ಪ್ರವಾಸೋದ್ಯಮಕ್ಕೆ ಪ್ರವಾಹ ಪೆಟ್ಟು

  • ಹಂಪಿಯಲ್ಲಿ ವ್ಯಾಪರ- ವಹಿವಾಟಿಗೆ ಹೊಡೆತ
  • ಸ್ಥಳೀಯರಿಂದಷ್ಟೇ ವೀಕ್ಷಣೆ

ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ

ರಾಜ್ಯದ ವಿವಿಧ ಕಡೆ ಮಳೆಯಿಂದ ಆಗುತ್ತಿರುವ ಅವಾಂತರಕ್ಕೆ ಪ್ರವಾಸಿಗರು ಬೇದರಿದ್ದು, ವಿಶ್ವವಿಖ್ಯಾತ ಹಂಪಿಗೂ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ. ಪ್ರವಾಸೋದ್ಯಮ ನಂಬಿದ ಕುಟುಂಬಗಳ ಆದಾಯಕ್ಕೆ ಕೊಕ್ಕೆ ಬಿದ್ದಿದೆ.

ವಿಶ್ವದಲ್ಲಿ ನೋಡಲೇಬೇಕಾದ ಸ್ಥಳಗಳ ಪಟ್ಟಿಯಲ್ಲಿಎರಡನೇ ಸ್ಥಾನದಲ್ಲಿರುವ ಹಂಪಿ ದೇಶ ಮತ್ತು ವಿದೇಶಗಳ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಬೇಸಿಗೆಯಲ್ಲಿ ಹಂಪಿ ನೋಡುವುದು ಕಷ್ಟಕರ ಸನ್ನಿವೇಶ. ಮಳೆಗಾಲದ ನಂತರ ತಂಪು ವಾತವರಣದಲ್ಲಿ ಹಂಪಿ ನೋಡಲು ದೇಶ-ವಿದೇಶ ಪ್ರವಾಸಿಗರ ಸಂಖ್ಯೆ ಈ ವೇಳೆಗೆ ಆರಂಬವಾಗುತ್ತದೆ. ಇನ್ನೂ ವಿಕೇಂಡ್ ವೇಳೆ ಜನಸಾಗರವೇ ಹರಿದು ಬರುತ್ತದೆ. ಆದರೆ, ವಿವಿಧೆಡೆ ಭಾರಿ ಮಳೆಯಿಂದ ಸೃಷ್ಟಿಯಾಗಿರುವ ಪ್ರವಾಹಕ್ಕೆ ಪ್ರವಾಸಿಗರು ಹಂಪಿಗೆ ಬರಲು ಕೂಡ ಹಿಂದೇಟು ಹಾಕುತ್ತಿರುವುದು ಗೋಚರಿಸಿದೆ.

ಕೆಲ ತಿಂಗಳ ಹಿಂದೆ ಬೇಸಿಗೆ ಪ್ರಖರ ಬಿಸಿಲಿನ ಕಾರಣಕ್ಕೆ ಹಂಪಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಮುಖವಾಗಿತ್ತು. ಜೂನ್ ತಿಂಗಳ ನಂತರ ಕೊಂಚ ಆರಂಭವಾಗಿದ್ದ ಪ್ರವಾಸಿಗರು, ಕರ್ನಾಟಕದ ಮಳೆನಾಡು, ಕೆರಳ, ಮಹಾರಾಷ್ಟ್ರ ಸೇರಿದಂತೆ ಇತರೆ ಕಡೆ ಮಳೆಯ ಅವಾಂತದಿAದ ಸಾವು ನೋವಿನ ಅನಾಹುತಗಳಾದವು. ಆದ್ದರಿಂದ ಇಲ್ಲಿ ಕೂಡ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ದೇಶ-ವಿದೇಶ ಪ್ರವಾಸಿರನ್ನು ಇದನ್ನೇ ನಂಬಿ ಜೀವನ ಸಾಗಿಸುತ್ತಿದ್ದ ನೂರಾರು ಸಣ್ಣ ವ್ಯಾಪಾರಸ್ಥರರು, ಪ್ರವಾಸಿ ಮಾರ್ಗದರ್ಶಿಗಳು ಮತ್ತೆ ಸಂಕಷ್ಟ ಎದುರಾಗಿದೆ. ಇನ್ನೊಂದೆಡೆ ಪ್ರವಾಸಿಗರ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ಪ್ರವಾಸೋದ್ಯಮದಿಂದ ಸರ್ಕಾರದ ಬೊಕ್ಕಸಕ್ಕೆ ಬರುವ ಆದಾಯದ ಜತೆಗೆ ಪ್ರವಾಸಿ ಮಾರ್ಗದರ್ಶಿಗಳ ಆದಾಯ, ವ್ಯಾಪಾರ ವಹಿವಾಟಿನಲ್ಲೂ ನಷ್ಟದ ಛಾಯೆ ಕಂಡಿದೆ.

ಇಲ್ಲಿ ಬಂದರೆ ಸಮಸ್ಯೆಯಿಲ್ಲ

ರಾಜ್ಯದ ಮಳೆನಾಡು, ಕೆರಳ, ಮಹಾರಾಷ್ಟ್ರ ಸೇರಿದಂತೆ ಉತ್ತರ ಭಾರತದಲ್ಲಿ ಭಾರಿ ಮಳೆಯಿಂದ ಹಲವು ಪ್ರವಾಸಿ ತಾಣಗಳಿಗೆ ಧಕ್ಕೆ ಒಂಟಾಗಿದೆ. ಮಳೆನಾಡಿನಲ್ಲಿ ಅಪಾರ ಪ್ರಮಾಣದ ಮಳೆಯಿಂದ ತುಂಗಭದ್ರಾ ನದಿ ಕೂಡ ಉಕ್ಕಿ ಹರಿಯುತ್ತಿದೆ. ನದಿ ಪಾತ್ರದಲ್ಲಿ ನದಿಗೆ ಇಳಿಯದಂತೆ ಎಚ್ಚರಿಕೆ ವಹಿಸಲಾಗಿದೆ. ಈ ಭಾಗದಲ್ಲಿ ಮಳೆ ಪ್ರಮಾಣ ಕಡಿಮೆಯಿದೆ. ಆಗಾಗ ಆಗುವ ಮಳೆಯಿಂದ ಹಂಪಿಯ ಪ್ರಕೃತಿ ಸೌಂದರ್ಯ ಕೂಡ ಹೆಚ್ಚಾಗಿರುತ್ತದೆ. ಇಲ್ಲಿ ಬರುವ ಪ್ರವಾಸಿಗರಿಗೆ ಯಾವುದೇ ಸಮಸ್ಯೆ ಆಗಲ್ಲ ಎನ್ನುತ್ತಾರೆ, ಸ್ಥಳೀಯರು.

ಸ್ಥಳೀಯ ಪ್ರವಾಸಿಗರು ಹೆಚ್ಚು

ಪ್ರವಾಹದಿಂದ ದೇಶಿ-ವಿದೇಶದ ಪ್ರವಾಸಿಗರು ಹಂಪಿಯತ್ತ ಬರುವುದು ಕಡಿಮೆಯಾಗಿದ್ದರೆ. ಇನ್ನೂವ ಮಳೆ ನಾಡಿನಾಡು, ಬೆಂಗಳೂರು, ಮೈಸೂರು, ಕೆರಳ, ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳ ಸೇರಿದಂತೆ ಇತರೆ ಕಡೆ ಭಾರಿ ಮಳೆ ಸುರಿಯುತ್ತಿದೆ. ಗುಡ್ಡ ಕುಸಿತ, ಮನೆಗಳ ಕುಸಿತದಿಂದ ಇತ್ತ ಪ್ರವಾಸಿಗರು ಹಂಪಿ ಕಡೆ ಕೂಡ ಮಾಡುತ್ತಿಲ್ಲ. ಆದರೆ, ತುಂಗಭದ್ರಾ ನದಿ ತುಂಬಿ ಹರಿಯುತ್ತಿರುವುದರಿಂದ ಸ್ಥಳೀಯರು ಹಾಗೂ ರೈತರು ಬರುತ್ತಿದ್ದಾರೆ. ಬೆರಳೆಣಿಕೆಯಷ್ಟು ವಿದೇಶಿಗರು ಕಾಣ ತೊಡಗಿದ್ದಾರೆ. ನದಿ ತುಂಬಿ ಹರಿಯುತ್ತಿರುವುದರಿಂದ ಕೆಲವರು ಪೂಜೆ ಮಾಡುವುದು ಕಂಡು ಬಂತು.

ಬಿಕೋ ಎನ್ನುತ್ತಿರುವ ಸ್ಮಾರಕಗಳು

ಮಳೆಗಾಲದಲ್ಲೇ ಹಂಪಿಯಲ್ಲಿ ಪ್ರವಾಸಿಗರಿಲ್ಲದೆ ಸ್ಮಾರಕಗಳು ಬಿಕೋ ಎನ್ನುತ್ತಿವೆ. ಪ್ರವಾಸಿ ಮಾರ್ಗದರ್ಶಿಗಳು ಎಂದಿನAತೆ ಪ್ರಮುಖ ಸ್ಮಾರಕಗಳ ಬಳಿ ಪ್ರವಾಸಿಗರ ಆಗಮನಕ್ಕಾಗಿ ಕಾಯುತ್ತಿರುವುದು ಗೋಚರಿಸಿದೆ. ಆದರೆ, ಎಲ್ಲೆಡೆ ಪ್ರವಾಹದ ಭೀತಿಯಿಂದ ಪ್ರವಾಸಕ್ಕೆ ಬರುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಟಿಕೆಟ್ ಕೌಂಟರ್‌ಗಳ ಬಳಿ ಜನರಿಲ್ಲದಾಗಿದೆ. ಹಂಪಿಯಲ್ಲಿ ಅಲ್ಲೊಬ್ಬ, ಇಲ್ಲೊಬ್ಬ ಪ್ರವಾಸಿಗರು ಕಾಣಿಸುತ್ತಿರುವುದು ಕಂಡು ಬಂದಿದೆ.

ಆಟೋಗಿಲ್ಲ ಬೇಡಿಕೆ

ರಾಜ್ಯ ಸರ್ಕಾರದಿಂದ ಉಚಿತ ಬಸ್ ಮಾಡಿರುವ ಹಿನ್ನೆಲ್ಲೆ ಆಟೋ ಚಾಲಕರಿಗೆ ನುಂಗಲಾರದ ತುತ್ತಾಗಿದೆ. ಹಂಪಿಯಲ್ಲಿ ಆಟೋಗಳು ಸಾಲುಗಟ್ಟಿ ನಿಂತಿವೆ. ಪ್ರವಾಸಿಗರು ಇಲ್ಲದೇ ಅವುಗಳು ಕಾರ್ಯಾಚರಣೆಗೊಳ್ಳುತ್ತಿಲ್ಲ. ಆಟೋ ಚಾಲಕರು ದಿನ ಪೂರ್ತಿ ಕಾಯ್ದರು ಪ್ರವಾಸಿಗರು ಮಾತ್ರ ಹಂಪಿಯತ್ತ ಸುಳಿಯುತ್ತಿಲ್ಲ. ವಿವಿಧಡೆ ಆಗುತ್ತಿರುವ ಪ್ರವಾಗದಿಂದ ಹಂಪಿಗೆ ಪ್ರವಾಸಿಗರು ಬರುತ್ತಿಲ್ಲ. ತುತ್ತಿನ ಚೀಲ ತುಂಬಿಸಿಕೊಳ್ಳುದು ಕಷ್ಟಕರವಾಗಿದೆ. 100 ರಿಂದ 200 ದುಡಿಯೋದು ಕಷ್ಟಕರವಾಗಿದೆ. ಈ ಭಾಗದಲ್ಲಿ ಮಳೆ ಸಮಸ್ಯೆಯಿಲ್ಲ. ಆದರೂ ಪ್ರವಾಸಿಗರು ಹಂಪಿಗೆ ಸುಳಿಯುತ್ತಿಲ್ಲ ಎಂದು ಆಟೋ ಚಾಲಕ ಪಂಪಯ್ಯ ಬೇಸರ ವ್ಯಕ್ತಪಡಿಸಿದರು.

ಹಂಪಿಗೆ ಇಷ್ಟೋತ್ತಿಗೆಲ್ಲ ಪ್ರವಾಸಿಗರ ಸಂಖ್ಯೆ ಆರಂಭವಾಗುತ್ತಿತ್ತು. ಆದರೆ, ಹಲವು ಕಡೆ ಮಳೆಯಿಂದ ಆಗುತ್ತಿರುವ ಅನಾಹುತಗಳಿಂದ ಪ್ರವಾಸಿಗರು ಹಂಪಿ ಕಡೆ ಕೂಡ ಬರುತ್ತಿಲ್ಲ. ಇದನ್ನೇ ನಂಬಿದ ಕುಟುಂಬಗಳಿಗೆ ಸಮಸ್ಯೆಯಾಗಿದೆ.

– ವಿಶ್ವನಾಥ್ ಮಾಳಗಿ, ಪ್ರವಾಸಿ ಮಾರ್ಗದರ್ಶಿ, ಹಂಪಿ

Share This Article

ನಿಮ್ಮ ಅಂಗೈನಲ್ಲಿ ಈ ಚಿಹ್ನೆ ಇದೆಯಾ ಚೆಕ್​ ಮಾಡಿ ನೋಡಿ… ಇದ್ರೆ ನೀವು ರಾಜಯೋಗ ಅನುಭವಿಸುತ್ತೀರಿ!

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…

ನಿಮ್ಮ ಮನೆಯಲ್ಲಿ ಮರಿ ಹಲ್ಲಿ ಇದ್ರೆ ಈ ಒಂದು ತಪ್ಪು ಮಾತ್ರ ಮಾಡ್ಬೇಡಿ: ಮಾಡಿದ್ರೆ ಈ ಗಂಡಾಂತರ ಫಿಕ್ಸ್!

ಸಾಮಾನ್ಯವಾಗಿ ಹಿಂದು ಪುರಾಣದಲ್ಲಿ ಹಲ್ಲಿಗಳನ್ನು ಅದೃಷ್ಟದ ಸಂಕೇತ ಎಂದು ಕರೆಯಲಾಗಿದೆ. ಹಲ್ಲಿಗಳು ಲೊಚಗುಡುವುದು ಶುಭ ಸೂಚನೆ…

ಮಧ್ಯಾಹ್ನ, ರಾತ್ರಿ ಊಟದಲ್ಲಿ ಜಾಸ್ತಿ ಉಪ್ಪು ಸೇವಿಸಿದ್ರೆ ಕ್ಯಾನ್ಸರ್‌ ಬರೋದು ಪಕ್ಕಾ! ಇರಲಿ ಎಚ್ಚರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…