Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಹೊಸದಾರಿಯಲ್ಲಿ ಮುಸ್ಲಿಮ್ ಮಹಿಳೆಯರ ಪಯಣ

Tuesday, 06.02.2018, 3:05 AM       No Comments

ಶೋಷಣೆ, ಅಸಮಾನತೆಯನ್ನು ಸಹಿಸಿಕೊಂಡೇ ಇದ್ದರೆ ಅಂಥ ಉಪದ್ರವಿಗಳ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತದೆ. ಒಮ್ಮೆ ಗಟ್ಟಿಯಾಗಿ ದನಿಯೆತ್ತಿ ಅನ್ಯಾಯದ ವಿರುದ್ಧ ಸಿಡಿದೆದ್ದರೆ ಬದಲಾವಣೆಯ ದಾರಿ ತನ್ನಿಂದ ತಾನೇ ತೆರೆದುಕೊಳ್ಳುತ್ತದೆ. ಮುಸ್ಲಿಮ್ ಮಹಿಳೆಯರೂ ಈಗ ಇಂಥ ಹೊಸ ದಾರಿಯಲ್ಲಿ ಕ್ರಮಿಸಲು ನಿರ್ಧರಿಸಿರುವುದು ಗಮನಾರ್ಹ.

ವಿಚಿತ್ರ ನಂಬಿಕೆಗಳು, ಕ್ರೌರ್ಯ, ಹಿಂಸೆ, ಶೋಷಣೆಗಳಿಂದ ಬಳಲಿಹೋದ ಮುಸ್ಲಿಮ್ ಮಹಿಳೆಯರು ಸುಧಾರಣೆಗಾಗಿ ದನಿಯೆತ್ತಲು ಆರಂಭಿಸಿದ್ದಾರೆ. ಇದು ನಿಜಕ್ಕೂ ಮಹತ್ವದ ವಿದ್ಯಮಾನ. ಏಕೆಂದರೆ, ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರೂ ಇರುತ್ತಾರೆ ಎಂಬ ಮಾತಿನಂತೆ ಅನ್ಯಾಯ ಸಹಿಸಿಕೊಂಡಿರುವವರು ಇರುವವರೆಗೂ ಅನ್ಯಾಯ ಮಾಡುವವರು ಇದ್ದೇ ಇರುತ್ತಾರೆ. ಹಾಗಾಗಿ, ಇದೆಲ್ಲದರ ವಿರುದ್ಧ ಒಮ್ಮೆ ದನಿಯೆತ್ತಬೇಕು, ಮೈಕೊಡವಿ ಎದ್ದು ನಿಲ್ಲಲೇಬೇಕು. ಮುಸ್ಲಿಮ್ ಮಹಿಳಾ ಸಮಾಜ ಅಂಥದೊಂದು ಹೆಜ್ಜೆ ಇರಿಸಿ, ಧಾರ್ವಿುಕ ಹಕ್ಕುಗಳು ತನಗೂ ಬೇಕು ಎಂದು ವಾದಿಸುತ್ತಿದೆ. ಆದರೆ, ಈ ಸುಧಾರಣೆಯ ಪ್ರಕ್ರಿಯೆಗಳು ಆರಂಭಗೊಂಡಿರುವುದು ಮುಸ್ಲಿಮ್ ದೇಶಗಳಿಂದ ತುಂಬ ದೂರದಲ್ಲಿರುವ ಅಮೆರಿಕದಲ್ಲಿ!

ಅಷ್ಟಕ್ಕೂ ಯಾವುದೇ ಧರ್ಮವು ಪುರುಷ-ಮಹಿಳೆಯಲ್ಲಿ ಭೇದಭಾವ ಮಾಡುವುದಿಲ್ಲ. ಮಂದಿರ ಅಥವಾ ಚರ್ಚುಗಳಲ್ಲಿ ಪುರುಷರು, ಮಹಿಳೆಯರು ಒಟ್ಟಾಗಿ ದೇವರನ್ನು ಪ್ರಾರ್ಥಿಸುತ್ತಾರೆ, ತಮ್ಮ ತಮ್ಮ ನಂಬಿಕೆಗಳ ಅನುಸಾರ ಪೂಜೆಪುನಸ್ಕಾರ ಕೈಗೊಳ್ಳುತ್ತಾರೆ. ಇದು ಲಾಗಾಯ್ತಿನಿಂದಲೂ ನಡೆದುಕೊಂಡು ಬಂದಿರುವ ಕ್ರಮ. ಆದರೆ ನಿಮಗೆಲ್ಲ ಗೊತ್ತಿರುವಂತೆ ಮುಸ್ಲಿಮ್ ಮಹಿಳೆಯರು ಪ್ರಾರ್ಥನೆ ಸಲ್ಲಿಸಲು ಮಸೀದಿಗೆ ಬರುವಂತಿಲ್ಲ, ಹಬ್ಬದ ಸಂದರ್ಭಗಳಲ್ಲೂ ಮಸೀದಿಗೆ ಬರಲು ಅವರಿಗೆ ಅವಕಾಶವಿಲ್ಲ. ಮುಸ್ಲಿಮರಲ್ಲಿ ಪ್ರತಿ ಶುಕ್ರವಾರದ ಮಧ್ಯಾಹ್ನದ ಪ್ರಾರ್ಥನೆಗೆ ವಿಶೇಷ ಮಹತ್ವವಿದೆ. ಈ ಪ್ರಾರ್ಥನೆಯಲ್ಲೂ ಮಹಿಳೆಯರು ಭಾಗವಹಿಸುವಂತಿಲ್ಲ. ಅವರು ಮನೆಯೊಳಗೇ ಅಥವಾ ಮನೆಯ ಅಂಗಳದಲ್ಲಿ ಇಂಥ ಪ್ರಾರ್ಥನೆ ಸಲ್ಲಿಸಬಹುದಾಗಿದೆ. ‘ಮಸೀದಿಗೆ ಮಹಿಳೆಯರು ಪ್ರವೇಶಿಸುವಂತಿಲ್ಲ’ ಎಂದು ಎಲ್ಲಿಯೂ ಬರೆದಿಲ್ಲ. ಆದರೂ ಇದು ಒಂದು ರೂಢಿ ಎಂಬಂತೆ ಬೆಳೆದುಬಂದಿದೆ. ಸುನ್ನಿಗಳಂತೂ ಈ ವಿಷಯದಲ್ಲಿ ಭಾರಿ ಕಟ್ಟುನಿಟ್ಟು. ಇದರಲ್ಲಿ ಇಸ್ಲಾಮ್ ಧರ್ಮದ್ದೇನೂ ತಪ್ಪಿಲ್ಲ. ಉದಾತ್ತ ಸಂದೇಶ, ಮಾನವೀಯ ಮೌಲ್ಯಗಳನ್ನು ಬೋಧಿಸುವ ಇಸ್ಲಾಮ್ ಧರ್ಮ ಯಾರಲ್ಲೂ ಭೇದಭಾವ ಮಾಡುವುದಿಲ್ಲ. ಅಂದಮೇಲೆ, ಅದು ಗಂಡು-ಹೆಣ್ಣಿನಲ್ಲಿ ಭೇದ ಮಾಡಲು ಸಾಧ್ಯವುಂಟೇ? ‘ಸಾಮರಸ್ಯದಿಂದ ಹಾಗೂ ಸಂತೃಪ್ತಿಯಿಂದ ಬಾಳಿ’ ಎಂದೇ ಇಸ್ಲಾಮ್ ಸಂದೇಶ ನೀಡಿದೆ. ಆದರೆ ಕೆಲ ಧಾರ್ವಿುಕ ಗುರುಗಳು ಎನಿಸಿಕೊಂಡವರು ಮಾತ್ರ ಅಸಂಗತ ನಿರ್ಣಯಗಳನ್ನು ಹೊರಡಿಸಿ ಪೇಚು ಸೃಷ್ಟಿಸುತ್ತಾರೆ. ‘ಮಹಿಳೆಯರು ಮಸೀದಿಗೆ ಬರುವಂತಿಲ್ಲ’ ಎಂಬುದು ಇಂಥ ನಿರ್ಣಯಗಳ ಪೈಕಿ ಒಂದು. ಇದರ ಪರಿಣಾಮ, ಮಹಿಳೆಯರು ಪ್ರಾರ್ಥನೆ ಮಾಡುವ ಹಕ್ಕನ್ನೂ ಕಳೆದುಕೊಂಡಿದ್ದಾರೆ.

‘ಪರ್ದಾ’ ಪದ್ಧತಿಯ ಉಲ್ಲಂಘನೆ ಆಗಬಾರದು ಎಂಬುದಕ್ಕಾಗಿ ಈ ನೀತಿಯನ್ನು ಅನುಸರಿಸಲಾಗುತ್ತದೆ ಎಂಬುದು ಕೆಲವರ ಅಂಬೋಣ. ಇನ್ನು ಕೆಲವೆಡೆ ಮಹಿಳೆಯರು ಪರಪುರುಷನನ್ನು ನೋಡಬಾರದು ಎಂಬ ಕಾರಣಕ್ಕಾಗಿ ಮಸೀದಿಗಳಿಗೆ ಹೋಗುವುದಿಲ್ಲ. ಒಂದು ವೇಳೆ ಧೈರ್ಯ ಮಾಡಿ ಹೋದರೂ ಅದನ್ನು ಪುರುಷಸಮಾಜ ಸಹಿಸುವುದಿಲ್ಲ. ಪುರುಷಸಮಾಜದ ಕ್ರೌರ್ಯದಿಂದ ಮುಸ್ಲಿಮ್ ರಾಷ್ಟ್ರಗಳಲ್ಲಿ ಮಹಿಳೆಯರು ಮಸೀದಿ ಬಳಿ ತೆರಳಲೂ ಹೆದರುತ್ತಾರೆ. ಪ್ರಾರ್ಥನೆ ಬಿಡಿ, ಆಸ್ತಿ ವಿಚಾರ ಬಂದಾಗಲೂ ತಾಯಿ, ಅಕ್ಕ-ತಂಗಿ, ಮಗಳು- ಹೀಗೆ ಮಹಿಳೆಗೆ ಯಾವುದೇ ಅಧಿಕಾರ ನೀಡಲಾಗಿಲ್ಲ. ಹಾಗಾಗಿ ಮೊದಲಿನಿಂದಲೇ ಮುಸ್ಲಿಮ್ ಮಹಿಳೆ ಈ ‘ಪ್ರತ್ಯೇಕತೆ’ಗೆ ಗುರಿಯಾಗುತ್ತಾಳೆ. ಅವಳು ದನಿಯೆತ್ತಿ ಮಾತನಾಡಲೂ ಪುರುಷರು ಆಸ್ಪದ ನೀಡುವುದಿಲ್ಲ. ಹೆಣ್ಣಿಗೂ ಜೀವನವಿದೆ, ಆಕೆಗೂ ನಂಬಿಕೆ, ಭಾವನೆ, ಕನಸುಗಳಿವೆ ಎಂಬ ಸರಳ ಸಂಗತಿಯನ್ನು ಅರ್ಥಮಾಡಿಕೊಳ್ಳಲು ತಥಾಕಥಿತ ಧರ್ಮಗುರುಗಳಿಗೂ ಸಾಧ್ಯವಾಗಿಲ್ಲ.

ಪ್ರಾರ್ಥನೆ ಭಗವಂತನನ್ನು ತಲುಪುವ ವಿಧಾನ. ಅದರ ಮೇಲೂ ಪುರುಷರು ತಮ್ಮ ಹಕ್ಕು ಸಾಧಿಸಿಬಿಟ್ಟರೆ? ದೇವರ ದೃಷ್ಟಿಯಲ್ಲಿ ಹೆಣ್ಣು-ಗಂಡು ಎರಡೂ ಒಂದೇ. ಆದರೆ ಮನುಷ್ಯರಾದವರು ಆ ದೇವರ ಹೆಸರು ಹೇಳಿಕೊಂಡು ಭೇದಭಾವ ಸೃಷ್ಟಿಸುತ್ತಾರೆ. ಈಗಿನ ಕಾಲದಲ್ಲೂ ವಿಚಿತ್ರ ನಂಬಿಕೆಗಳನ್ನು ಜೀವಂತವಾಗಿ ಇರಿಸಿಕೊಂಡಿದ್ದು, ಈ ಮೂಲಕ ವಾಸ್ತವವನ್ನು ತಿರುಚಲು ಹೊರಟಿದ್ದಾರೆ. ಮುಸ್ಲಿಮ್ ಹೆಣ್ಣು ಪರಪುರುಷನನ್ನು ನೋಡಬಾರದು ಎಂಬ ನಿರ್ಬಂಧದ ಜೊತೆಗೆ ಪರಪುರುಷನ ದನಿಯೂ ಕೇಳಬಾರದು ಎನ್ನುತ್ತಾರೆ ಕೆಲ ಧರ್ಮಗುರುಗುಳು (ಇದನ್ನೇ ಆಧಾರವಾಗಿಟ್ಟುಕೊಂಡು ಮಹಿಳೆಯರಿಗೆ ಮಸೀದಿ ಪ್ರವೇಶ ನಿರಾಕರಿಸಲಾಗಿದೆಯಂತೆ). ಈಗಿನ ಕಾಲದಲ್ಲಿ ಇದೆಲ್ಲ ಸಾಧ್ಯವೇ, ಉಚಿತವೇ ಎಂದು ಈಗ ಮಹಿಳೆಯರೇ ಪ್ರಶ್ನಿಸತೊಡಗಿದ್ದಾರೆ. ‘ನಮಗೂ ಪ್ರಾರ್ಥನೆಯ ಹಕ್ಕು ಕೊಡಿ’ ಎಂದು ಆಗ್ರಹಿಸತೊಡಗಿದ್ದಾರೆ. ಯುರೋಪ್ ರಾಷ್ಟ್ರಗಳಲ್ಲಿ ಈ ಹಿಂದೆಯೇ ಆಗಾಗ ಇಂಥ ಬೇಡಿಕೆಗಳು ಪ್ರತಿಧ್ವನಿಸುತ್ತಿದ್ದವು. ಪ್ರಸಕ್ತ ಅಮೆರಿಕದಲ್ಲಿ ಈ ಆಗ್ರಹ ಬಲಗೊಂಡ ಪರಿಣಾಮ ಅಲ್ಲಿನ ಲಾಸ್ ಏಂಜಲೀಸ್ ನಗರದಲ್ಲಿ ಪ್ರತ್ಯೇಕ ಮಹಿಳಾ ಮಸೀದಿಯೇ ತಲೆಯೆತ್ತಿದೆ. ಇದು ಜಗತ್ತಿನ ಮೊದಲ ಮಹಿಳಾ ಮಸೀದಿ ಎಂಬುದು ಗಮನಾರ್ಹ.

ಈ ಮಸೀದಿ ಸ್ಥಾಪನೆಯ ಕತೆಯೂ ರೋಚಕವಾಗಿದೆ. 29 ವರ್ಷದ ಲೇಖಕಿ ಹಸ್ನಾ ಮಝುನವಿ ಮತ್ತು 33 ವರ್ಷದ ವಕೀಲೆ ಸನಾ ಮುತ್​ಲಿಬ್ ಅವರು ತಮಗೂ ಪ್ರಾರ್ಥನೆ ಮಾಡಲು ಅವಕಾಶ ನೀಡಬೇಕು ಎಂದು ಆಗ್ರಹಿಸಿ ಮಸೀದಿ ಪ್ರವೇಶ ಮಾಡಲು ಯತ್ನಿಸಿದಾಗ ಅವರಿಗೆ ದೊರೆತಿದ್ದೂ ಅವಮಾನವೇ. ಈ ಅವಮಾನ ಅವರನ್ನು ಬಹುವಾಗಿ ಕಾಡಿತು, ಇದಕ್ಕೆ ಪರಿಹಾರ ಹುಡುಕಬೇಕು ಎಂಬ ತುಡಿತ ತೀವ್ರವಾಯಿತು. ಆಗಲೇ ಮಹಿಳೆಯರಿಗಾಗಿಯೇ ಪ್ರತ್ಯೇಕ ಮಸೀದಿ ನಿರ್ವಿುಸುವ ಚಿಂತನೆ ಮೊಳಕೆಯೊಡೆದದ್ದು. ಮಹಿಳೆಯರಿಗೆ ಪ್ರಾರ್ಥನಾ ಹಕ್ಕು ಸಿಗಬೇಕಾದರೆ ಈ ಕ್ರಮವೇ ಸರಿಯೆಂದು ನಿರ್ಧರಿಸಿದ ಹಸ್ನಾ ಹಾಗೂ ಸನಾ ಈ ನಿಟ್ಟಿನಲ್ಲಿ ಮುಂದುವರಿದಾಗ ಉಳಿದ ಮಹಿಳೆಯರ ಬೆಂಬಲವೂ ದೊರೆಯಿತು. ಫಲವಾಗಿ, ಕೆಲ ವರ್ಷದ ಹಿಂದೆ ಅಂದರೆ 2015ರ ಜ.30ರಂದು ಕ್ಯಾಲಿಫೋನಿಯಾ ರಾಜ್ಯದ ಲಾಸ್ ಏಂಜಲೀಸ್ ನಗರದಲ್ಲಿ ಮಹಿಳೆಯರಿಗಾಗಿಯೇ ಮಸೀದಿ ಸ್ಥಾಪನೆಯಾಗಿದೆ. ಈ ಮಸೀದಿಗೆ ಪುರುಷರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಈ ಬೆಳವಣಿಗೆ ಮಹಿಳೆಯರು ತಮ್ಮ ಪಾಲಿಗೆ ಇದು ಮಹತ್ವಪೂರ್ಣವಾಗಿದೆ ಎಂದು ಹೇಳಿಕೊಂಡಿದಲ್ಲದೆ, ದೀರ್ಘಕಾಲದ ಬಂಧನದಿಂದ ಮುಕ್ತಿ ಪಡೆದುಕೊಂಡ ಅನುಭವವಾಗಿದೆ ಎಂದಿದ್ದಾರೆ. ‘ಇಷ್ಟುದಿನಗಳ ಕಾಲ ನಾವು ತುಂಬ ಮುಜುಗರ ಅನುಭವಿಸುತ್ತಿದ್ದೆವು. ಈಗ ಆತ್ಮವಿಶ್ವಾಸ ಜಾಗೃತವಾಗಿದೆ. ಕಷ್ಟಗಳೂ ಅಂತ್ಯವಾಗತೊಡಗಿವೆ’ ಎಂದು ಹೇಳುವಾಗ ಆ ಮಹಿಳೆಯರ ಮುಖದಲ್ಲಿ ಸಂತೃಪ್ತಿಯ ಭಾವ ಎದ್ದುಕಾಣುತ್ತಿತ್ತು. ಈಗ ಅಲ್ಲಿನ ಮುಸ್ಲಿಮ್ ಮಹಿಳೆಯರು ಹೆಮ್ಮೆಯಿಂದ ಮಸೀದಿಯನ್ನು ಪ್ರವೇಶಿಸುತ್ತಿದ್ದಾರೆ. ಪ್ರಾರ್ಥನೆ ಹೇಳಿಕೊಡುವ ಕೆಲಸವನ್ನು ಹಸ್ನಾ ಮತ್ತು ಸನಾ ನಿರ್ವಹಿಸುತ್ತಿದ್ದಾರೆ. ಮಸೀದಿಗೆ ‘ಮಹಿಳೆಯರಿಗೆ ಪ್ರವೇಶವಿಲ್ಲ’ ಎಂಬ ಫಲಕ ಇಷ್ಟು ದಿನಗಳ ಕಾಲ ನೋಡಲು ಸಿಗುತ್ತಿತ್ತು. ಆದರೆ ಲಾಸ್ ಏಂಜಲೀಸ್​ನಲ್ಲಿ ‘ಈ ಮಸೀದಿಯೊಳಗೆ ಪುರುಷರಿಗೆ ಪ್ರವೇಶವಿಲ್ಲ’ ಎಂಬ ಬೋರ್ಡನ್ನು ಕಂಡು ಹೆಣ್ಣುಮಕ್ಕಳು ಸಂಭ್ರಮಿಸುತ್ತಿದ್ದಾರೆ. ಅದೇ ಈ ಮಹಿಳೆಯರ ಧೈರ್ಯವನ್ನು ಕಂಡು ಪುರುಷರು ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ. ತಥಾಕಥಿತ ಧರ್ಮಗುರುಗಳು ಏನೂ ಮಾತನಾಡದೆ ಮೌನಕ್ಕೆ ಶರಣಾಗಿದ್ದಾರೆ. ಸಾಮಾಜಿಕ ಜಾಲತಾಣ ಟ್ವಿಟರ್​ನಲ್ಲೂ ಇದಕ್ಕೆ ಭಾರಿ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಮುಸ್ಲಿಮ್ ರಾಷ್ಟ್ರದ ಮಹಿಳೆಯರು ಈ ಬದಲಾವಣೆಯ ಗಾಳಿ ತಮ್ಮ ದೇಶಗಳಿಗೂ ಆದಷ್ಟು ಬೇಗ ಪಸರಿಸಲಿ ಎಂದು ಹಾರೈಸಿದ್ದಾರೆ.

‘ಲಾಸ್ ಏಂಜಲಿಸ್ ಟೈಮ್್ಸ’ ಪತ್ರಿಕೆ ಈ ಕುರಿತಂತೆ ವಿಸõತವಾದ ವರದಿಯನ್ನು ಪ್ರಕಟಿಸಿತು. ‘ಈ ಬೆಳವಣಿಗೆ ಮೂಲಕ ನಿಜಾರ್ಥದಲ್ಲಿ ಮುಸ್ಲಿಮ್ ಮಹಿಳೆಯರಿಗೆ ಧಾರ್ವಿುಕ ಸ್ವಾತಂತ್ರ್ಯ ದೊರೆತಿದೆ. ಈಗ ಅವರು ಯಾವುದೋ ಹಿಂಬಾಗಿಲಿನಿಂದ ಪ್ರವೇಶಿಸಲು ಯತ್ನಿಸಬೇಕಿಲ್ಲ ಹಾಗೂ ಪುರುಷರ ದಬ್ಬಾಳಿಕೆಗೆ ಭಯಪಡಬೇಕಿಲ್ಲ. ಧಾರ್ವಿುಕ ಸ್ವಾತಂತ್ರ್ಯ ಪಡೆದುಕೊಂಡಿರುವ ಅವರು ಈಗ ಸಾಮಾಜಿಕ ಸ್ವಾತಂತ್ರ್ಯ್ಕಾಗಿಯೂ ಹೋರಾಡಬೇಕು’ ಎಂದು ಅದು ಬರೆದಿದೆ. ಲಾಸ್ ಏಂಜಲಿಸ್ ನಗರದಿಂದ ಪ್ರೇರಣೆ ಪಡೆದು ಚಿಕಾಗೊ ಹಾಗೂ ಸ್ಯಾನ್​ಫ್ರಾನ್ಸಿಸ್ಕೊ ನಗರಗಳಲ್ಲೂ ಪ್ರತ್ಯೇಕ ಮಹಿಳಾ ಮಸೀದಿಗಳನ್ನು ನಿರ್ವಿುಸಲು ಸ್ಥಳೀಯ ಮಹಿಳೆಯರು ನಿರ್ಧರಿಸಿದ್ದಾರೆ.

ಇಸ್ಲಾಮಿಕ್ ಸೊಸೈಟಿ ಆಫ್ ನಾರ್ತ್ ಅಮೆರಿಕ 2013ರಲ್ಲಿ ನಡೆಸಿದ ಸಮೀಕ್ಷೆಯಲ್ಲೂ ಮುಸ್ಲಿಮ್ ಮಹಿಳೆಯರಿಗೆ ಧಾರ್ವಿುಕ ಸ್ವಾತಂತ್ರ್ಯ ನೀಡಬೇಕು ಎಂದು ಪ್ರತಿಪಾದಿಸಲಾಗಿತ್ತು. ‘‘ಈ ರೀತಿಯ ದಿಟ್ಟ ಕ್ರಮಗಳ ಮೂಲಕವೇ ಗಂಡಸರ ದಬ್ಬಾಳಿಕೆಯನ್ನು ತಡೆಯಬಹುದು ಹಾಗೂ ಮಹಿಳೆಯರು ಉಸಿರುಗಟ್ಟಿದ ವಾತಾವರಣದಿಂದ ಹೊರಬಂದು ಸ್ವಚ್ಛಂದವಾಗಿ ಬದುಕಬಹುದು. ಮುಸ್ಲಿಮ್ ಮಹಿಳೆಯರು ತಮ್ಮ ಶಕ್ತಿಯನ್ನು ಅರಿತುಕೊಂಡಾಗ ಮಾನವೀಯತೆಯ ಕಲ್ಯಾಣಕ್ಕಾಗಿ ಶ್ರಮಿಸಬಹುದು, ಸಮುದಾಯದಲ್ಲಿನ ತಾರತಮ್ಯ ನೀತಿಯನ್ನು ಹೋಗಲಾಡಿಸಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿ. ಲಾಸ್ ಏಂಜಲಿಸ್​ನಂತೆ ಉಳಿದೆಡೆಯೂ ಪ್ರತ್ಯೇಕ ಮಹಿಳಾ ಮಸೀದಿಗಳು ನಿರ್ವಣಗೊಳ್ಳಬೇಕು. ಆಗ ಮಾತ್ರ ಮಹಿಳೆಗೆ ನಿಜವಾಗಿಯೂ ನ್ಯಾಯ ದೊರೆಯಲು ಸಾಧ್ಯ’ ಎಂದಿರುವ ಹಸ್ನಾ ಮಝುನವಿ ಮತ್ತು ಸನಾ ಮುತ್​ಲಿಬ್, ಮುಸ್ಲಿಮ್ ಮಹಿಳೆಯರ ಪಾಲಿಗೆ ಹೊಸ ಆಶಾಕಿರಣವಾಗಿ ಗೋಚರಿಸಿದ್ದಾರೆ. ಈ ಬದಲಾವಣೆ ಮುಸ್ಲಿಮ್ ಸಮಾಜದಲ್ಲಿ ಸಂಚಲನ ಸೃಷ್ಟಿಸಿದ್ದು, ಪುರುಷಸಮಾಜ ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡಿದೆ. ಮುಸ್ಲಿಮ್ ರಾಷ್ಟ್ರದ ಮಹಿಳೆಯರು ಬವಣೆಯಿಂದ ಮುಕ್ತಗೊಂಡರೆ ಇಂಥ ಪ್ರಯತ್ನಗಳು ಸಾರ್ಥಕತೆ ಪಡೆದುಕೊಳ್ಳುತ್ತವೆ.

(ಲೇಖಕರು ರಾಷ್ಟ್ರೀಯ ಉರ್ದು ವಿಕಾಸ ಪರಿಷದ್​ನ ಉಪಾಧ್ಯಕ್ಷರು ಮಧ್ಯಪ್ರಾಚ್ಯ, ಪಾಕಿಸ್ತಾನ ವಿದ್ಯಮಾನಗಳ ನುರಿತ ವಿಶ್ಲೇಷಕರು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಖ್ಯಾತ ಬರಹಗಾರರು)

Leave a Reply

Your email address will not be published. Required fields are marked *

Back To Top