ಹಂಪಿ ವಿಷ್ಣುದೇವಸ್ಥಾನದ ಆವರಣದ ಕಂಬಗಳನ್ನು ಕೆಡವಿದ ದುಷ್ಕರ್ಮಿಗಳು: ವಿಡಿಯೋ ವೈರಲ್​

ಬಳ್ಳಾರಿ: ಹಂಪಿ ವಿಷ್ಣು ದೇವಸ್ಥಾನದ ಆವರಣದ ಕಂಬಗಳನ್ನು ಕಿಡಿಗೇಡಿಗಳು ಬೀಳಿಸಿದ್ದು ಈ ದೃಶ್ಯವೀಗ ವೈರಲ್​ ಆಗಿದೆ.

ಹಂಪಿ ವಿಶ್ವವಿಖ್ಯಾತ ಸ್ಥಳ. ಇಲ್ಲಿನ ಒಂಟೆ ಸಾಲು, ಗಜಶಾಲೆ ಹಿಂದೆ ವಿಷ್ಣುದೇವಸ್ಥಾನವಿದ್ದು ಅದರ ಆವರಣದಲ್ಲಿ ಕಂಬಗಳು ಇವೆ. ಒಂದಷ್ಟು ಜನ ಕಿಡಿಗೇಡಿಗಳು ಆಗಮಿಸಿ ಆ ಕಂಬಗಳನ್ನು ಬೀಳಿಸಿದ್ದಾರೆ. ಈ ದೃಶ್ಯವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಕಿಡಿಗೇಡಿಗಳ ಕೃತ್ಯಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಜಯನಗರ ಸ್ಮಾರಕ ಸಂಸ್ಕೃತಿ ಸೇನೆಯಿಂದ ಫೆ.4ರಂದು ಪ್ರತಿಭಟನೆಗೆ ಕರೆ ನೀಡಲಾಗಿದೆ.

ಹಂಪಿಯ ಸ್ಮಾರಕಗಳ ಸಂರಕ್ಷಣೆಗಾಗಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಹಂಪಿ ಅಭಿವೃದ್ಧಿ ಪ್ರಾಧಿಕಾರ, ರಾಜ್ಯ ಪುರಾತತ್ವ ಮತ್ತು ಸಂಗ್ರಹಾಲಯಗಳ ಸಂರಕ್ಷಣಾ ಇಲಾಖೆ ಹಲವು ರೀತಿಯ ಕೆಲಸಗಳನ್ನು ಮಾಡುತ್ತಿದ್ದರೂ ಇಂಥ ಘಟನೆಗಳು ನಡೆಯುತ್ತಿರುವುದು ವಿಪರ್ಯಾಸ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.