ನವದೆಹಲಿ: ಹಿಂದುಸ್ತಾನ್ ಏರೋನಾಟಿಕ್ಸ್ ಸಂಸ್ಥೆಯ (ಎಚ್ಎಎಲ್) ಶೇಕಡ 15ರಷ್ಟು ಷೇರನ್ನು ಮಾರಾಟ ಮಾಡಲಾಗಿದೆ. ಸುಮಾರು 5,000 ಕೋಟಿ ರೂಪಾಯಿ ಕ್ರೋಡೀಕರಿಸಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಶೇಕಡ 10ರಷ್ಟು ಷೇರುಗಳ ಮಾರಾಟ ಪ್ರಕ್ರಿಯೆ ಗುರುವಾರ ಮತ್ತು ಶುಕ್ರವಾರ ನಡೆದಿದ್ದು, ಉತ್ತಮ ಪ್ರತಿಕ್ರಿಯೆ ದೊರೆತಿದೆ. ಉಳಿದ ಶೇಕಡ 5ರಷ್ಟು ಷೇರನ್ನು ಶೀಘ್ರದಲ್ಲೇ ವಿಕ್ರಯಿಸುವುದಾಗಿ ಸರ್ಕಾರ ಹೇಳಿದೆ.
ಒಂದು ಷೇರಿಗೆ 1,001 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ. ಇದು ಬುಧವಾರ ಷೇರುಪೇಟೆಯ ವಹಿವಾಟಿನ ಅಂತ್ಯದಲ್ಲಿದ್ದ ಬೆಲೆಯಾದ 1,177.75 ರೂಪಾಯಿಗೆ ಶೇ. 15 ರಿಯಾಯಿತಿಯಾಗಿದೆ. 2018ರಲ್ಲಿ ಶೇಕಡ 10ಕ್ಕೂ ತುಸು ಹೆಚ್ಚು ಷೇರುಗಳನ್ನು ಮಾರಿ 4,229 ಕೋಟಿ ರೂಪಾಯಿಯನ್ನು ಸರ್ಕಾರ ಸಂಗ್ರಹಿಸಿತ್ತು. ನಂತರ ಸರ್ಕಾರದ ಬಳಿ ಪ್ರಸಕ್ತ ಶೇಕಡ 89.97 ಶೇರುಗಳಿದ್ದವು.
ಬಂಡವಾಳ ಮಾರಾಟ ಗುರಿ: ಸರ್ಕಾರಿ ಸ್ವಾಮ್ಯದ ಉದ್ಯಮಗಳ ಷೇರು ವಿಕ್ರಯದ ಮೂಲಕ ಪ್ರಸಕ್ತ ವಿತ್ತ ವರ್ಷದಲ್ಲಿ 2.10 ಲಕ್ಷ ಕೋಟಿ ರೂಪಾಯಿ ಸಂಗ್ರಹಿಸುವ ಗುರಿಯನ್ನು ಸರ್ಕಾರ ಹೊಂದಿದೆ.
ವಿಮಾನ ಪ್ರಯಾಣದ ವೇಳೆ ಮಾಸ್ಕ್ ಧರಿಸದಿದ್ರೆ ‘ನೋ ಫ್ಲೈ ಲಿಸ್ಟ್’ಗೆ ಸೇರ್ಪಡೆ