More

    ಹಳ್ಳಿಮೇಷ್ಟ್ರು 231| ಕನ್ನಡದಲ್ಲೇ ಇಂಗ್ಲಿಷ್ ಕಲಿಯಿರಿ

    ಹಳ್ಳಿಮೇಷ್ಟ್ರು 231| ಕನ್ನಡದಲ್ಲೇ ಇಂಗ್ಲಿಷ್ ಕಲಿಯಿರಿದೈನಂದಿನ ಬಳಕೆಯ ವಾಕ್ಯಗಳು

    ಹುಬ್ಬಳ್ಳಿಯ ವಯಸ್ಕ ಉಪನ್ಯಾಸಕರೊಬ್ಬರು ನನ್ನೊಡನೆ ಗೆಳೆತನ ಮಾಡಿಕೊಂಡರು.

    I was befriended by an elderly lecturer from Hubli.

    ಮೊದಲ ನೋಟದಲ್ಲೇ ನಾನು ಅವಳ ಸೌಂದರ್ಯಕ್ಕೆ ಸಂಪೂರ್ಣವಾಗಿ ಮರುಳಾಗಿಬಿಟ್ಟಿದ್ದೆ.

    I was completely beguiled by her beauty just at the first sight.

    ಸಂಗೀತಗಾರರು ಚಂದನ್ ದಾಸ್​ರ ಒಂದು ಗಝುಲ್​ನ್ನು ನನ್ನ ಕೋರಿಕೆಯಂತೆ ಹಾಡಿದರು.

    The musician sang a gazal of Chandan Dass at my behest.

    ನನ್ನ ಮಗ ಅವನ ಟಿಪ್ಪಣಿ ಬರೆಯುವಿಕೆ ಬಾಕಿ ಇತ್ತೆಂದು ನಿನ್ನೆ ತಡ ರಾತ್ರಿಯವರೆಗೆ ಬರೆಯುತ್ತಿದ್ದ.

    My son was writing notes late last night as he was behindhand with it.

    ನಾನು ಅವರ ಸಹಾಯವನ್ನು ನಿರಾಕರಿಸಿದೆ ಏಕೆಂದರೆ ನನಗೆ ಯಾರ ಹಂಗಲ್ಲಿರುವುದೂ ಇಷ್ಟವಿಲ್ಲ.

    I refused to take his help as I didn’t want to be beholden to anyone.

    ಚಿಕ್ಕ ಸಮಾರಂಭಗಳಿಗೂ ಅವಳು ಸಿಕ್ಕಾಪಟ್ಟೆ ಚಿನ್ನದ ಆಭರಣ ಧರಿಸಿಕೊಂಡು ಬರುತ್ತಾಳೆ.

    She comes being heavily bejeweled even to small functions.

    ಎದೆಹಾಲು ಕುಡಿದ ನಂತರ ಮಗು ಜೋರಾಗಿ ತೇಗಿದಾಗ ಅವಳಿಗೆ ಖುಷಿಯಾಯ್ತು.

    She became happy when her child let out a loud belch after suckling.

    ನಾನು ಹಲವು ಬಾರಿ ಕರೆಗಂಟೆಯ ಸದ್ದು ಮಾಡಿದೆ, ಆದರೆ ಯಾರೂ ಬರಲಿಲ್ಲ.

    I rang the bell several times but nobody answered.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts