ಕಾಡಾನೆ ದಾಳಿಗೆ ಬೆಳೆ ನಾಶ

ಹಲಗೂರು: ಬಸವನಬೆಟ್ಟದ ಕಾಡಿನಂಚಿನಲ್ಲಿರುವ ಬಸವನಹಳ್ಳಿ ಗ್ರಾಮದ ರಾಮಲಿಂಗೇಗೌಡ, ಸಿದ್ದೇಗೌಡ, ಸಿದ್ದರಾಮೇಗೌಡ ಮತ್ತು ಲಿಂಗಮ್ಮ ಎಂಬುವರ ಜಮೀನುಗಳಿಗೆ 19 ಕಾಡಾನೆಗಳು ನುಗ್ಗಿ ಬೆಳೆಯನ್ನು ತುಳಿದು, ತಿಂದು ಲಕ್ಷಾಂತರ ರೂ. ನಷ್ಟ ಮಾಡಿವೆ.

ಬುಧವಾರ ಸಂಜೆ 6 ಗಂಟೆಯಲ್ಲಿ ಆನೆಗಳು ದಾಳಿ ಮಾಡಿ ರಾಮಲಿಂಗೇಗೌಡ ಅವರ 1.5 ಎಕರೆಯಲ್ಲಿ ಬೆಳೆದಿದ್ದ ಅವರೆ, ಹುಳ್ಳಿ ತಿಂದು ಹಾಕಿವೆ. ಸಿದ್ದೇಗೌಡ ಅವರ ಜಮೀನಿನಲ್ಲಿ ಬೆಳೆದಿದ್ದ ಅವರೆ, ಸಿದ್ದರಾಮೇಗೌಡ ಎಂಬುವರ ಹಿಪ್ಪುನೇರಳೆ ಸೊಪ್ಪು ಮತ್ತು ಅವರೆ ಬೆಳೆ ತಿಂದು ಹಾಕಿವೆ. ಕಾಡಾನೆಗಳು ಬೆಳೆ ತಿನ್ನುತ್ತಿರುವುದನ್ನು ಗಮನಿಸಿದ್ದು ನಂತರ ಅವುಗಳನ್ನು ಕಾಡಿಗೆ ಅಟ್ಟಿದ್ದೇವೆ ಎಂದು ಬಸವನಹಳ್ಳಿ ಗ್ರಾಮದ ಸಿದ್ದಪ್ಪ ಹೇಳಿದರು.