ಹಾಜಿಮಸ್ತಾನ್ ಉರುಸ್, ಭಿತ್ತಿ ಪತ್ರ ಬಿಡುಗಡೆ

ತೆಲಸಂಗ: ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಸಾಮರಸ್ಯದ ಸಂದೇಶ ಸಾರುವ ಹಬ್ಬಗಳನ್ನು ಇವತ್ತಿಗೂ ಆಚರಿಸಲಾಗುತ್ತಿದೆ ಎಂದು ಯುವ ಮುಖಂಡ ಅಪ್ಪು ಜಮಾದರ ಹೇಳಿದ್ದಾರೆ.

ಗ್ರಾಮದ ಹಾಜಿಮಸ್ತಾನ್ ಉರುಸ್ ನಿಮಿತ್ತ ಬುಧವಾರ ಭಿತ್ತಿ ಪತ್ರ ಬಿಡುಗಡೆಗೊಳಿಸಿ ಮಾತನಾಡಿ, ಜಾತಿ, ಜಾತಿಗಳ ಮಧ್ಯೆ ಜಗಳ ಹೆಚ್ಚುತ್ತಿವೆ. ಆದರೆ ಗ್ರಾಮದಲ್ಲಿ ಇದೆಲ್ಲಕ್ಕೂ ಹೊರತಾಗಿ ಹಾಜಿಮಸ್ತಾನ್ ದೇವರ ಉರುಸ್ ಆಚರಿಸುತ್ತ ಬಂದಿರುವುದು ಮಾದರಿಯಾಗಿದೆ ಎಂದರು.

ಕಮಿಟಿ ಸದಸ್ಯ ಇರ್ಫಾನ್ ಮುಜಾವರ ಮಾತನಾಡಿ, ಗುರುವಾರ ಸುಣ್ಣ ಹಚ್ಚುವ ಕಾರ್ಯಕ್ರಮ, ಶುಕ್ರವಾರ ರಾತ್ರಿ 10 ಗಂಟೆಗೆ ಪೀರ್ ಹಾಜಿಮಸ್ತಾನ್ ದರ್ಗಾದಿಂದ ಮೆರವಣಿಗೆಯೊಂದಿಗೆ ಹನುಮಾನ ಗುಡಿಯಿಂದ ಗಂಧ ತೆಗೆದುಕೊಂಡು ಬರುವುದು. ಫೆ.16. ರಂದು ಬೆಳಗ್ಗೆ 5 ಗಂಟೆಯಿಂದ ಮಹಾಪೂಜೆ, ನೈವೇದ್ಯ, ಸಂಜೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮತ್ತು ಗ್ರಾ.ಪಂ. ವತಿಯಿಂದ ಗಲೀಫ್ ತರುವುದು.

ರಾತ್ರಿ 9.30 ಕ್ಕೆ ದರ್ಗಾದ ಆವರಣದಲ್ಲಿ ಪತ್ರಕರ್ತ ಜಗದೀಶ ಖೊಬ್ರಿ ರಚಿಸಿ, ನಿರ್ದೇಶಿಸಿದ ಮನೆಹೊಕ್ಕ ಮಿಡಿ ನಾಗರ ಎಂಬ ಸಾಮಾಜಿಕ ನಾಟಕ ಪ್ರದರ್ಶನದೊಂದಿಗೆ ಜಾತ್ರೆ ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿದರು.