More

  ನಿಯಮಾನುಸಾರ ಸ್ಮಾರಕಗಳ ಜೀರ್ಣೋದ್ಧಾರ

  ಹೊಸಪೇಟೆ: ಸ್ಮಾರಕಗಳು ಬಾರಿ ಹಳೆದಾಗಿರುವುದರಿಂದ ಮಳೆಗೆ ಹಾನಿಯಾಗುತ್ತಿವೆ ಎಂದು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಹೇಳಿದರು

  ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇಗುಲದ ಸಾಲು ಮಂಟಪಗಳು ಮಂಗಳವಾರ ಮಳೆಗೆ ಹಾನಿಯಾದ ಸಾಲು ಮಂಟಪಗಳನ್ನು ಬುಧವಾರ ಪರಿಶೀಲಿಸಿದರು.

  ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಪುರಾತತ್ವ ಇಲಾಖೆಯ ಶ್ರೀ ವಿರೂಪಾಕ್ಷೇಶ್ವರ ದೇಗುಲದ ಎಡ ಮತ್ತು ಬಲ ಭಾಗದಲ್ಲಿ ೮ ಕೋಟಿ ರೂ. ವೆಚ್ಚದಲ್ಲಿ ಸಾಲು ಮಂಟಪಗಳ ಜೀರ್ಣೋದ್ಧಾರ ಕಾರ್ಯಕ್ಕೆ ಯೋಜನೆ ರೂಪಿಸಲಾಗಿದೆ. ಒಟ್ಟು ಮೂರು ಹಂತದಲ್ಲಿ ಕಾರ್ಯ ಆರಂಭಿಸಲಾಗಿದೆ. ಎರಡು ಮತ್ತು ಮೂರನೇ ಹಂತದ ಕಾರ್ಯ ಪ್ರಗತಿಯಲ್ಲಿದೆ. ಉಳಿದ ಮಂಟಪಗಳನ್ನು ಮೂರನೇ ಹಂತದಲ್ಲಿ ಜೀರ್ಣೋದ್ಧಾರ ಕಾರ್ಯ ನಡೆಯಲಿದೆ. ಮಳೆಯಲ್ಲಿ ಕುಸಿದ ಮಂಟಪ ಕೂಡ ಜೀರ್ಣೋದ್ಧಾರ ಕಾರ್ಯದಲ್ಲಿದೆ. ಮೊದಲ ಆದ್ಯತೆ ನೀಡಿ ಕ್ತಮ ಕೈಗೊಳ್ಳಲು ಪುರಾತತ್ವ ಇಲಾಖೆ ಆದಿಕಾರಿಗಳಿಗೆ ಸೂಚನೆ ನೀಡಲಾಗುತ್ತದೆ.

  ಹೊದಾಗಿ ಕಟ್ಟಗಳು ಕಟ್ಟುವುದು ಸುಲಭ. ಪುರಾತತ್ವ ಸ್ಮಾರಕಗಳು ಇರುವುದರಿಂದ ಸೂಕ್ಷ್ಮವಾಗಿ ನಿರ್ವಹಣೆ ಮಾಡಬೇಕಿದೆ. ಆದ್ದರಿಂದ ಜೀರ್ಣೋದ್ಧಾರ ಕಾರ್ಯ ವಿಳಂಬ ಆಗುತ್ತದೆ. ಉಳಿದ ೨೫೦ ಮೀಟರ್ ಜೀರ್ಣೋದ್ಧಾರ ಕಾರ್ಯ ಇನ್ನೂ ೯ ತಿಂಗಳಲ್ಲಿ ಪೂರ್ಣಗೊಳಿಸಲು ಯೋಜನೆ ರೂಪಿಸಲಾಗಿದೆ. ಅತಿಹೆಚ್ಚು ಹಾಗೂ ತುರ್ತಾಗಿ ಕಾರ್ಯ ನಡೆಸಬೇಕಾದ ಶಿಥಿಲಗೊಂಡ ಸ್ಮಾರಕಗಳನ್ನು ಆದಷ್ಟು ರಕ್ಷಣೆ ಮಾಡಿ, ನೈಜತೆ ಕಾಪಾಡಬೇಕಿದೆ ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದರು.

  ತಹಸೀಲ್ದಾರ್ ಶೃತಿ ಎಂ.ಮಳ್ಳನಗೌಡ, ಪಿಎಸ್‌ಐ ಶಿವಕುಮಾರ್, ಕಂದಾಯ ಇಲಾಖೆಯ ಕಂದಾಯ ಅಧಿಕಾರಿಗಳಾದ ಮಲ್ಲಿಕಾಜುರ್ನಗೌಡ, ಅನಿಲ್ ಕುಮಾರ್ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts