More

    ಹಜ್ ಯಾತ್ರೆಗೆ ಚಿಕ್ಕಮಗಳೂರಿನಿಂದ 92 ಜನ ಆಯ್ಕೆ

    ಬೆಂಗಳೂರು: ಪ್ರಸಕ್ತ ವರ್ಷ ಭಾರತೀಯ ಹಜ್ ಸಮಿತಿ ಮೂಲಕ ಪವಿತ್ರ ಹಜ್​ಯಾತ್ರೆಗೆ ಚಿಕ್ಕಮಗಳೂರು ಜಿಲ್ಲೆಯ 92 ಮಂದಿ ಆಯ್ಕೆಯಾಗಿದ್ದಾರೆ ಎಂದು ರಾಜ್ಯ ಹಜ್ ಸಮಿತಿ ಸದಸ್ಯ, ಜಯಪುರ ಮಸೀದಿ ಧರ್ಮಗುರು ಮೌಲಾನಾ ಕೆ.ಎಂ.ಅಬೂಬಕರ್ ಸಿದ್ದೀಖ್ ತಿಳಿಸಿದರು.

    ಹಜ್ ಯಾತ್ರೆಗಾಗಿ ಜಿಲ್ಲೆಯಿಂದ 147 ಮಂದಿ ಅರ್ಜಿ ಸಲ್ಲಿಸಿದ್ದರು. ಜಿಲ್ಲೆಯ ಮುಸ್ಲಿಂ ಜನಸಂಖ್ಯಾನುಪಾತದಲ್ಲಿ 80 ಸೀಟುಗಳನ್ನು ಚಿಕ್ಕಮಗಳೂರಿಗೆ ನಿಗದಿಪಡಿಸಿದ್ದು 12 ಹೆಚ್ಚುವರಿ ಸೀಟುಗಳನ್ನು ಸೇರಿಸಿ ಆನ್​ಲೈನ್ ಆಯ್ಕೆ ಮೂಲಕ 92 ಮಂದಿಯನ್ನು ಆಯ್ಕೆ ಮಾಡಲಾಗಿದೆ ಎಂದು ಸುದ್ದಿಗಾರರಿಗೆ ಮಾಹಿತಿ ನೀಡಿದರು.

    ಭಾರತ ಸರ್ಕಾರ ಕರ್ನಾಟಕಕ್ಕೆ 6,734 ಹಜ್ ಕೋಟಾ ನಿಗದಿಪಡಿಸಿದೆ. ಇವುಗಳನ್ನು ಪ್ರತಿ ಜಿಲ್ಲೆಗೂ ಆಯಾ ಜಿಲ್ಲೆಯ ಮುಸ್ಲಿಂ ಜನಸಂಖ್ಯಾನುಪಾತದಲ್ಲಿ ವಿತರಿಸಲಾಗುತ್ತಿದೆ. ನಿಗದಿತ ಕೋಟಾಗಿಂತ ಹೆಚ್ಚು ಅರ್ಜಿ ಸಲ್ಲಿಕೆಯಾಗಿರುವ 13 ಜಿಲ್ಲೆಗಳ ಯಾತ್ರಾರ್ಥಿಗಳನ್ನು ಆನ್​ಲೈನ್ ಡ್ರಾ ಮೂಲಕ ಆರಿಸಲಾಗಿದೆ. ರಾಜ್ಯದಲ್ಲಿ 9,823 ಅರ್ಜಿಗಳು ಬಂದಿದ್ದು, ಈ ಪೈಕಿ 70 ವರ್ಷ ದಾಟಿದ ವೃದ್ಧರು ಮತ್ತು ಅವರ ಒಬ್ಬ ಸಹಾಯಕರು ಸೇರಿ 459 ಜನರನ್ನು ಮತ್ತು 45 ವರ್ಷ ಪ್ರಾಯ ಮೀರಿದ ಮಹಿಳೆಯರ ತಂಡದ 32 ಜನರನ್ನು ಆರಿಸಲಾಗಿದೆ. ಉಳಿದವರನ್ನು ಆನ್​ಲೈನ್ ಮೂಲಕ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.

    ಹಜ್ ಯಾತ್ರಿಕರ ಪ್ರಯಾಣಕ್ಕಾಗಿ ಐದು ವಿಮಾನ ನಿಲ್ದಾಣಗಳನ್ನು ನಿಗದಿಪಡಿಸಲಾಗಿದೆ. ಮಂಗಳೂರಿನ 545 ಯಾತ್ರಾರ್ಥಿಗಳು ಸೇರಿದಂತೆ ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಉಡುಪಿ ಜಿಲ್ಲೆಗಳ 786 ಯಾತ್ರಿಕರು ಮಂಗಳೂರು ವಿಮಾನ ನಿಲ್ದಾಣದಿಂದ ಪಯಾಣ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts