More

    ಹಂಪಿ ಉತ್ಸವ ಮುಗಿದರೂ ಜ.14ರವರೆಗೆ ಆಗಸದಲ್ಲಿ ಹಾರಾಡಲಿವೆ ಲೋಹದ ಹಕ್ಕಿಗಳು

    ಹಂಪಿ: ಆಕಾಶದಿಂದ ಹಂಪಿಯ ನಿಸರ್ಗದತ್ತ ಸೌಂದರ್ಯ, ಐತಿಹಾಸಿಕ ಸ್ಮಾರಕಗಳನ್ನು ಹಂಪಿ ಬೈಸ್ಕೈಯಲ್ಲಿ ಪ್ರವಾಸಿಗರು ಕಣ್ತುಂಬಿಕೊಂಡರು. ತಲಾ ಮೂರು ಸಾವಿರ ರೂ. ನೀಡಿ ಆರು ನಿಮಿಷ ಹೆಲಿಕಾಪ್ಟರ್‌ನಲ್ಲಿ ಹಾರಾಡಿ ಸಂಭ್ರಮಿಸಿದರು. ಉತ್ಸವದ ಎರಡನೇ ದಿನವಾದ ಶನಿವಾರ ಬೇಡಿಕೆ ಹೆಚ್ಚಿದ್ದರಿಂದ ಉಕ್ಕಿನ ಹಕ್ಕಿಗಳ ಸದ್ದು ಜೋರಾಗಿತ್ತು. ಜ.8 ರಿಂದ ಹಂಪಿ ಬೈಸ್ಕೈಗೆ ಚಾಲನೆ ನೀಡಲಾಗಿತ್ತು. ಆರಂಭದಲ್ಲಿ ಜನರು ಹೆಲಿಕಾಪ್ಟರ್ ಹತ್ತಿರ ಸುಳಿದಿರಲಿಲ್ಲ. ಶುಕ್ರವಾರ ಒಂದು ಹೆಲಿಕಾಪ್ಟರ್ 10 ರೌಂಡ್ ಸುತ್ತಾಡಿ ಜನರನ್ನು ಆಕರ್ಷಿಸಿತ್ತು. ಆನೆಗೊಂದಿ ಉತ್ಸವ ಮುಗಿಯುತ್ತಿದ್ದಂತೆ, ಕಮಲಾಪುರದಲ್ಲಿ ಎರಡು ಹೆಲಿಕಾಪ್ಟರ್ ನಿಯೋಜಿಸಲಾಗಿದೆ. ಚಿಪ್ಸನ್ ಏವಿಯೇಷನ್ ಪ್ರೈ.ಲಿ. ಮತ್ತು ತುಭಿ ಏವಿಯೇಷನ್ ಪ್ರೈ.ಲಿ.ನ ತಲಾ ಒಂದು ಹೆಲಿಕಾಪ್ಟರ್ ಆಗಸದಲ್ಲಿ ಹಾರಾಡಿದವು. ಐದು ವರ್ಷಗಳಿಂದ ಏರ್ಪಡಿಸುತ್ತಿರುವ ಹಂಪಿ ಬೈಸ್ಕೈಗೆ ದೇಶ, ವಿದೇಶದ ಪ್ರವಾಸಿಗರು ಮಾರು ಹೋಗಿದ್ದಾರೆ. ಎರಡು ವರ್ಷ ಮೇಲ್ಪಟ್ಟ ಮಕ್ಕಳಿಗೂ 3 ಸಾವಿರ ರೂ. ನಿಗದಿಪಡಿಸಿದ್ದರಿಂದ ಹೆಲಿಕಾಪ್ಟರ್ ಹತ್ತಲು ಅನೇಕರು ಹಿಂದೇಟು ಹಾಕಿದರು. ಜ.14ರವರೆಗೆ ಬೈಸ್ಕೈ ಇರಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts