21 C
Bengaluru
Thursday, January 23, 2020

ಮಕ್ಕಳ ಕೂದಲ ಪೋಷಣೆಗೆ ಇಲ್ಲಿವೆ ಕೆಲ ಮನೆ ಮದ್ದುಗಳು

Latest News

ಮೊಕದ್ದಮೆ ಹಿಂಪಡೆಯಲು ಒತ್ತಾಯ

ಮೈಸೂರು: ಮಾನಸಗಂಗೋತ್ರಿಯಲ್ಲಿ ಎನ್‌ಆರ್‌ಸಿ, ಸಿಎಎ ವಿರೋಧಿಸಿ ನಡೆದ ಪ್ರತಿಭಟನೆ ಸಂದರ್ಭ ‘ಫ್ರೀ ಕಾಶ್ಮೀರ’ ಫಲಕ ಪ್ರದರ್ಶನಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಮೇಲೆ ಹೂಡಿರುವ ಮೊಕದ್ದಮೆ...

ವಿದ್ಯಾಭ್ಯಾಸದ ಸಂದರ್ಭ ಪ್ರತಿಭಟನೆ ಬೇಡ

ಮೈಸೂರು: ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದಲ್ಲಿ ವಿಶ್ವವಿದ್ಯಾಲಯಗಳ ಒಳಗೆ ಬಗೆಹರಿಸಿಕೊಳ್ಳಬೇಕೇ ಹೊರತು, ವಿದ್ಯಾಭ್ಯಾಸದ ಸಂದರ್ಭದಲ್ಲಿ ಪ್ರತಿಭಟನೆಗಳಿಗೆ ಮುಂದಾಗಬಾರದು ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್...

ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಜಾರಿಗೊಳಿಸಿ

ಮೈಸೂರು: ವಿಧಾನಸಭೆ, ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಮೀಸಲಾತಿ ಜಾರಿಗೊಳಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು. ಕರ್ನಾಟಕ ಪ್ರದೇಶ ಮಹಿಳಾ...

ಕೇಂದ್ರದ ಬಿಜೆಪಿ ಸರ್ಕಾರ ಬಿದ್ದ ದಿನ ಪೌರತ್ವ ತಿದ್ದುಪಡಿ ಕಾಯ್ದೆಯೂ ರದ್ದಾಗುತ್ತದೆ: ನಿವೃತ್ತ ಐಎಎಸ್​ ಅಧಿಕಾರಿ ಕಣ್ಣನ್​ ಗೋಪಿನಾಥನ್​

ಧಾರವಾಡ: ಪೌರತ್ವ ತಿದ್ದುಪಡಿ ಕಾಯ್ದೆ ಇಡೀ ರಾಷ್ಟ್ರಕ್ಕೆ ಸಂಬಂಧಿಸಿದ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳಲ್ಲೂ ಹೋರಾಟ ತೀವ್ರಗೊಂಡಿದೆ ಎಂದು ನಿವೃತ್ತ ಐಎಎಸ್​ ಅಧಿಕಾರಿ ಕಣ್ಣನ್​...

ಕಾಲೇಜ್ ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ

ಹಾವೇರಿ: ಇಲ್ಲಿನ ಪಿಬಿ ರಸ್ತೆಯಲ್ಲಿರುವ ಜಿಎಚ್ ಕಾಲೇಜ್​ನಲ್ಲಿ ಹೆಜ್ಜೇನು ದಾಳಿಯಿಂದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದೆ.

ಮಕ್ಕಳ ಆರೋಗ್ಯದ ಬಗ್ಗೆ ಪಾಲಕರಿಗೆ ಯಾವಾಗಲೂ ಕಾಳಜಿ ಇದ್ದದ್ದೆ. ಅದರಲ್ಲೂ ತಲೆಗೆ ಎಣ್ಣೆ ಹಚ್ಚದೆ ಹಠ ಮಾಡುವ ಮಕ್ಕಳ ಬಗ್ಗೆ ಇನ್ನಿಲ್ಲದ ಚಿಂತೆ. ಅದರಿಂದ ಕಣ್ಣಿಗೂ ತೊಂದರೆ ಎನ್ನುವ ಮನೆಯ ಹಿರಿಯರ ಮಾತು ಕೇಳದವರು ಯಾರು?

ಇಂತಹ ಸಮಸ್ಯೆಗೆ ಮನೆಯಲ್ಲಿಯೇ ಇರುವ ಕೆಲ ವಸ್ತುಗಳನ್ನು ಬಳಸಿ ಮಕ್ಕಳ ಕೂದಲ ಪೋಷಣೆ ಹೇಗೆ ಮಾಡಬಹುದು ಎನ್ನುವುದಕ್ಕೆ ಇಲ್ಲಿವೆ ಕೆಲ ಟಿಪ್ಸ್​ಗಳು.

ಈಗಂತೂ ಹದಿಹರೆಯಕ್ಕೆ ಕಾಲಿಡುವ ಮುನ್ನವೇ ಚಿಕ್ಕ ವಯಸ್ಸಿಗೆ ಮಕ್ಕಳ ಕೂದಲು ಬಿಳಿಯಾಗ ತೊಡಗುತ್ತವೆ. ದೊಡ್ಡವರಾದರೆ ಅವಕ್ಕೆ ಬಣ್ಣ ಹಚ್ಚಿ ಕಪ್ಪಾಗಿಸಿಕೊಳ್ಳಬಹುದು. ಆದರೆ, ಮಕ್ಕಳಿಗೆ ರಾಸಾಯನಿಕಯುಕ್ತ ಬಣ್ಣ ಹಚ್ಚಲು ಮನಸ್ಸು ಬಾರದು.

ಇಂತಹ ಸಂದರ್ಭದಲ್ಲಿ ಮನೆಯಲ್ಲಿಯೇ ಇರುವ ಕರಿಬೇವು, ನೆಲ್ಲಿಕಾಯಿ, ಕೊಬ್ಬರಿ ಎಣ್ಣೆ, ಮೊಸರುಗಳನ್ನು ಬಳಸಿ ಕೂದಲು ಬಿಳಿಯಾಗುವುದನ್ನು ತಡೆಯಬಹುದು. ಅಲ್ಲದೆ ಆರೋಗ್ಯವಾಗಿಯೂ ಇರಿಸಬಹುದು. ಮಕ್ಕಳಿಗೆ ಬರುವ ಬಿಳಿ ಕೂದಲು ವಂಶ ಪಾರಂಪರಿಕವಾಗಿಯೂ ಮತ್ತು ವಿಟಮಿನ್​ ಕೊರತೆಯಿಂದಲೂ ಬರಬಹುದು. ಅಲ್ಲದೆ ಥೈರಾಯ್ಡ್​ ಮತ್ತು ರಕ್ತಹೀನತೆಯಿಂದಲೂ ಬಿಳಿ ಕೂದಲಿಗೆ ಕಾರಣ ಎನ್ನಲಾಗುತ್ತದೆ.

ಈ ಎಲ್ಲ ಸಮಸ್ಯೆಗಳಿಂದ ಮಕ್ಕಳನ್ನು ದೂರ ಇಡಲು ಆಹಾರ ಪದ್ಧತಿಯಲ್ಲಿ ಕೊಂಚ ಬದಲಾವಣೆ ಅಗತ್ಯ. ಮೊದಲು ಮಕ್ಕಳನ್ನು ಜಂಕ್​ ಫುಡ್​, ಕರಿದ ಪದಾರ್ಥ, ಐಸ್​ ಕ್ರೀಂ ಹಾಗೂ ಚಾಕೋಲೆಟ್​ಗಳಿಂದ ದೂರವಿಡಿ. ಇದಕ್ಕಾಗಿ ಮಕ್ಕಳು ಹಠ ಮಾಡುತ್ತಾರೆ ನಿಜ. ಆದರೆ, ಇವುಗಳನ್ನು ಕೊಡಿಸುವ ಪ್ರಮಾಣ ತಗ್ಗಿಸುವುದು ಅವರ ಆರೋಗ್ಯಕ್ಕೆ ಒಳ್ಳೆಯದು ಅಲ್ಲವೆ.

ಮಕ್ಕಳಿಗೆ ಇಷ್ಟವಾಗುವ ಹಣ್ಣುಗಳನ್ನು ತಿನ್ನಿಸುವುದು ಜಂಕ್​ಫುಡ್​ನಿಂದ ಹೊರಬರಲು ಇರುವ ಒಂದು ದಾರಿ. ಜತೆಗೆ ಧಾನ್ಯಗಳು, ಹಸಿರು ತರಕಾರಿ, ಹಾಲು ಮತ್ತು ಹಾಲಿನ ಉತ್ಪನ್ನಗಳು ಮಕ್ಕಳ ಆರೋಗ್ಯ ರಕ್ಷಿಸಬಲ್ಲವು.

ಕೂದಲ ಪೋಷಣೆಗೆ ಇಲ್ಲಿವೆ ಕೆಲ ಟಿಪ್ಸ್​ಗಳು
1. ಕರಿಬೇವು: ಮನೆಯಲ್ಲಿ ಸಿಗುವ ಸಾಮಾನ್ಯ ವಸ್ತುವಿದು. ಕರಿಬೇವಿನ ಎಲೆಗಳನ್ನು ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಕುದಿಸಿ. ಎಲೆಗಳು ಕಪ್ಪಾಗುವವರೆಗೆ ಕುದಿಸಿ. ನಂತರ ಅದನ್ನು ಎಲೆ ಸಮೇತ ಮಕ್ಕಳ ತಲೆಗೆ ಹಚ್ಚಿ. ವಾರದಲ್ಲಿ ಮೂರರಿಂದ ನಾಲ್ಕು ಬಾರಿ ಹೀಗೆ ಮಾಡಿ. ಇದು ಮಕ್ಕಳ ಕೂದಲು ಬಿಳಿಯಾಗುವುದನ್ನು ತಪ್ಪಿಸುತ್ತದೆ.

2. ಮೊಸರು: ಸ್ನಾನ ಮಾಡಿಸುವ ಐದರಿಂದ ಹತ್ತು ನಿಮಿಷ ಮುನ್ನ ಮಕ್ಕಳ ಕೂದಲಿಗೆ ಮೊಸರನ್ನು ಹಚ್ಚಿ. ನಂತರ ಸ್ನಾನ ಮಾಡಿಸಿ. ಇದರಿಂದ ಕೂದಲು ಉದುರುವುದನ್ನು ತಡೆಯಬಹುದು. ಅಲ್ಲದೆ ಇದು ಕೂದಲ ಹೊಳಪನ್ನು ಹೆಚ್ಚಿಸುತ್ತದೆ.

3. ನೆಲ್ಲಿಕಾಯಿ: ಕೂದಲಿನ ಎಲ್ಲ ಸಮಸ್ಯೆಗಳಿಗೆ ಆಯುರ್ವೇದ ಸೂಚಿಸಿರುವ ಪ್ರಮುಖ ಮದ್ದು. ನೆಲ್ಲಿಕಾಯಿ ಮತ್ತು ಇದರ ಎಲೆಗಳನ್ನು ಎಣ್ಣೆಯಲ್ಲಿ ಕುದಿಸಿ ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವಿಕೆ ತಡೆಯಬಹುದು ಅಲ್ಲದೆ, ಹೊಳಪನ್ನೂ ಹೆಚ್ಚಿಸಬಹುದು. ನೆಲ್ಲಿಕಾಯಿಯ ನೀರನ್ನು ಕೂದಲು ತೊಳೆಯುವಾಗ ಬಳಸುವುದು ಉತ್ತಮ. ಬಾದಾಮಿ ಎಣ್ಣೆ ಮತ್ತು ನೆಲ್ಲಿಕಾಯಿ ಮಿಶ್ರಣದ ಬಳಕೆಯೂ ಉತ್ತಮ. ಈ ಮಿಶ್ರಣವನ್ನು ಹಚ್ಚಿ ರಾತ್ರಿಯಿಡೀ ಬಿಡಬಹುದು. ಇದು ಕೂಡ ವಾರದಲ್ಲಿ ಎರಡು ಮೂರು ಬಾರಿ ಮಾಡಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ.

4. ಬ್ಲಾಕ್​ ಟೀ: ನೀರನಲ್ಲಿ ಚಹ ಪುಡಿ ಹಾಕಿ ಕುದಿಸಿ. ನಂತರ ತಣ್ಣಗಾಗಲು ಬಿಡಿ, ಈ ಬ್ಲಾಕ್​ ಟೀಯನ್ನು ಸ್ನಾನ ಮಾಡಿಸುವ ಗಂಡೆಗೂ ಮುನ್ನ ಹಚ್ಚಿ. ಸ್ನಾನ ಮಾಡುವಾಗ ಶಾಂಪೂ ಬಳಕೆ ಬೇಡ. ಇದನ್ನು ವಾರದಲ್ಲಿ ಎರಡರಿಂದ ಮೂರು ಬಾರಿ ಮಾಡುವುದು ಉತ್ತಮ. (ಏಜೆನ್ಸಿಸ್​)

ವಿಡಿಯೋ ನ್ಯೂಸ್

VIDEO: ಮಾವುತನ ಊಟದ ಎಲೆಯಿಂದ ತುತ್ತು ಅನ್ನ ತಿಂದು, ನೆಟ್ಟಿಗರ...

ತಿರುವನಂತಪುರ: ಆನೆಗಳ ಆಟ, ದಾಳಿ, ಮರ ಹತ್ತುವುದು ಹೀಗೆ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಆದರೆ ಈಗ ವೈರಲ್​ ಆಗಿರುವ ಆನೆಯ ವಿಡಿಯೋ ಸಾಮಾಜಿಕ ಬಳಕೆದಾರರ ಮನಸ್ಸು ಗೆದ್ದಿದೆ. ಹಸಿದ...

VIDEO| ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ...

ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ...

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...