೆ ಹಂಪಿ ಉತ್ಸವವೆಂದರೆ ಹಬ್ಬದ ವಾತಾವರಣ. ಸ್ಥಳೀಯ ಸೇರಿ ಹೊರ ರಾಜ್ಯ ಕಲಾವಿದರು ಪಾಲ್ಗೊಳ್ಳುವ ಮೂಲಕ ಹಂಪಿ ಉತ್ಸವಕ್ಕೆ ಮೆರಗು ನೀಡಿದ್ದಾರೆ. ಉತ್ಸವದ ಮೊದಲ ದಿನ ಅದ್ದೂರಿಯಾಗಿ ಚಾಲನೆ ದೊರೆತ್ತಿತ್ತು. ವಿವಿಧ ಕಾರ್ಯಕ್ರಮಗಳೂ ಅಚ್ಚುಕಟ್ಟಾಗಿ ನಡೆದವು.